
ಇಂದು ಸಂಜೆ ಮಹಾಲಕ್ಷ್ಮಿಯ ಮುಂದೆ ತುಪ್ಪದ ದೀಪ ಹಚ್ಚಿ “ಲಕ್ಷ್ಮಿ ಅಷ್ಟೋತ್ತರ” ಪಠಿಸುವುದು ಆರ್ಥಿಕ ಒತ್ತಡ ಕಡಿಮೆ ಮಾಡಲು ಸಹಕಾರಿ.
ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ನಿಮ್ಮ ಧೈರ್ಯದ ತೀರ್ಮಾನ ಈ ದಿನ ಉತ್ತಮವಾದ ಫಲ ನೀಡಲಿದೆ. ನಿಮ್ಮನ್ನು ಎಚ್ಚರಿಸಿ, ಯಾವುದನ್ನು ಮಾಡಬಾರದು ಎಂದು ಹೇಳಿರುತ್ತಾರೋ ಅದೇ ಲಾಭದಾಯಕವಾಗಿ ಮಾರ್ಪಡಲಿದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕು ಅಂದರೆ, ತಮ್ಮಿಂದ ಮಾಡಲು ಸಾಧ್ಯವಿಲ್ಲ ಎಂದು ಕೈಬಿಟ್ಟ ಕೆಲಸವನ್ನು ನೀವು ಯಶಸ್ವಿಯಾಗಿ ಮತ್ತು ಲಾಭದಾಯಕವಾಗಿಯೂ ಮಾಡಿ ಮುಗಿಸಿದ್ದೀರಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ನಿಮಗೆ ನೀವೇ ದೊಡ್ಡ ಮಟ್ಟದ ಬೆಂಚ್ ಹಾಕಿಕೊಂಡು ಅದನ್ನು ನಿಮ್ಮಿಂದ ಮಾಡುವುದಕ್ಕೆ ಸಾಧ್ಯವೇ ಎಂಬ ಪ್ರಶ್ನೆಗಳನ್ನು ಇಟ್ಟುಕೊಳ್ಳುವುದಕ್ಕೆ ಹೋಗಬೇಡಿ. ಆಸ್ತಿ- ಜಮೀನು ವಿಚಾರದಲ್ಲಿ ವ್ಯಾಜ್ಯಗಳು ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ದಾರಿಗಳು ಗೋಚರವಾಗಲಿವೆ. ನಿಮ್ಮಲ್ಲಿ ಕೆಲವರಿಗೆ ರಾಜೀ- ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂಥ ಅವಕಾಶಗಳಿವೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ಹಣಕಾಸಿನ ವಿಚಾರದಲ್ಲಿ ಯಾರು ವಿಪರೀತ ಒತ್ತಡದ ಸನ್ನಿವೇಶಗಳನ್ನು ಎದುರಿಸುತ್ತಿದ್ದಾರೆ ಅಂತಹವರಿಗೆ ಹೊರಬರಲು ಸಹಾಯ ಮಾಡುವ ಸಾಧ್ಯತೆಯಿದೆ. ಅಥವಾ ಒಂದು ವೇಳೆ ನಿಮ್ಮದೇ ವ್ಯವಹಾರಗಳು ಅಥವಾ ವ್ಯಾಪಾರದಲ್ಲಿ ಬರಬೇಕಾದ ಹಣವು ಬಾಕಿ ನಿಂತಿದ್ದರೆ ಅದನ್ನು ವಾಪಸ್ ಪಡೆಯುವುದಕ್ಕೆ ಅವಕಾಶಗಳಿವೆ. ಉದ್ಯೋಗ ವಿಚಾರವಾಗಿ ಯಾರಾದರೂ ಹೊಸ ಆಫರ್ ಹೇಳಿದರೆ ಅದನ್ನು ಗಂಭೀರವಾಗಿ ಪರಿಗಣಿಸಿ.
ಲೇಖನ- ಸ್ವಾತಿ ಎನ್.ಕೆ.