Headlines

ಹೈದರಾಬಾದ್​​ನಲ್ಲಿ ಸ್ಟುಡಿಯೋ ಪ್ರಾರಂಭಿಸಿದ ನೆಟ್​ಫ್ಲಿಕ್ಸ್: ವಿಶೇಷತೆಯೇನು?

ಹೈದರಾಬಾದ್​​ನಲ್ಲಿ ಸ್ಟುಡಿಯೋ ಪ್ರಾರಂಭಿಸಿದ ನೆಟ್​ಫ್ಲಿಕ್ಸ್: ವಿಶೇಷತೆಯೇನು?


ಹೈದರಾಬಾದ್‌ನಲ್ಲಿ ಸ್ಟುಡಿಯೋ ಪ್ರಾರಂಭಿಸಿದ ನೆಟ್‌ಫ್ಲಿಕ್ಸ್: ವಿಶೇಷತೆಯೇನು?

ನೆಟ್ಫ್ಲಿಕ್ಸ್ (ನೆಟ್ಫ್ಲಿಕ್ಸ್), ವಿಶ್ವದ ಒಟಿಟಿ ದೈತ್ಯ. ನೆಟ್‌ಫ್ಲಿಕ್ಸ್‌ಗಿಂತ ಹೆಚ್ಚು ಕಾಂಟೆಂಟ್ ಹೊಂದಿರುವ, ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಹೊಂದಿರುವ ಒಟಿಟಿಗಳು ಇವೆಯಾದರೂ ನೆಟ್‌ಫ್ಲಿಕ್ಸ್‌ನಷ್ಟು ಲಾಭದಾಯಕ ಒಟಿಟಿ ಇನ್ಯಾವುದೂ ಸಹ ಇಲ್ಲ. ಇತ್ತೀಚೆಗಷ್ಟೇ ಲಕ್ಷಾಂತರ ಕೋಟಿ ಕೊಟ್ಟು ವಾರ್ನರ್ ಬ್ರದರ್ಸ್ ನಿರ್ಮಾಣ ಸಂಸ್ಥೆಯನ್ನು ಖರೀದಿಸಲು ಮುಂದಾಗಿತ್ತು ನೆಟ್ಫ್ಲಿಕ್ಸ್. ಈ ಒಟಿಟಿ ದೈತ್ಯ, ಭಾರತದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದು, ಭಾರತದ ಕಾಂಟೆಂಟ್ ಮೇಲೆ ಸಾವಿರಾರು ಕೋಟಿ ಹೂಡಿಕೆ ಮಾಡಿದೆ. ಅದರಲ್ಲೂ ದಕ್ಷಿಣದ ಸಿನಿಮಾ ರಂಗದ ಮೇಲೆ ಭಾರಿ ಭರವಸೆ ನೆಟ್‌ಫ್ಲಿಕ್ಸ್‌ನಲ್ಲಿದೆ, ಇದೀಗ ಹೈದರಾಬಾದ್‌ನಲ್ಲಿ ವಿಶೇಷ ಸ್ಟುಡಿಯೋವನ್ನು ಸಹ ನಿರ್ಮಿಸಲಾಗಿದೆ.

ಹೈದರಾಬಾದ್‌ನಲ್ಲಿ ನೆಟ್‌ಫ್ಲಿಕ್ಸ್ ತನ್ನ ಪ್ರತಿಷ್ಠಿತ ‘ಐಲೈನ್ ಸ್ಟೂಡಿಯೋಸ್’ ಸ್ಟುಡಿಯೋ ನಿರ್ಮಾಣ ಮಾಡಿದೆ. ನೆಟ್ಫ್ಲಿಕ್ಸ್ ನ ಐದನೇ ಐಲನ್ ಸ್ಟುಡಿಯೋ ಕೇಂದ್ರವಾಗಿದೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಗುರುವಾರ ಹೈದರಾಬಾದ್‌ನಲ್ಲಿ ನೆಟ್‌ಫ್ಲಿಕ್ಸ್‌ನ ಈ ಪ್ರತಿಷ್ಠಿತ ‘ಐಲೈನ್ ಸ್ಟುಡಿಯೋಸ್’ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಹೈದರಾಬಾದ್‌ಗೆ ನೆಟ್‌ಫ್ಲಿಕ್ಸ್ ಬಂದಿರುವುದು ಎಂದರೆ ಹಾಲಿವುಡ್ ಹೈದರಾಬಾದ್‌ಗೆ ಬಂದಂತೆ” ಎಂದು ಬಣ್ಣಿಸಿದರು.

ನೆಟ್ ಫ್ಲಿಕ್ಸ್ ಈವರೆಗೆ ಲಾಸ್ ಏಂಜಲೀಸ್, ವ್ಯಾಂಕೋವರ್, ಲಂಡನ್ ಮತ್ತು ಸಿಯೋಲ್ ನಲ್ಲಿ ಮಾತ್ರವೇ ಐಲೈನ್ ಸ್ಟುಡಿಯೋಗಳನ್ನು ಹೊಂದಿತ್ತು. ಇದೀಗ ಹೈದರಾಬಾದ್‌ನಲ್ಲಿ ಪ್ರಾರಂಭವಾಗಿರುವ ಈ ಸ್ಟುಡಿಯೋ ನೆಟ್‌ಫ್ಲಿಕ್ಸ್‌ನ ವಿಶ್ವದ 5ನೇ ಅತಿದೊಡ್ಡ ವಿಎಫ್‌ಎಕ್ಸ್ (VFX) ಮತ್ತು ವರ್ಚುವಲ್ ಪ್ರೊಡಕ್ಷನ್ ಕೇಂದ್ರವಾಗಿದೆ. ಸುಮಾರು 32,000 ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಸ್ಟೂಡಿಯೋ ಅತ್ಯಾಧುನಿಕ ದೃಶ್ಯ ವೈಭವದ ತಂತ್ರಜ್ಞಾನವನ್ನು ಹೊಂದಿದೆ. ಇದು ತೆಲಂಗಾಣದ ಸ್ಥಳೀಯ ಕಲಾವಿದರು ಮತ್ತು ತಾಂತ್ರಿಕ ನುರಿತ ಯುವಕರಿಗೆ ಜಾಗತಿಕ ಮಟ್ಟದ ಉದ್ಯೋಗಾವಕಾಶಗಳನ್ನು ಒದಗಿಸಲಿದೆ. ಜೊತೆಗೆ ದಕ್ಷಿಣದ ಸಿನಿಮಾ, ವೆಬ್ ಸರಣಿಗಳಿಗೆ ನೆಟ್ ಫ್ಲಿಕ್ಸ್ ಇನ್ನಷ್ಟು ಒತ್ತಾಸೆಯನ್ನು ನೀಡಲಿದೆ.

ಇದನ್ನೂ ಓದಿ:ನೆಟ್ಫ್ಲಿಕ್ಸ್ನ ‘ಘೂಸ್ಖೋರ್ ಪಂಡತ್’ ವಿವಾದ: ಟೀಸರ್ ಡಿಲೀಟ್ ಮಾಡಿದ ಚಿತ್ರತಂಡ

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ರೇವಂತ್ ರೆಡ್ಡಿ, ನೆಟ್‌ಫ್ಲಿಕ್ಸ್ ಸಂಸ್ಥೆಯು ತನ್ನ ಕಾರ್ಪೊರೇಟ್ ಕಛೇರಿಯ ಸರ್ಕಾರವನ್ನು ನಿರ್ಮಿಸುತ್ತಿರುವ ‘ಭಾರತ್ ಫ್ಯೂ ಸಿಟಿ’ಗೆ ಸ್ಥಳಾಂತರಿಸುವಂತೆ ಆಹ್ವಾನ ನೀಡಿದರು. ಖಚಿತ ಭೂಮಿ ಮತ್ತು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ. ಈ ಉದ್ಘಾಟನಾ ಸಮಾರಂಭದಲ್ಲಿ ಐಟಿ ಸಚಿವ ಡಿ. ಶ್ರೀಧರ್ ಬಾಬು, ಚಿತ್ರನಟ ರಾಣಾ ದಗ್ಗುಬಾಟಿ, ಐಲೈನ್ ಸ್ಟೂಡಿಯೋಸ್ ಸಿಐಒ ಜೆಎಫ್ ಶಪಿರೊ ಮತ್ತು ಇತರ ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದರು.

ನೆಟ್‌ಫ್ಲಿಕ್ಸ್ ಕಳೆದ ಕೆಲವು ವರ್ಷಗಳಿಂದ ತೆಲುಗು ಚಿತ್ರೋದ್ಯಮದೊಂದಿಗೆ ನಿಕಟ ಸಂಪರ್ಕ ಹೊಂದಿದೆ. ‘ಆರ್‌ಆರ್‌ಆರ್‌’ ಸಿನಿಮಾದ ಬಳಿಕ ನೆಟ್‌ಫ್ಲಿಕ್ಸ್‌ನ ಸಿಐಒ ಖುದ್ದು ಹೈದರಾಬಾದ್‌ಗೆ ಬಂದು ರಾಜಮೌಳಿ, ಜೂ ಎನ್‌ಟಿಆರ್ ಸೇರಿದಂತೆ ತೆಲುಗು ಚಿತ್ರರಂಗದ ಹಲವು ತಾರೆಯರನ್ನು ಭೇಟಿ ಮಾಡಲಾಯಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *