
ಮೊಹಮ್ಮದ್ ಪ್ರೀತಿಯಲ್ಲಿ ನರಕ ನೋಡಿದ ಹಿಂದೂ ಯುವತಿ, ಫ್ರಿಡ್ಜ್ ಕೇಸ್ ಆಗಬಾರದೆಂದು ದುರಂತ ಅಂತ್ಯ, 24 ವರ್ಷದ ದಂತ ಸರ್ಜರಿ ವಿದ್ಯಾರ್ಥಿನಿಗೆ ಡೇಟಿಂಗ್ ಆ್ಯಪ್ ಮೂಲಕ ಈ ಮೊಹಮ್ಮದ್ ಖಾನ್ ಪರಿಚಯವಾಗಿದ್ದ.
ಮುಂಬೈ (ಮಾ.13) ದಂತ ವೈದ್ಯೆಯಾಗಬೇಕೆಂಬ ಕನಸು ಹೊತ್ತು ಮುಂಬೈನ 24ರ ಹರೆಯದ ಹಿಂದೂ ವಿದ್ಯಾರ್ಥಿನಿ ಸ್ತುತಿ ಸೋನಾವಾನೆ ಇದೀಗ ಬದುಕನ್ನೇ ಅಂತ್ಯಗೊಳಿಸಿದ್ದಾಳೆ. ರ್ಯಾಂಕ್ ಸ್ಟೂಡೆಂಟ್ ಆಗಿದ್ದ ಸ್ತುತಿ ಸಾವಿಗೆ ಕಾರಣವಾಗಿದ್ದೇ ಈಕೆಯ ಬಾಯ್ಫ್ರೆಂಡ್ ಮೊಹಮ್ಮದ್ ಖಾನ್ ಎಂದು ಆಕೆ ಬರೆದ ಡೆತ್ ನೋಟ್ನಲ್ಲಿ ಹೇಳಿಕೊಂಡಿದ್ದಾಳೆ. ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಮೊಹಮ್ಮದ್ ಖಾನ್ ಜೊತೆ ಪ್ರೀತಿ ಶುರುವಾಗಿತ್ತು. ಆದರೆ ಮೊಹಮ್ಮದ್ ಖಾನ್ ಕಿರುಕುಳ, ಮಾನಸಿಕ ಹಿಂಸೆ, ಅಪಮಾನಗಳಿಂದ ಬೇಸತ್ತ ಸ್ತುತಿ ಸೊನವಾನೆ ದುರಂತ ಅಂತ್ಯಕಂಡಿದ್ದಾಳೆ. ತಾನು ಶ್ರದ್ಧಾ ವಾಕರ್ನಂತೆ ಫ್ರಿಡ್ಜ್ನಲ್ಲಿ ತುಂಡು ತುಂಡಾಗಿ ಪತ್ತೆಯಾಗಬಾರದು ಅನ್ನೋ ಕಾರಣಕ್ಕೆ ವಿದ್ಯಾರ್ಥಿನಿ ಈ ನಿರ್ಧಾರ ಕೈಗೊಂಡಿದ್ದಾಳೆ.
6 ಪುಟದ ಡೆತ್ ನೋಟ್ ಬರೆದು ದುರಂತ ಸಾವು
ಮೊಹಮ್ಮದ್ ಖಾನ್ ಕಿರಕುಳ ತೀವ್ರಗೊಳ್ಳುತ್ತಿದ್ದಂತೆ ಕೆಲ ದಿನಗಳ ಹಿಂದೆ ಸ್ತುತಿ ಬ್ರೇಕ್ ಅಪ್ ಮಾಡಿಕೊಂಡಿದ್ದಳು. ಆದರೂ ಮೊಹಮ್ಮದ್ ಖಾನ್ ಕಿರುಕುಳ ನಿಲ್ಲಲಿಲ್ಲ. ಇತ್ತ ಸ್ತುತಿ ಪ್ರೀತಿ ಕುರಿತು ಗೆಳತಿಯರು, ಗೆಳೆಯರು ಪ್ರತಿ ಬಾರಿ ಎಚ್ಚರಿಕೆ ನೀಡುತ್ತಿದ್ದರು. ಇಷ್ಟೇ ಅಲ್ಲ ನಿನ್ನನ್ನು ಫ್ರಿಡ್ಜ್ನಲ್ಲಿ ನೋಡುವಂತಾಗದಿರಲಿ ಎಂದು ಪದೇ ಪದೇ ಹೇಳಿದ್ದರು. ಇಷ್ಟಾದರೂ ನನ್ನ ಮೊಹಮ್ಮದ್ ಖಾನ್ ಎಲ್ಲರಂತಲ್ಲ ಎಂದು ಪ್ರೀತಿಸಿದ್ದಳು. ತನು, ಮನ, ದೇಹ ನೀಡಿದ್ದಳು. ಕೊನೆಗೆ ಮೊಹಮ್ಮದ್ ಖಾನ್ ಮೋಸದಾಟ, ಕರುಕುಳ, ಮಾನಸಿಕ ಹಿಂಸೆ ತೀವ್ರಗೊಳ್ಳುತ್ತಿದ್ದಂತೆ ದೂರವಾಗಿದ್ದಳು. ಆದರೂ ಕಿರಕುಳ ತೀವ್ರಗೊಂಡಿತ್ತು. ಮನೆಗೆ ಬಂದ ಸ್ತುತಿ ತಡ ರಾತ್ರಿ ಕೋಣೆಯಲ್ಲಿ ದುರಂತ ಅಂತ್ಯಕಂಡಿದ್ದಾಳೆ. ಬೆಳಗ್ಗೆ 11 ಗಂಟೆಯಾದರೂ ಸ್ತುತಿ ಕೋಣೆಯಿಂದ ಹೊರಬಂದಿಲ್ಲ. ಅನುಮಾನಗೊಂಡ ಪೋಷಕರು ಕರೆ ಮಾಡಿದರೂ ಸ್ವೀಕರಿಸಿಲ್ಲ. ಅನುಮಾನಗೊಂಡು ಬಾಗಿಲು ಒಡೆದು ನೋಡಿದಾಗ ಸ್ತುತಿ ದುರಂತ ಅಂತ್ಯಕಂಡಿದ್ದಳು. ಸಾವಿಗೂ ಮುನ್ನ 6 ಪುಟಗಳ ಡೆತ್ನಲ್ಲಿ ಮೊಹಮ್ಮದ್ ಖಾನ್ ಕಿರುಕುಳ ಕುರಿತು ಬರೆದುಕೊಂಡಿದ್ದಾಳೆ. ತನ್ನ ಸಾವಿಗೆ ಈ ಮೊಹಮ್ಮದ್ ಖಾನ್ ಕಾರಣ ಎಂದಿದ್ದಾಳೆ.
ನನ್ನ ಮೊಹಮ್ಮದ್ ಇತರರಂತೆ ಅಲ್ಲ
ವೈದ್ಯ ವಿದ್ಯಾರ್ಥಿನಿ ಸ್ತುತಿ ಸೊನವಾನೆ ಮುಂಬೈನ ಅಂಟೋಪ್ ಹಿಲ್ ವಲಯದ ನಿವಾಸಿ. ಡೆಂಟಲ್ ಸರ್ಜರಿ ವಿದ್ಯಾರ್ಥಿನಿ ಸ್ತುತಿ ಡೇಟಿಂಗ್ ಆ್ಯಪ್ ಮೂಲಕ ಮೊಹಮ್ಮದ್ ಖಾನ್ ಪರಿಚಯವಾಗಿದ್ದ. ಮೊಹಮ್ಮದ್ ಖಾನ್ ಬಿತ್ತು ಬಕ್ರಾ ಎಂದು ಮೋಸದ ಪ್ರೀತಿ ನಾಟಕವಾಡಿದ್ದ. ಈ ಪ್ರೀತಿ ಬಲೆಯಲ್ಲಿ ಸ್ತುತಿ ಬಂಧಿಯಾಗಿದ್ದಳು. ಡೆಂಟಲ್ ಕಲಿಯುತ್ತಿದ್ದ ಇತರ ಸಹಪಾಠಿಗಳು ಸ್ತುತಿಗೆ ಈ ಪ್ರೀತಿ ಕುರಿತು ಎಚ್ಚರಿಕೆ ನೀಡಿದ್ದರು. ನಾವು ಸ್ತುತಿಯನ್ನು ಫ್ರಿಡ್ಜ್ನಲ್ಲಿ ನೋಡುವಂತಾಗದಿರಲಿ ಎಂದು ಎಚ್ಚರಿಸಿದ್ದರು. ಈ ಎಲ್ಲಾ ಸಂದರ್ಭಗಳಲ್ಲೂ ಸ್ತುತಿ, ನನ್ನ ಮೊಹಮ್ಮದ್ ಖಾನ್ ಇತರರಂತೆ ಅಲ್ಲ, ಆತ ನನ್ನನ್ನು ಅತೀಯಾಗಿ ಪ್ರೀತಿಸುತ್ತಿದ್ದಾನೆ. ನನಗೆ ಮೋಸ ಮಾಡಲ್ಲ, ನನ್ನ ಮನಸ್ಸು ನೋಯಿಸಲು ಅವಕಾಶ ನೀಡುವುದಿಲ್ಲ ಎಂದಿದ್ದಳು. ಪದೇ ಪದೇ ಈ ರೀತಿ ಹೇಳಿ ಸಹಪಾಠಿಗಳು, ಗೆಳೆಯರಿಗೆ ಹೇಳಿದ್ದಳು.
ಯಾವಾಗ ರಿಲೇಶನ್ಶಿಪ್ ಟಾಕ್ಸಿಕ್ ರೂಪ ಪಡೆದುಕೊಂಡಿತ್ತೋ, ಸ್ತುತಿ ಒಬ್ಬಂಟಿಯಾಗಿದ್ದಳು. ಅತ್ತ ಗೆಳೆಯರು, ಸಹಪಾಠಿಗಳ ಮುಂದೆ ನೋವು ಹೇಳಿಕೊಳ್ಳಲು ಆಗಲಿಲ್ಲ. ಇತ್ತ ತಾನು ಮೊಹಮ್ಮದ್ ಖಾನ್ ಕೈಯಲ್ಲಿ ಸಿಲುಕಿ, ದೆಹಲಿ ಶ್ರದ್ಧವಾಕಾರ್ ರೀತಿ ಫ್ರಿಡ್ಜ್ನಲ್ಲಿ ಹಲವು ತುಂಡು ತುಂಡುಗಳಾಗಿ ಪತ್ತೆಯಾಗಬಾರದು ಎಂದು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ.
ಸೂಚನೆ: ಬದುಕು ಅಂತ್ಯಗೊಳಿಸುವುದು ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಮಾನಸಿಕ ಸಮಸ್ಯೆ, ಬೆದರಿಕೆ ಸೇರಿದಂತೆ ಯಾವುದೇ ಸಮಸ್ಯೆಗಳಿದ್ದರೂ ತುರ್ತು ಉಚಿತ ಸಹಾಯವಾಣಿಗಳು ಲಭ್ಯವಿದೆ. ತಜ್ಞರ ಸಂಪರ್ಕಿಸಿ ಮುಕ್ತವಾಗಿ ಮಾತನಾಡಿ ದುಡುಕಿನ ನಿರ್ಧಾರದಿಂದ ಹಿಂದೆ ಸರಿಯಿರಿ.
Scroll to load tweet…