Headlines

ಪೂರೈಕೆ ವ್ಯತ್ಯಯದ ನಡುವೆ LPG ಸಿಲಿಂಡರ್​​ಗೆ ಕಳ್ಳರ ಕಾಟ: ಮನೆಯ ಕಾಂಪೌಂಡ್​​ಗೆ ನುಗ್ಗಿ ಕದ್ದು ಎಸ್ಕೇಪ್​​!

ಪೂರೈಕೆ ವ್ಯತ್ಯಯದ ನಡುವೆ LPG ಸಿಲಿಂಡರ್​​ಗೆ ಕಳ್ಳರ ಕಾಟ: ಮನೆಯ ಕಾಂಪೌಂಡ್​​ಗೆ ನುಗ್ಗಿ ಕದ್ದು ಎಸ್ಕೇಪ್​​!


ಪೂರೈಕೆ ವ್ಯತ್ಯಯದ ನಡುವೆ LPG ಸಿಲಿಂಡರ್‌ಗೆ ಕಳ್ಳರ ಕಾಟ: ಮನೆಯ ಕಾಂಪೌಂಡ್‌ಗೆ ನುಗ್ಗಿ ಕದ್ದು ಎಸ್ಕೇಪ್!

ರಾಮನಗರ, ಮಾರ್ಚ್ 13: ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮವಾಗಿ ಹಡಗುಗಳು ಬಾರದೆ ದೇಶದ ರಾಜ್ಯಗಳಲ್ಲಿ ಎಲ್ಪಿಜಿ ವಾಣಿಜ್ಯ ಸಿಲಿಂಡರ್ಗಳ ಅಭಾವ ತಲೆದೋರಿದೆ. ಅದರಲ್ಲಿಯೂ ಕರ್ನಾಟಕದಲ್ಲಿ ಸಮಸ್ಯೆ ತೀರಾ ಹದಗೆಟ್ಟಿದ್ದು, ಸಿಲಿಂಡರ್‌ಗಳ ಅಲಭ್ಯ ಹಿನ್ನೆಲೆಯ ಆಸನ ಹೋಟೆಲ್‌ಗಳು ಕೈಗಾರಿಕಾ ಬ್ಯಾಂಡ್ ಆಗಿವೆ. ಇಲ್ಲವೇ ಗಣನೀಯವಾಗಿ ಮೆನು ಕಡಿತಗೊಳಿಸಿ ಗ್ರಾಹಕರಿಗೆ ಸೇವೆ ನೀಡಲಾಗುತ್ತಿದೆ. ಪಿಜಿಗಳು ಮತ್ತು ಸರ್ಕಾರಿ ಶಾಲೆಗಳಲ್ಲಿ ಊಟ ತಯಾರಿಕೆಗೆ ಸಂಕಷ್ಟ ಬಂದೊದಗಿದೆ, ಹೆಚ್ಚಿನ ಹಣ ಕೊಡುತ್ತೇವೆ ಎಂದರೂ ಸಿಲಿಂಡರ್ ಸಿಗುತ್ತಿಲ್ಲ ಎಂದು ಆಹಾರೋದ್ಯಮಗಳು ಅಲವತ್ತುಕೊಳ್ಳುತ್ತಿದ್ದಾರೆ. ಇದೇ ಬಂಡವಾಳ ಮಾಡಿಕೊಂಡಿರುವ ಬ್ಲ್ಯಾಕ್ ಮಾರ್ಕೆಟ್ ನಲ್ಲಿ ಸಿಲಿಂಡರ್ ಮಾರುತ್ತಿದ್ದಾರೆ, ಇನ್ನು ಕೆಲವರು ಮನೆಗಳಿಗೆ ನುಗ್ಗಿ ಕಡಿಯುವ ಕೆಲಸಕ್ಕೆ ಕೈಹಾಕಿದ್ದಾರೆ.

ಸ್ಕೂಟರ್ ನಲ್ಲಿ ಬಂದ ಆರೋಪಿಗಳು ಮನೆಯ ಕಾಂಪೌಂಡ್ ಪ್ರವೇಶಿಸಿ ಗೃಹೋಪಯೋಗಿ ಎಲ್ ಪಿಜಿ ಸಿಲಿಂಡರ್ ಕದ್ದಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ. ಮಾರ್ಚ್ 7 ರಂದು ಈ ಘಟನೆ ನಡೆದಿದ್ದು, ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಕೃಷ್ಣಪ್ಪ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು, ಘಟನೆ ವೇಳೆ ಕುಟುಂಬದವರು ಮನೆಯಲ್ಲಿ ಇರಲಿಲ್ಲ. ಬಳಿಕ ಅಡುಗೆ ಮನೆಯ ಸಿಲಿಂಡರ್ ಬದಲಾಯಿಸಲು ಹೋದ ವೇಳೆ ಮನೆಯ ಇಟ್ಟುಕೊಂಡಿದ್ದ ಹೆಚ್ಚುವರಿ ಸಿಲಿಂಡರ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಸಿಲಿಂಡರ್ ಏನಾಯಿತು ಎಂಬ ಬಗ್ಗೆ ಮನೆಯವರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕಳವು ನಡೆದಿರುವುದು ಗೊತ್ತಾಗಿದೆ.

ಇದನ್ನೂ ಓದಿ: ಎಲ್ಪಿಜಿ ಸಿಲಿಂಡರ್ ಕೊರತೆ ಬೆನ್ನಲ್ಲೇ ಅರಣ್ಯ ಇಲಾಖೆ ಅಲರ್ಟ್ ಆಗಿದ್ಯಾಕೆ ಗೊತ್ತಾ?

ಸಿಸಿಟಿವಿ ಕ್ಯಾಮರಾದಲ್ಲಿ ಕಳ್ಳತನದ ದೃಶ್ಯ ಸೆರೆ

ಸ್ಕೂಟರ್‌ನಲ್ಲಿ ಬಂದ ಆರೋಪಿಗಳು ಹೊರಗೆ ಮನೆಯ ಗೇಟ್ ತೆರೆದು ಕಾಂಪೌಂಡ್ ಒಳಗೆ ಪ್ರವೇಶಿಸಿದ್ದಾರೆ, ಆಕಡೆ ನೋಡಿ ಸೀದಾ ಸಿಲಿಂಡರ್ ಇಟ್ಟ ಸ್ಥಳಕ್ಕೆ ತೆರಳಿದ್ದಾರೆ. ಕೂಡಲೇ ಅದನ್ನು ಎತ್ತಿಕೊಂಡು ಆತ ಕಾಂಪೌಂಡ್ ನಿಂದ ಹೊರ ಹೋಗುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೃತ್ಯವನ್ನು ಗಮನಿಸಿದಾಗ ಮನೆಯವರು ಹೆಚ್ಚುವರಿ ಸಿಲಿಂಡರ್ ಇಡುತ್ತಿದ್ದ ಸ್ಥಳ ಆರೋಪಿಗಳಿಗೆ ಮೊದಲೇ ಗೊತ್ತಿತ್ತಾ ಎಂಬ ಅನುಮಾನವೂ ಇತ್ತು, ಸಿಲಿಂಡರ್ ಪೂರೈಕೆಯಿಂದ ಮೊದಲೇ ಆತಂಕಗೊಂಡಿರುವ ನಿವಾಸಿಗಳಿಗೆ ಇದೀಗ ಸಿಲಿಂಡರ್ ಕಳ್ಳರ ಹಾವಳಿ ಹೊಸ ತಲೆನೋವಾಗಿ ಮಾರ್ಪಟ್ಟಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *