ರಾಜ್ಯದ ಪ್ರತಿಷ್ಠಿತ ಮಠದಲ್ಲಿ ಲೆಕ್ಕ ಪತ್ರ ವಿಚಾರಕ್ಕೆ ಗಲಾಟೆ: ಕೋಟ್ಯಂತರ ರೂ ಅವ್ಯವಹಾರ ಆರೋಪ

ರಾಜ್ಯದ ಪ್ರತಿಷ್ಠಿತ ಮಠದಲ್ಲಿ ಲೆಕ್ಕ ಪತ್ರ ವಿಚಾರಕ್ಕೆ ಗಲಾಟೆ: ಕೋಟ್ಯಂತರ ರೂ ಅವ್ಯವಹಾರ ಆರೋಪ


ರಾಜ್ಯದ ಪ್ರತಿಷ್ಠಿತ ಮಠದಲ್ಲಿ ಲೆಕ್ಕ ಪತ್ರ ವಿಚಾರಕ್ಕೆ ಗಲಾಟೆ: ಕೋಟ್ಯಂತರ ರೂ ಅವ್ಯವಹಾರ ಆರೋಪ

ದಾವಣಗೆರೆ, ಮಾರ್ಚ್ 12: ಹರಿಹರದ ಪಂಚಮಸಾಲಿ ಮಠ (ಹರಿಹರ ಪಂಚಮಸಾಲಿ ಪೀಠ) ರಾಜ್ಯದ ಪ್ರತಿಷ್ಠಿತ ಮಠ. ಈ ಮಠಕ್ಕೆ ಕೋಟ್ಯಂತರ ಭಕ್ತರಿದ್ದಾರೆ. ನಿತ್ಯ ದಾಸೋಹ ಕೂಡ ಶುರುವಾಗಿದೆ. ರಾಜ್ಯದ ಬಹುತೇಕ ಕಡೆ ಈ ಮಠದ ಆಸ್ತಿ ಇದೆ. ಇಂತಹ ಮಠದಲ್ಲಿ ಇದೀಗ ಲೆಕ್ಕ ಪತ್ರ ವಿಚಾರಕ್ಕೆ ಗಲಾಟೆ ಶುರುವಾಗಿದೆ. ಕೋಟ್ಯಂತರ ರೂ ಅವ್ಯವಹಾರ ನಡೆದಿದೆ. ಮಾತಿನ ಚಕಮಕಿ ವೇಳೆ ನೂಕಾಟ ತಳ್ಳಾಟ ಕೂಡ ನಡೆದಿದೆ. ಮೇಲಾಗಿ ಸರ್ಕಾರದಿಂದ ಬಂದ ಹಣವಾದರೂ ಎಲ್ಲಿ ಎಂಬ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರಿಸಿದೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಲಾಗಿದೆ.

ರಾಜ್ಯದ ಪ್ರತಿಷ್ಠಿತ ಹರಿಹರದ ಪಂಚಮಸಾಲಿ ಮಠದಲ್ಲಿ ಘಟನೆ ನಡೆದಿದೆ. ಇದರಲ್ಲಿ ಆರೋಪಿ ಸ್ಥಳದಲ್ಲಿ ಇರುವರು ದಾವಣಗೆರೆಯ ಬಿ.ಎಸ್ ಚನ್ನಬಸಪ್ಪ ಆಯಂಡ್ ಸನ್ಸ್ ಮಾಲೀಕ ಹಾಗೂ ಪ್ರಧಾನ ಮಠದ ಧರ್ಮದರ್ಶಿ ಬಿಸಿ ಉಮಾಪತಿ, ಬಿಜೆಪಿ ಮುಖಂಡ ಚಂದ್ರಶೇಖರ ಪೂಜಾರ ಹಾಗೂ ಕಾರ್ಯದರ್ಶಿ ಕೆಎಂ ಜ್ಯೋತಿ ಪ್ರಕಾಶ್.

ಇದನ್ನೂ ಓದಿ: 20 ವರ್ಷದ ಹಿಂದೆಯೇ 16,700 ರೂ ಕಟ್ಟಿದ್ರೂ ಇದುವರೆಗೂ ಒಂದು ಖಾತೆ ಸಿಕ್ಕಿಲ್ಲ, ಈ ಅಧಿಕಾರಿಗಳ ಕಾರ್ಯವೈಖರಿ

ಮಾರ್ಚ್ 10 ರಂದು ರಾತ್ರಿ 7 ರಿಂದ 9 ಗಂಟೆ ವೇಳೆಗೆ ಗಲಾಟೆ ನಡೆದಿದೆ. ಈ ವೇಳೆ ಮಠದ ದಾಸೋಹದ ಉಸ್ತುವಾರಿ ಅಶೋಕ ಎಂಬುವವರ ಮೇಲೆ ಹಲ್ಲೆ ಮಾಡಿದರು. ಸಿಸಿ ಕ್ಯಾಮೆರಾ, ಹಾರ್ಡ್ ಡಿಸ್ಕ್ ಕಿತ್ತುಕೊಂಡು ಹೋಗುವುದನ್ನ ತಡೆಯಲು ಹೋದರೆ ಹಲ್ಲೆ ಮಾಡಿದ. ಇದಕ್ಕೆ ಮೂಲ ಕಾರಣ ಲೆಕ್ಕ ಪತ್ರದ ಕಿತಾಪತಿ. 2008ರಲ್ಲಿ ಹರಿಹರ ಪಂಚಮಸಾಲಿ ಗುರುಪೀಠ ಆರಂಭವಾಗಿದೆ. ಬರೋಬ್ಬರಿ 100 ಕೋಟಿ ರೂ ಹಣ ಬಂದಿದೆ. ಲೆಕ್ಕ ಕೊಡಿ ಅಂದರೆ ಹೀಗೆ ಹಲ್ಲೆ, ಜಗಳ ಮಾಡುವುದು, ಡಿವಿಆರ್ ಕಿತ್ತುಕೊಂಡು ಹೋಗುವುದು. ಚಂದ್ರಶೇಖರ ಪೂಜಾರ ಬೆಂಬಲಿಗರಿಂದ ಇಂತಹ ಕೃತ್ಯ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಸುದ್ದಿಗೋಷ್ಠಿಯಲ್ಲಿ ಗಲಾಟೆ

ಇಂದು ಮಠದ ಆಡಳಿತಾಧಿಕಾರಿ ಡಾ. ರಾಜಕುಮಾರ ಅವರು ಸುದ್ದಿಗೋಷ್ಠಿ ಮಾಡಿದ್ದು, ಆ ವೇಳೆ ಕೂಡ ಹೊನ್ನಾಳಿಯ ಕೆಲವರು ಗಲಾಟೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸೋಮಣ್ಣ ಬೇವಿನಮರದ, ರಾಣೆಬೊನ್ನೂರು ಮಾಜಿ ಶಾಸಕ ಅರುಣಕುಮಾರ ಸೇರಿದಂತೆ ಪ್ರಮುಖರು ಹಾಜರಾಗಿದ್ದರು. ರಾಜಕುಮಾರ ಅವರು ಆಡಳಿತಾಧಿಕಾರಿಯಾಗಿ ಎರಡು ವರ್ಷವಾಗಿದೆ. ಅವರಿಗೆ ಚೆಕ್ ಬುಕ್ ಕೊಟ್ಟಿಲ್ಲ. ಮಠದ ದಾಖಲೆ ಕೊಟ್ಟಿಲ್ಲ. ಮೇಲಾಗಿ ಮಠದ ಆಸ್ತಿ ವಿಚಾರ ಕೇಳಿದರೂ ಸಹ ಹೇಳುತ್ತಿಲ್ಲ.

7ರಿಂದ 8 ಕೋಟಿ ರೂ ಅವ್ಯವಹಾರ ಆರೋಪ

ಸರ್ಕಾರದಿಂದ ಮಠಕ್ಕೆ 11 ಕೋಟಿ ರೂ ಬಂದಿದೆ. ಇದರಲ್ಲಿ ಸಹ ಹಣ ಗೋಲ್ ಮಾಲ್ ಮಾಡಲಾಗಿದೆ. ಇತ್ತೀಚೆಗೆ ನಡೆದ ಮಠದ ಬಾವಿ ಬೆಟ್ಟಪ್ಪ ಅವರು ಹೇಳಿದಂತೆ 7ರಿಂದ 8 ಕೋಟಿ ರೂ. ಮೇಲಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಶಿಗ್ಗಾವಿಯಲ್ಲಿ ಎರಡು ಅಂಗಡಿ ಹಾಗೂ ಬಸವರಾಜ್ ಬೊಮ್ಮಾಯಿ ಅವರು ಒಟ್ಟು ನಾಲ್ಕು ಭೂಮಿಯನ್ನು ನೀಡಿದರು. ಆದರೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಭೂಮಿ ಎಲ್ಲಿದೆ ಎಂಬ ಮಾಹಿತಿ ನೀಡುತ್ತಿಲ್ಲ. ಹೀಗೆ ಹತ್ತಾರು ಅವ್ಯವಹಾರ ಮಾಡಿ ಈಗ ಸ್ವಾಮೀಜಿಗಳ ಬಗ್ಗೆ ಮಾತಾಡುತ್ತಿದ್ದಾರೆ. ಸ್ವಾಮೀಜಿಗೆ ಚೆಕ್ ಸಹಿ ಅಧಿಕಾರವಿಲ್ಲ. ಮಠದಿಂದ ಒಂದು ರೂ ಪಡೆದಿಲ್ಲ. ಬಗ್ಗೆ ಮಾತನಾಡಿದರೆ ಪ್ರತಿಭಟನೆ ಮಾಡಲು ಇವರ ಸಮಾಜವನ್ನು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಗದಗದಲ್ಲಿ ನಕಲಿ ಲಾಟರಿ ಜಾಲ ಸಕ್ರಿಯ: ಕೇರಳ ಸರ್ಕಾರದ ಚಿಹ್ನೆ ದುರ್ಬಳಕೆ ಮಾಡಿ ವಂಚನೆ ಆರೋಪ

ತಿಂಗಳಿಗೆ ಮಠದ ಖರ್ಚು 4 ಲಕ್ಷ ರೂ. ಬಾಕಿ 20 ತಿಂಗಳ ಹಣ ಪಡೆಯಲಾಗಿದೆ. ಮಠಕ್ಕೆ ಸಂಬಂಧಿಸಿದ 14 ಖಾತೆಗಳು ಬ್ಯಾಂಕ್ನಲ್ಲಿವೆ. ಇವುಗಳಲ್ಲಿ ಕೇವಲ 17 ಲಕ್ಷ ರೂ ಇದೆ. ಈಗ ಹೊಸ ಆಡಳಿತಾಧಿಕಾರಿ ಬಂದ ಬಳಿಕ ಒಂದುವರೆ ಕೋಟಿ ರೂ ಹಣ ಠೇವಣಿ ಇಡಲಾಗಿದೆ. ಬಂದ ಬಡ್ಡಿಯಲ್ಲಿ ದಾಸೋಹ ಮಾಡಲಾಗುತ್ತಿದೆ. ಆದರೆ ಈ ಹಿಂದೆ ಯಾರ ಕಡೆ ಹಣ ತೆಗೆದುಕೊಂಡಿದ್ದಾರೆ ಪಟ್ಟಿ ಕೊಡಿ ಅಂದರೆ ಕೊಡುತ್ತಿಲ್ಲ. ಒಟ್ಟಾರೆ ಪಂಚಮಸಾಲಿ ಮಠದಲ್ಲಿ ಕೆಲ ಪ್ರಭಾವಿಗಳು ಸೇರಿ ಕೋಟ್ಯಂತರ ರೂ ಗೋಲ್ ಮಾಲ್ ಮಾಡಿದ ಆರೋಪ ಕೇಳಿ ಬರುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *