
ಟಾಲಿವುಡ್ ಸ್ಟಾರ್ ಹೀರೋಗಳು ಈಗಾಗಲೇ ಮಲ್ಟಿಪ್ಲೆಕ್ಸ್ ಚೈನ್ ಅನ್ನು ಹೊಂದುತ್ತಿದ್ದಾರೆ. ವಿಜಯ್ ದೇವರಕೊಂಡ, ಮಹೇಶ್ ಬಾಬು ಇನ್ನೂ ಆದ ಮಲ್ಟಿಪ್ಲೆಕ್ಸ್. ಈಗ ಅಲ್ಲು ಅರ್ಜುನ್ (ಅಲ್ಲು ಅರ್ಜುನ್) ಕೂಡ ಈ ಉದ್ಯಮದಲ್ಲಿ ಹೊಸ ಹೆಜ್ಜೆ ಇಟ್ಟಿದ್ದು, ಹೈದರಾಬಾದ್ ಅಲ್ಲಿ ಅಲ್ಲು ಸಿನಿಮಾಸ್ ಶುರುವಾಗಿದೆ. ಗುರುವಾರ (ಮಾರ್ಚ್ 12) ಇದರ ಉದ್ಘಾಟನೆಯಾಗಿದೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಇದನ್ನು ಲೋಕಾರ್ಪಣೆ ಮಾಡಿದರು. ಅಲ್ಲು ಅರ್ಜುನ್ ಅವರಿಗೆ ಸಿಎಂ ಹೊಗಳಿದ್ದಾರೆ.
‘ಅಲ್ಲು ಅರ್ಜುನ್ ಭವಿಷ್ಯದಲ್ಲಿ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಹಾಲಿವುಡ್ ನಲ್ಲೂ ಮಿಂಚಬೇಕು. ತೆಲುಗು ನಟರ ಪ್ರತಿಭೆ ಅಲ್ಲಿಗೂ ತಲುಪಬೇಕು. ಇಲ್ಲಿಯವರೆಗೆ, ನಾವು ನಮ್ಮ ತೆಲುಗು ಸಿನಿಮಾಗಳಿಗೆ ಹೋಲಿಸಿದಾಗ ಕಲೆಕ್ಷನ್ ವಿಷಯದಲ್ಲಿ ಮಾತ್ರ’ ಎಂದು ರೇವಂತ್ ರೆಡ್ಡಿ ಹೇಳಿದರು.
ವರ್ಷಗಳು ಕಳೆದಂತೆ ಭಾರತದ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಇನ್ನುಮುಂದೆ ಎಲ್ಲಾ ಭಾಷೆಯ ಸಿನಿಮಾಗಳು, ಎಲ್ಲರನ್ನೂ ತಲುಪುತ್ತವೆ ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ. ಕಥೆ ಚೆನ್ನಾಗಿದ್ದರೆ ದೇಶದ ಜನ ಇರಲಿ, ಯಾವ ರಾಜ್ಯದ ಜನ ಇರಲಿ ಸಿನಿಮಾ ನೋಡುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿ @revanth_anumula ಕೋಕಾಪೇಟ್ನಲ್ಲಿ ಹೊಚ್ಚಹೊಸ ಅಲ್ಲು ಚಿತ್ರಮಂದಿರಕ್ಕೆ ಬಾಗಿಲು ತೆರೆಯಿತು. ಮುಂತಾದ ನಾಯಕರು ಸುತ್ತುವರಿದಿದ್ದಾರೆ @ಭಟ್ಟಿ_ಮಲ್ಲು ಮತ್ತು ಅಲ್ಲು ಕುಟುಂಬದವರು, ಸಿನಿಮಾಗಳ ಮೇಲಿನ ತಮ್ಮ ವೈಯಕ್ತಿಕ ಪ್ರೀತಿ ಮತ್ತು ಮನರಂಜನೆಯ ಜಗತ್ತಿನಲ್ಲಿ ಕ್ಷಿಪ್ರ ತಂತ್ರಜ್ಞಾನದ ವಿಕಾಸದ ಬಗ್ಗೆ ಸಿಎಂ ಮಾತನಾಡಿದರು.
ಕೋಕಾಪೇಟ್ ಈಗಷ್ಟೇ ಪಡೆದುಕೊಂಡಿದೆ… pic.twitter.com/keprCgXWtz— ಹರ್ಷ ವೇದುಲ (@SriHarsha1995) ಮಾರ್ಚ್ 12, 2026
‘ಹಾಲಿವುಡ್‌ನೊಂದಿಗೆ ಟಾಲಿವುಡ್ ಸ್ಪರ್ಧಿಬೇಕೆ ಹೊರತು, ನೆರೆಯ ರಾಜ್ಯಗಳು ಅಥವಾ ಬಾಲಿವುಡ್‌ನೊಂದಿಗೆ ಇನ್ನು ಮುಂದೆ ಬಳಸಬಾರದು’ ಎಂದು ಅವರು ಹೇಳಿದ್ದಾರೆ. ಚಿತ್ರರಂಗಕ್ಕೆ ಬೆಂಬಲ ನೀಡುವುದಾಗಿ ಅವರು ಸಂಪೂರ್ಣ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಹೊಸ ಉದ್ಯಮಕ್ಕೆ ಕೈ ಹಾಕಿದ ಅಲ್ಲು ಅರ್ಜುನ್, ಮಹೇಶ್ ಬಾಬುಗೆ ಠಕ್ಕರ್
ಅಲ್ಲು ಅರ್ಜುನ್ ಅವರು ವಿವಿಧ ಉದ್ಯಮಗಳನ್ನು ಹೊಂದಿದ್ದಾರೆ. ಇದರ ಜೊತೆಗೆ ಕ್ಷೇತ್ರದಲ್ಲೂ ಅವರು ಬಿಸ್ನೆಸ್ ಆರಂಭಿಸಿದ್ದಾರೆ. ಅಲ್ಲು ಸಿನಿಮಾಸ್ ನಿರ್ಮಾಣ ಮಾಡುವ ಮೂಲಕ ಅವರು ಹೊಸ ಹೆಜ್ಜೆ ಇಟ್ಟಿದ್ದಾರೆ. ಸದ್ಯ ಅವರು AA22xA6 ಸಿನಿಮಾ ಕೆಲಸಗಳಲ್ಲಿ ಬ್ಯೂಸಿ ಇದ್ದಾರೆ. ಅಟ್ಲೀ ಇದರ ನಿರ್ದೇಶಕ. ದೀಪಿಕಾ ಪಡುಕೋಣೆ ಈ ಚಿತ್ರಕ್ಕೆ ನಾಯಕಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.