ಯುಗಾದಿ ಹಬ್ಬ ಹತ್ತಿರದಲ್ಲೇ ಇದೆ. ಮಾರ್ಚ್ 19ಕ್ಕೆ ಯುಗಾದಿ ಫೆಸ್ಟಿವೆಲ್ ಇದೆ. ಅದೇ ದಿನ ಭಾರತೀಯ ಚಿತ್ರರಂಗದ ಬಹು ದೊಡ್ಡ ಸಿನಿಮಾ ಧುರಂಧರ್ ತೆರೆ ಕಾಣುತ್ತಿದೆ. ಆದ್ರೆ ಅಷ್ಟರಲ್ಲಾಗಲ್ಲೇ ದುರಂಧರ್-2 ಕರ್ನಾಟಕವನ್ನ ಕೊಳ್ಳೆ ಹೊಡೆಯುತ್ತಿದೆ. ಯಾಕಂದ್ರೆ ನಮ್ಮ ನಾಡಿದಲ್ಲಿ ಹಿಂದಿಯ ದುರಂಧರ್-2 ಟಿಕೆಟ್ ರೇಟು ಡಬಲ್ ಆಗಿದೆ..

ಬಿಸಿಲು ಹೀಟು ಧುರಂದರ್-2ಗೆ ಸಖತ್ ರೇಟು..!

ರಾಕಿಂಗ್ ಸ್ಟಾರ್ ಯಶ್ ಆ ಒಂದು ನಿರ್ಧಾರ ಈಗ ಕರ್ನಾಟಕ ಬಾಕ್ಸಾಫೀಸ್ನಲ್ಲಿ ಧುರಂದರ್ ದುರಾಡಳಿಯ ನಡೆಯೋ ಹಾಗೆ ಮಾಡಿದೆ. ಮಾರ್ಚ್ 19ಕ್ಕೆ ಟಾಕ್ಸಿಕ್ ಸಿನಿಮಾ ಬಿಡುಗಡೆ ಆಗಲ್ಲ ಅಂತ ಯಶ್ ಅನೌನ್ಸ್ ಮಾಡಿದ್ದೇ ತಡ. ಅದೇ ದಿನ ಬಿಡುಗಡೆಗೆ ಸಿದ್ಧವಾಗಿದ್ದ ಹಿಂದಿಯ ದುರಂಧರ್ ಮೂವಿ ಕರ್ನಾಟಕ ಬಾಕ್ಸಾಫೀಸ್ಅನ್ನ ಭದ್ರ ಮಾಡಿಕೊಳ್ತು. ಏನೇ ಆಗ್ಲಿ ಈ ಭಾರಿ ಎಷ್ಟು ಸಾಧ್ಯವೋ ಅಷ್ಟು ಕೊಳ್ಳೆ ಹೊಡೆದೇ ಬಿಡೋಣ ಅಂತ ಡಿಸೈಡ್ ಆಯ್ತು. ಇದರ ಪ್ರಭಾವ ಕರ್ನಾಟಕದಲ್ಲಿ ದುರಂಧರ್ ಸಿನಿಮಾ ಟಿಕೆಟ್ ರೇಟು ಡಬಲ್ ಆಗಿದೆ.

ಧುರಂಧರ್-2 ಟಿಕೆಟ್ ಬೆಲೆ ಮನಸ್ಸೋಯಿಚ್ಚೆ ಏರಿಕೆ

ಯೆಸ್, ಮಧ್ಯಪ್ರಾಚ್ಯ ಯುದ್ಧದಿಂದ ಎಲ್ಲದರ ಬೆಲೆ ಗಗನಕ್ಕೇರಿದೆ. ಇದೇ ಟೈಮ್ನಲ್ಲಿ ಹಿಂದಿಯ ದುರಂಧರ್-2 ಸಿನಿಮಾ ಕರ್ನಾಟಕ ಬಾಕ್ಸಾಫೀಸ್ಅನ್ನ ಇಲ್ಲಿನ ಸಿನಿಮಾ ಪ್ರೇಕ್ಷಕರ ಜೇಬು ಕಾಲಿ ಮಾಡುತ್ತಿದೆ. ಕರ್ನಾಟಕದಲ್ಲಿ ದುರಂಧರ್-2 ಟಿಕೆಟ್ ದರ ಒಂದು ಸಾವಿರಕ್ಕೆ ಏರಿದೆ.

ಧುರುಂಧರ್ ಪೈಯ್ಡ್ ಪ್ರೀಮಿಯರ್ ಶೋಗೆ ಒಂದು ಸಾವಿರದೊಂದ ಒಂದೂವರೆ ಸಾವಿರದ ವರೆಗೆ ರೇಟ್ ಫಿಕ್ಸ್ ಮಾಡಿದ್ದಾರೆ. ನಾರ್ಮಲ್ ಟಿಕೆಟ್ ದರ 500 ರು ಇದೆ. ಆದ್ರೆ ಅದೇ ಮುಂಬೈನಲ್ಲಿ ದುರಂಧರ್ ಟಿಕೆಟ್ ದರ 1000 ದಾಟಿಲ್ಲ. ಚನ್ನೈನಲ್ಲಿ 500 ರೂ ಮುಟ್ಟಿಲ್ಲ. ಆದ್ರೆ ಕರ್ನಾಟಕದಲ್ಲಿ ಮಾತ್ರ ಮನಸೋ ಇಚ್ಚೆ ಟಿಕೆಟ್ ದರ ಏರಿಸಿ ನಮ್ಮವರ ಜೇಬಿಕೇ ಕತ್ತರಿ ಹಾಕಲಾಗ್ತಿದೆ.

Source link
ಕರ್ನಾಟಕದಲ್ಲಿ ಧುರಂಧರ್-2 ಹಗಲು ದರೋಡೆ; ಯುಗಾದಿ ಗಿಫ್ಟ್ ಜೇಬು ಕಾಲಿ ಮಾಡೋದು ಫಿಕ್ಸ್!