
ಅಲ್ಲು ಅರ್ಜುನ್ ಅವರು (ಅಲ್ಲು ಅರ್ಜುನ್) ಸಿನಿಮಾ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ‘ಅಲ್ಲು ಸಿನಿಮಾಸ್’ ಮಲ್ಟಿಪ್ಲೆಕ್ಸ್ನ ಹೈದರಾಬಾದ್ನಲ್ಲಿ ಪ್ರಾರಂಭವಾಗಿದೆ. ಐಷಾರಾಮಿ ಆಸನ ವ್ಯವಸ್ಥೆ ಹಾಗೂ ಅದ್ಭುತ ಸಿನಿಮಾ ವೀಕ್ಷಣೆ ಅನುಭವ ನೀಡುವ ಈ ಮಲ್ಟಿಪ್ಲೆಕ್ಸ್ ಗುರುವಾರ (ಮಾರ್ಚ್ 12) ಉದ್ಘಾಟನೆಯಾಯಿತು. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಇದನ್ನು ಲೋಕಾರ್ಪಣೆ ಮಾಡಿದರು. ಈ ಥಿಯೇಟರ್ನ ವಾಲ್ ಆಫ್ ಫೇಮ್ ಅಲ್ಲಿ ಕನ್ನಡದ ಇಬ್ಬರು ನಿರ್ದೇಶಕರ ಫೋಟೋ ಇದೆ ಎಂಬುದು ವಿಶೇಷ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.
ಅಲ್ಲು ಅರ್ಜುನ್ ಅವರು ಹೈದರಾಬಾದ್ ನವರು. ಅಲ್ಲಿಯ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರು ಟಾಲಿವುಡ್ನ ಯಶಸ್ವಿ ನಿರ್ಮಾಪಕ ಮತ್ತು ವಿತರಕ. ನಿರ್ಮಾಣ ಸಂಸ್ಥೆ, ಒಟಿಟಿ, ಸ್ಟುಡಿಯೋಗಳನ್ನು ಅಲ್ಲು ಕುಟುಂಬ ಹೊಂದಿದೆ. ಇದೀಗ ಹೊಸ ಉದ್ಯಮವನ್ನು ಅಲ್ಲು ಅರ್ಜುನ್ ಆರಂಭಿಸಿದ್ದಾರೆ. ಇದು ಹೈದರಾಬಾದ್ನಲ್ಲಿ ವಿಜಯ್ ದೇವರಕೊಂಡ ಒಡೆತನದ ಎವಿಡಿ ಸಿನಿಮಾಸ್ ಹಾಗೂ ಮಹೇಶ್ ಬಾಬು ಒಡೆತನದ ಎಂಬಿ ಸಿನಿಮಾಸ್ ಗೆ ಸ್ಪರ್ಧೆ ಒಡ್ಡಲಿದೆ.
ಅಲ್ಲು ಚಿತ್ರಮಂದಿರದಲ್ಲಿ ದಿ ವಾಲ್ ಆಫ್ ಗ್ರೇಟ್ಸ್ ನಲ್ಲಿ ಅಟ್ಲೀ.
ದಂತಕಥೆಗಳ ನಡುವೆ ಇರಲು ಅವರು ಏನು ಮಾಡಿದ್ದಾರೆ
pic.twitter.com/4z0UOAuQXs— bk9 (@Rt234981) ಮಾರ್ಚ್ 12, 2026
ಇನ್ನು, ಅಲ್ಲು ಅರ್ಜುನ್ ಅವರು ‘ಅಲ್ಲು ಸಿನಿಮಾಸ್’ ಅಲ್ಲಿ ವಾಲ್ ಆಫ್ ಫೇಮ್ ನಿರ್ಮಿಸಿದ್ದಾರೆ. ಇದರಲ್ಲಿ ಹಲವು ನಿರ್ದೇಶಕರ ಫೋಟೋಗಳನ್ನು ಹಾಕಲಾಗಿದೆ. ತೆಲುಗು ನಿರ್ದೇಶಕರಾದ ಸುಕುಮಾರ್, ತ್ರಿವಿಕ್ರಮ್ ಶ್ರೀನಿವಾಸ್, ರಾಜಮೌಳಿ, ತಮಿಳಿನ ವೆಟ್ರಿ ಮಾರನ್, ಮಣಿ ರತ್ನಂ, ಅಟ್ಲಿ, ಹಿಂದಿಯಲ್ಲಿ ಸಂದೀಪ್ ರೆಡ್ಡಿ ವಂಗ, ರಾಜ್ ಕುಮಾರ್ ಹಿರಾನಿ ಇದ್ದಾರೆ.
ಇದನ್ನೂ ಓದಿ: ಓಪನ್ ಆಯ್ತು ಅಲ್ಲು ಸಿನಿಮಾಸ್; ಅಲ್ಲು ಅರ್ಜುನ್ಗೆ ಹಾಲಿವುಡ್ ಸಿನಿಮಾ ಮಾಡಿ ಎಂದ ಸಿಎಂ
ಕನ್ನಡದ ಇಬ್ಬರು ನಿರ್ದೇಶಕರ ಫೋಟೋಗಳನ್ನು ಹಾಕಲಾಗಿದೆ. ಅದುವೇ ಪ್ರಶಾಂತ್ ನೀಲ್ ಹಾಗೂ ರಿಷಬ್ ಶೆಟ್ಟಿ. ಇದು ಕನ್ನಡಿಗರ ಪಾಲಿಗೆ ಹೆಮ್ಮೆ ಎನಿಸಿದೆ. ಇಬ್ಬರೂ ನಿರ್ದೇಶಕರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆಯನ್ನು ಹೊಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.