
ರಶ್ಮಿಕಾ ಮಂದಣ್ಣ (ರಶ್ಮಿಕಾ ಮಂದಣ್ಣ) ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ಜೊತೆಗೆ ಮದುವೆಯಾಗಿದ್ದು, ಸದ್ಯಕ್ಕೆ ಕೆಲವು ವಾರಗಳ ಕಾಲ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಅಷ್ಟರಲ್ಲೇ ಅವರ ಹೊಸ ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ರಶ್ಮಿಕಾ ನಟಿಸಿರುವ ಬಹುತಾರಾಗಣದ ಬಾಲಿವುಡ್ ಸಿನಿಮಾ ‘ಕಾಕ್ಟೇಲ್ 2’ ಸಿನಿಮಾದ ಬಿಡುಗಡೆ ದಿನಾಂಕ ಹಾಗೂ ಟೀಸರ್ ರಿಲೀಸ್ ದಿನಾಂಕಗಳನ್ನು ಇಂದು ಪ್ರಕಟಿಸಲಾಗಿದೆ. ಈ ಕುರಿತು ರಶ್ಮಿಕಾ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ರಶ್ಮಿಕಾ ತುಸು ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ಸುಳಿವನ್ನು ಪೋಸ್ಟರ್ ನೀಡುತ್ತಿದೆ.
2012 ರಲ್ಲಿ ಬಿಡುಗಡೆ ಆಗಿ ಬ್ಲಾಕ್‌ಬಸ್ಟರ್ ಆಗಿದ್ದ ‘ಕಾಕ್ಟೇಲ್’ ಸಿನಿಮಾದ ಸೀಕ್ವೆಲ್ ಆಗಿರುವ ‘ಕಾಕ್ಟೇಲ್ 2’ ನಲ್ಲಿ ರಶ್ಮಿಕಾ ಮಂದಣ್ಣ, ಕೃತಿ ಸನೋನ್ ಮತ್ತು ಶಾಹಿದ್ ಕಪೂರ್ ಅವರು ನಟಿಸಿದ್ದಾರೆ. 2012 ರ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ಸೈಫ್ ಅಲಿ ಖಾನ್ ಮತ್ತು ಡಯಾನಾ ಪೆಂಟಿ ನಟಿಸಿದ್ದರು. ಇದೀಗ ‘ಕಾಕ್ಟೇಲ್ 2’ ಸಿನಿಮಾದ ಪೋಸ್ಟರ್ ಮತ್ತು ಬಿಡುಗಡೆ ದಿನಾಂಕವನ್ನು ಇಂದು ಅಧಿಕೃತವಾಗಿ ಪ್ರಕಟಿಸಲಾಗಿದೆ.
ಹೋಮಿ ಅದಜಾನಿಯಾ ನಿರ್ದೇಶನ ಮಾಡಿರುವ ‘ಕಾಕ್ಟೇಲ್ 2’ ಸಿನಿಮಾ ಜೂನ್ 19 ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಜೂನ್ 4 ರಂದು ಬಿಡುಗಡೆಯಾಗಲಿದೆ, ಅದಾದ ಎರಡು ವಾರಗಳ ನಂತರ ‘ಕ್ಯಾಟ್ 2’ ಬಿಡುಗಡೆ ಆಗಲಿದೆ. ದಿನೇಶ್ ವಿಜನ್ ಅವರ ‘ಮ್ಯಾಡಾಕ್ ಫಿಲ್ಮ್ಸ್’ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಇದೀಗ ಬಿಡುಗಡೆ ಆಗಿರುವ ಪೋಸ್ಟರ್‌ನಲ್ಲಿ ರಶ್ಮಿಕಾ ತುಸು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಕೃತಿ ಸನೋನ್ ಪಾತ್ರವೂ ಸಹ ಗ್ಲಾಮರಸ್ ಆಗಿಯೇ ಇದ್ದಂತಿದೆ.
ಇದನ್ನೂ ಓದಿ:ಲಾವಣ್ಯ ತ್ರಿಪಾಠಿ ಬಿಟ್ಟ ಸಿನಿಮಾದಿಂದ ಸೂಪರ್ ಹಿಟ್ ಆದ ರಶ್ಮಿಕಾ ಮಂದಣ್ಣ
ಇಂದು ಬಿಡುಗಡೆಯಾದ ಪೋಸ್ಟರ್‌ನಲ್ಲಿ ರಶ್ಮಿಕಾ ಅತ್ಯಂತ ಚಟುವಟಿಕೆಯುಳ್ಳ, ಉಲ್ಲಾಸಭರಿತ ಹುಡುಗಿಯಂತೆ ಕಾಣಿಸಿಕೊಂಡಿದ್ದಾರೆ. ಕೆಲ ವರದಿಗಳ ಪ್ರಕಾರ, ರಶ್ಮಿಕಾ ಅವರು ಲೆಸ್ಬಿಯನ್ ಪಾತ್ರದಲ್ಲಿ ನಟಿಸಿದ್ದಾರೆ. ಹೊರನೋಟಕ್ಕೆ ಇದು ತ್ರಿಕೋನ ಪ್ರೇಮಕಥೆಯಾದರೂ ಸಹ ಮುಖ್ಯ ಲವ್ ಸ್ಟೋರಿ ಇರುವುದು ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ಪಾತ್ರದ ನಡುವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ರಶ್ಮಿಕಾ ಕೆಲವು ಬೋಲ್ಡ್ ದೃಶ್ಯಗಳಲ್ಲಿ ಸಹ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.
‘ಕಾಕ್ಟೇಲ್ 2’ ಜೂನ್ 19 ರಂದು ಬಿಡುಗಡೆಯಾಗುತ್ತಿದೆ, ಮಾರ್ಚ್ 18 ರಂದು ‘ಕಾಕ್ಟೇಲ್ 2’ ಚಿತ್ರದ ಮೊದಲ ಟೀಸರ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ರಣವೀರ್ ಸಿಂಗ್ ಅಭಿನಯದ ಪ್ರದರ್ಶನ ‘ಧುರಂಧರ್: ದಿ ರಿವೆಂಜ್’ ಸಿನಿಮಾದ ಸಮಯದಲ್ಲಿ ಈ ಟೀಸರ್ ಅನ್ನು ವೀಕ್ಷಿಸಿದರು. ರಶ್ಮಿಕಾ ಮಂದಣ್ಣ ಮದುವೆ ಆದ ಬಳಿಕ ಬಿಡುಗಡೆ ಆಗುತ್ತಿರುವ ಅವರ ಮೊದಲ ಸಿನಿಮಾ ಇದಾಗಿದೆ, ಪ್ರಚಾರದಲ್ಲಿ ಅವರು ಶೀಘ್ರವೇ ಭಾಗವಹಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ