Shri Gandhada Gudi Serial: ಕೆಲ ದಿನಗಳಿಂದ ಜನಪ್ರಿಯ ವಾಹಿನಿಯ ಧಾರಾವಾಹಿಯಿಂದ ನಾಯಕಿಯೊಬ್ಬರು ಹೊರಗಡೆ ಬರುತ್ತಾರೆ ಎಂಬ ಪೋಸ್ಟ್ ಹರಿದಾಡುತ್ತಿತ್ತು. ಈಗ ಯಾವ ಧಾರಾವಾಹಿ ಎಂದು ರಿವೀಲ್ ಆಗಿದೆ. ಹೌದು, ಗಂಧದಗುಡಿ ಧಾರಾವಾಹಿಯಿಂದ ಹೀರೋಯಿನ್ ಬದಲಾವಣೆ ಆಗಿದೆ.

ಗಂಧದಗುಡಿ ಧಾರಾವಾಹಿಯಿಂದ ಹೀರೋಯಿನ್ ಔಟ್ ಆಗಿದ್ದಾರೆ. ಹೌದು, ನಟಿ ಸಂಜನಾ ಬುರ್ಲಿ ಅವರು ಹೊರಗಡೆ ಬಂದಿದ್ದಾರೆ. ಇದಕ್ಕೂ ಕಾರಣ ಇದೆ.

ಗಂಧದಗುಡಿ ಧಾರಾವಾಹಿಗೆ ಒಳ್ಳೆಯ ರೇಟಿಂಗ್ಸ್ ಕೂಡ ಇದೆ. ಅಂದಹಾಗೆ ಸದ್ಯ ಹೀರೋಯಿನ್ ಚಂದನಾ ಸುತ್ತವೇ ಕಥೆ ಕೂಡ ಸಾಗುತ್ತಿದೆ.

ಚಂದನಾ ಪಾತ್ರದಲ್ಲಿ ನಟಿ ಸಂಜನಾ ಬುರ್ಲಿ ಅವರು ನಟಿಸುತ್ತಿದ್ದಾರೆ. ಈ ಸೀರಿಯಲ್ ಶುರುವಾಗಿ 156 ಎಪಿಸೋಡ್ಗಳು ಪ್ರಸಾರ ಆಗಿವೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸಂಜನಾ ಬುರ್ಲಿ ಅವರು ಹೊರಗಡೆ ಬಂದಿದ್ದರು. ಆಗ ಶಿಕ್ಷಣದ ವಿಚಾರವಾಗಿ ಹೊರಗಡೆ ಬಂದಿದ್ದರು. ಈಗಲೂ ಬಲವಾದ ಕಾರಣವಿದೆ.

ನಟಿ ಸಂಜನಾ ಬುರ್ಲಿ ಅವರು ಇತ್ತೀಚೆಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ಮಾರ್ಚ್ ತಿಂಗಳಿನಲ್ಲಿ ಮದುವೆ ಆಗುವುದಾಗಿಯೂ ಹೇಳಿದ್ದರು. ಈ ಕಾರಣಕ್ಕಾಗಿ ಅವರು ಸೀರಿಯಲ್ನಿಂದ ಹೊರಬಂದರೂ ಆಶ್ಚರ್ಯವಿಲ್ಲ.

ತಿಂಗಳಿನಲ್ಲಿ 20 ದಿನ ಶೂಟಿಂಗ್ ಇರುವುದು, ಇವರ ಮದುವೆ ಡೇಟ್ ಕೂಡ ಹತ್ತಿರ ಇದೆ ಎಂದು ಕಾಣಿಸುತ್ತದೆ. ಇದರ ಜೊತೆಗೆ ಸಂಜನಾ ಅವರು ಶಿಕ್ಷಣವನ್ನು ಕೂಡ ಮುಂದುವರೆಸಿದಂತಿದೆ. ಈ ಕಾರಣ ಕೂಡ ಇರಬಹುದು. ಈ ಬಗ್ಗೆ ಸೀರಿಯಲ್ ತಂಡವಾಗಲೀ, ಸಂಜನಾ ಅವರಾಗಲೀ ಏನೂ ಹೇಳಿಲ್ಲ.

ಇನ್ನು ಸಂಜನಾ ಬುರ್ಲಿ ಜಾಗಕ್ಕೆ ಹೊಸ ನಟಿಯ ಎಂಟ್ರಿಯಾಗಿದೆ. ರಾಮಾಚಾರಿ ಹಾಗೂ ಶುಭಸ್ಯ ಶೀಘ್ರಂ ಧಾರಾವಾಹಿಯಲ್ಲಿ ನಟಿಸಿದ್ದ ಸ್ನೇಹಾ ಮಂಜುನಾಥ್ ಅವರು ಸೀರಿಯಲ್ಗೆ ನಾಯಕಿ ಎನ್ನಲಾಗಿದೆ.

Source link
150 ಎಪಿಸೋಡ್ಗೆ ಗಂಧದ ಗುಡಿ ಧಾರಾವಾಹಿಯಿಂದ ಹೊರಬಂದ ನಟಿ ಸಂಜನಾ ಬುರ್ಲಿ; ಹೊಸ ನಟಿ ಎಂಟ್ರಿ; ಇದೆ ಬಲವಾದ ಕಾರಣ