Headlines

Donald Trump: ತೈಲ ಟ್ಯಾಂಕರ್ ಸಿಬ್ಬಂದಿ ಸ್ವಲ್ಪ ಧೈರ್ಯ ತೋರಿಸಿ, ಇರಾನ್ ದಾಳಿಗೆ ಹೆದರಬೇಡಿ: ಟ್ರಂಪ್ | Trump Urges Tanker Crews To Show Guts In Strait Of Hormuz Amid Iran Attacks

Donald Trump: ತೈಲ ಟ್ಯಾಂಕರ್ ಸಿಬ್ಬಂದಿ ಸ್ವಲ್ಪ ಧೈರ್ಯ ತೋರಿಸಿ, ಇರಾನ್ ದಾಳಿಗೆ ಹೆದರಬೇಡಿ: ಟ್ರಂಪ್ | Trump Urges Tanker Crews To Show Guts In Strait Of Hormuz Amid Iran Attacks



Donald Trump: ತೈಲ ಟ್ಯಾಂಕರ್ ಸಿಬ್ಬಂದಿ ಸ್ವಲ್ಪ ಧೈರ್ಯ ತೋರಿಸಿ, ಇರಾನ್ ದಾಳಿಗೆ ಹೆದರಬೇಡಿ: ಟ್ರಂಪ್ | Trump Urges Tanker Crews To Show Guts In Strait Of Hormuz Amid Iran Attacks

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾವು ಹೆಚ್ಚುತ್ತಿರುವಾಗಲೇ, ಹಾರ್ಮುಜ್ ಜಲಸಂಧಿ ಮೂಲಕ ಸಾಗಲು ತೈಲ ಟ್ಯಾಂಕರ್ ಸಿಬ್ಬಂದಿಗೆ ‘ಸ್ವಲ್ಪ ಧೈರ್ಯ ತೋರಿಸಿ’ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇರಾನ್ ದಾಳಿ ಹೆಚ್ಚಾದ ಕಾರಣ ಟ್ಯಾಂಕರ್‌ಗಳಿಗೆ ಭದ್ರತೆ ನೀಡಲು ಪೆಂಟಗನ್ ನಿರಾಕರಿಸಿದೆ.

ವಾಷಿಂಗ್ಟನ್/ತೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧ ತಾರಕಕ್ಕೇರಿರುವಾಗ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೈಲ ಟ್ಯಾಂಕರ್ ಸಿಬ್ಬಂದಿಗೆ ವಿವಾದಾತ್ಮಕ ಸಲಹೆಯೊಂದನ್ನು ನೀಡಿದ್ದಾರೆ. ಹಾರ್ಮುಜ್ ಜಲಸಂಧಿ ಮೂಲಕ ತೈಲ ಟ್ಯಾಂಕರ್‌ಗಳು ಸಂಚರಿಸಬೇಕು, ಅದಕ್ಕಾಗಿ ಸಿಬ್ಬಂದಿ ಸ್ವಲ್ಪ ‘ಧೈರ್ಯ ತೋರಿಸಬೇಕು’ ಎಂದು ಟ್ರಂಪ್ ಹೇಳಿದ್ದಾರೆ. ‘ನಾವು ಈಗಾಗಲೇ ಇರಾನ್ ನೌಕಾಪಡೆಯನ್ನು ನಾಶ ಮಾಡಿದ್ದೇವೆ, ಹಾಗಾಗಿ ಹೆದರುವಂಥದ್ದು ಏನೂ ಇಲ್ಲ’ ಅಂತನೂ ಅವರು ಹೇಳಿಕೊಂಡಿದ್ದಾರೆ. ಆದರೆ, ಇರಾನ್ ದಾಳಿಯ ಅಪಾಯ ಹೆಚ್ಚಾಗಿರುವುದರಿಂದ ಟ್ಯಾಂಕರ್‌ಗಳಿಗೆ ಅಮೆರಿಕ ನೌಕಾಪಡೆಯ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಪೆಂಟಗನ್ ಸ್ಪಷ್ಟವಾಗಿ ಹೇಳಿದೆ.

ಯುದ್ಧ ಶುರುವಾಗಿ ಎರಡು ವಾರಗಳಾಗಿದ್ದು, ಹಾರ್ಮುಜ್ ಜಲಸಂಧಿ ಮತ್ತು ಒಮಾನ್ ಕೊಲ್ಲಿಯಲ್ಲಿ ಇರಾನ್ ಸುಮಾರು 16 ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸಿದೆ. ಈ ದಾಳಿಗಳಲ್ಲಿ ಹಡಗು ಸಿಬ್ಬಂದಿ ಸಾವನ್ನಪ್ಪಿದ್ದು, ಹಲವು ಟ್ಯಾಂಕರ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಈ ಬೆಳವಣಿಗೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ ಗಡಿ ದಾಟಿದೆ. ಹೀಗಾಗಿ, ಬೆಲೆ ನಿಯಂತ್ರಿಸಲು ಟ್ಯಾಂಕರ್‌ಗಳನ್ನು ಕಳುಹಿಸುವಂತೆ ಟ್ರಂಪ್ ಶಿಪ್ಪಿಂಗ್ ಕಂಪನಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ, ಈ ಜಲಸಂಧಿ ಮೂಲಕ ಸಾಗುವುದು ಆತ್ಮಹತ್ಯೆಗೆ ಸಮ ಎಂದು ಕಂಪನಿಗಳು ಅಭಿಪ್ರಾಯಪಟ್ಟಿವೆ.

ರಷ್ಯಾ ತೈಲ ಖರೀದಿಗೆ ಗ್ರೀನ್ ಸಿಗ್ನಲ್

ಇನ್ನೊಂದೆಡೆ, ಇರಾನ್ ಯುದ್ಧದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಗನಕ್ಕೇರುತ್ತಿದೆ. ಈ ಹಿನ್ನೆಲೆಯಲ್ಲಿ, ರಷ್ಯಾದ ತೈಲ ಉತ್ಪನ್ನಗಳನ್ನು ಖರೀದಿಸಲು ಟ್ರಂಪ್ ಆಡಳಿತವು ಬೇರೆ ದೇಶಗಳಿಗೆ ಅನುಮತಿ ನೀಡಿದೆ. 2022ರ ಆಗಸ್ಟ್ ನಂತರ ಇದೇ ಮೊದಲ ಬಾರಿಗೆ ಬ್ರೆಂಟ್ ಕಚ್ಚಾ ತೈಲದ ಬೆಲೆ 100 ಡಾಲರ್ ದಾಟಿದ ಕೂಡಲೇ, ಮಾರುಕಟ್ಟೆ ಸ್ಥಿರಗೊಳಿಸಲು ಅಮೆರಿಕ ಈ ಹೊಸ ಪರವಾನಗಿ ನೀಡಿದೆ. ಸದ್ಯ ಸಮುದ್ರದಲ್ಲಿ ಸಿಲುಕಿರುವ ರಷ್ಯಾದ ತೈಲ ಟ್ಯಾಂಕರ್‌ಗಳನ್ನು ಖರೀದಿಸಲು ದೇಶಗಳಿಗೆ ತಾತ್ಕಾಲಿಕ ಅನುಮತಿ ನೀಡಲಾಗಿದೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ತಿಳಿಸಿದ್ದಾರೆ.

ಇದು ಕೇವಲ ಅಲ್ಪಾವಧಿಯ ಕ್ರಮವಾಗಿದ್ದು, ಮಾರುಕಟ್ಟೆಯಲ್ಲಿ ತೈಲ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಖಜಾನೆ ಇಲಾಖೆ ಸ್ಪಷ್ಟಪಡಿಸಿದೆ. ಮಾರ್ಚ್ 12ರೊಳಗೆ ಹಡಗುಗಳಿಗೆ ಲೋಡ್ ಮಾಡಲಾದ ರಷ್ಯಾದ ಕಚ್ಚಾ ತೈಲ ಅಥವಾ ಪೆಟ್ರೋಲಿಯಂ ಉತ್ಪನ್ನಗಳಿಗೆ ಮಾತ್ರ ಈ ವಿನಾಯಿತಿ ಅನ್ವಯಿಸುತ್ತದೆ. ಈ ಪರವಾನಗಿಯ ಅವಧಿ ಏಪ್ರಿಲ್ 11ಕ್ಕೆ ಕೊನೆಗೊಳ್ಳಲಿದೆ. ‘ಗಣಿಗಾರಿಕೆ ವೇಳೆ ವಿಧಿಸುವ ತೆರಿಗೆಯಿಂದಲೇ ರಷ್ಯಾ ಸರ್ಕಾರಕ್ಕೆ ಮುಖ್ಯ ಆದಾಯ ಬರುತ್ತದೆ. ಹೀಗಾಗಿ, ಈಗಾಗಲೇ ಸಮುದ್ರದಲ್ಲಿರುವ ಈ ತೈಲವನ್ನು ಮಾರಾಟ ಮಾಡುವುದರಿಂದ ರಷ್ಯಾಕ್ಕೆ ದೊಡ್ಡ ಮಟ್ಟದ ಆರ್ಥಿಕ ಲಾಭವೇನೂ ಆಗುವುದಿಲ್ಲ’ ಎಂದು ಸ್ಕಾಟ್ ಬೆಸೆಂಟ್ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *