
ತೆಲುಗು ಚಿತ್ರರಂಗದ (ಟಾಲಿವುಡ್) ಹಿರಿಯ ನಟ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರಾಜೇಂದ್ರ ಪ್ರಸಾದ್ ಅವರ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ತಾವು ಆಡಿದ ಮಾತಿನಿಂದ ಆಗಿರುವ ವಿವಾದದ ಬಗ್ಗೆ ತೀವ್ರವಾಗಿ ವ್ಯಕ್ತಪಡಿಸಿರುವುದು ಮಾತ್ರ. ‘ತಾವು ಜೀವನದಲ್ಲಿ ಇನ್ನೊಮ್ಮೆ ಇಂಥಹ ಘೋರ ತಪ್ಪು, ಇದೊಂದು ಬಾರಿ ನನ್ನನ್ನು ಕ್ಷಮಿಸಿಬಿಡಿ’ ಎಂದು ತಮಿಳು ಜನರ ಬಳಿ ಕೈಮುಗಿದು ಕ್ಷಮೆ ಕೇಳಿದ್ದಾರೆ.
ಕೆಲವು ದಿನಗಳ ಹಿಂದೆ ರಾಜೇಂದ್ರ ಪ್ರಸಾದ್ ಅವರಿಗೆ ಕಾಂತರಾವ್ ಪ್ರಶಸ್ತಿ ನೀಡಲಾಯ್ತು. ಕಾರ್ಯಕ್ರಮದಲ್ಲಿ ಭಾವಾವೇಶದಿಂದ ಮಾತನಾಡಿದ ರಾಜೇಂದ್ರ ಪ್ರಸಾದ್, ಕಾಂತರಾವ್ ಅವರ ನಟನೆಯನ್ನು ಕೊಂಡಾಡುತ್ತಾ, ‘ಕಾಂತರಾವ್ ಮಾಡುತ್ತಿರುವ ಸಿನಿಮಾ, ಅವರ ಜನಪದ ಶೈಲಿಯ ನಟನೆಯನ್ನು ನೋಡಿ ಎಂಜಿಆರ್ ಅಂಥವರೇ ಪ್ಯಾಂಟಿನಲ್ಲಿ ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಾರೆ. ಇವನ್ಯಾರಯ್ಯ, ಭಾರತೀಯ ಸಿನಿಮಾವನ್ನು ಎಲ್ಲಿಗೋ ತೆಗೆದುಕೊಳ್ಳುತ್ತಾನೆ ಎಂದು ಅವರು ಭಯಗೊಂಡು ಮೂತ್ರ ಮಾಡಿಕೊಳ್ಳುತ್ತಾರೆ’ ಎಂದಿದ್ದರು.
ತಮಿಳು ಚಿತ್ರರಂಗದ ದಿಗ್ಗಜ ನಟ, ಮಾಜಿ ಸಹ ಆಗಿರುವ ಎಂಜಿಆರ್ ಅವರ ಬಗ್ಗೆ ರಾಜೇಂದ್ರ ಪ್ರಸಾದ್ ಆಡಿದ್ದ ಕೀಳು ಮಾತುಗಳನ್ನು ತಮಿಳು ಸಿನಿಮಾ ಪ್ರೇಮಿಗಳು ಮಾಡಿದ್ದಾರೆ ತಮಿಳು ಚಿತ್ರರಂಗದ ಪ್ರಮುಖ ನಟರುಗಳಾದ ನಾಸರ್, ನಟ ಸಿಎಂ ವಿಶಾಲ್ ಈ ಬಗ್ಗೆ ಖಂಡಿಸಿದ್ದಾರೆ. ಕ್ಷಮೆ ಕೇಳುವಂತೆ ಒತ್ತಾಯಿಸಿದರು. ಅದರಂತೆ ಇದೀಗ ರಾಜೇಂದ್ರ ಪ್ರಸಾದ್ ಕ್ಷಮೆ ಕೋರಿದ್ದಾರೆ.
ಇದನ್ನೂ ಓದಿ:ತಮಿಳಿನ ದಿಗ್ಗಜ ನಟ, ಮಾಜಿ ಸಿಎಂ ಎಂಜಿಆರ್ ಬಗ್ಗೆ ತೆಲುಗು ಹಿರಿಯ ನಟನ ಕೀಳು ಹೇಳಿಕೆ
‘ಎಂಜಿಆರ್, ತಮಿಳು ಚಿತ್ರರಂಗದ ದೇವರು. ನಾನು ಅವನ ಟೀಕೆ ಮಾಡುವಷ್ಟು ದೊಡ್ಡವನಲ್ಲ. ನಾನು ಮದ್ರಾಸ್ ಫಿಲಂ ಇನ್ ಸ್ಟಿಟ್ಯೂಟ್ ನಲ್ಲಿ ಕಲಿಯುವಾಗ ಅವರು ಸಿಎಂ, ಅವರು ಸಹ ಒಮ್ಮೆ ನಮ್ಮ ಇನ್ ಸ್ಟಿಟ್ಯೂಟಿಗೆ ಭೇಟಿ ನೀಡಿದ್ದರು. ಅವರೊಬ್ಬ ಮಹಾನ್ ನಟ. ಕಾಂತರಾವ್ ಅವರ ಬಗ್ಗೆ ಲೋಕಾಭಿರಾಮವಾಗಿ ಮಾತನಾಡುವಾಗ ನನ್ನ ಬಾಯಿಂದ ಅದೊಂದು ವಾಕ್ಯ ತಪ್ಪಿ ಬಂದುಬಿಟ್ಟಿತು. ನಾನು ಎಂಜಿಆರ್ ಬಗ್ಗೆ ಅಪಾರ ಗೌರವ ಉಳ್ಳವನು. ಈ ಬಾರಿ ನನ್ನನ್ನು ಜೀವನದಲ್ಲಿ ಕ್ಷಮಿಸಿಬಿಡಿ, ಮುಂದೆ ಇನ್ನೆಂದೂ ಇಂಥಹಾ ತಪ್ಪು ನಾನು’ ಎಂದು ಕೈ ಮುಗಿದು ಕ್ಷಮೆ ಕೇಳಿದ್ದಾರೆ ಹಿರಿಯ ನಟ.
ರಾಜೇಂದ್ರ ಪ್ರಸಾದ್ ಅವರು ಇತ್ತೀಚೆಗೆ ತಮ್ಮ ಹೇಳಿಕೆಗಳಿಂದ ವಿವಾದಗಳನ್ನು ಸೃಷ್ಟಿಸುತ್ತಿದ್ದಾರೆ. ಈ ಹಿಂದೆ ಬ್ರಹ್ಮಾನಂದಂ, ಆಲಿ ಅವರ ಬಗ್ಗೆ ಕೀಳಾಗಿ ಮಾತನಾಡಿದ್ದರು. ತೆಲುಗು ಸಿನಿಮಾ ಒಂದರಲ್ಲಿ ನಟಿಸಿದ್ದ ಕ್ರಿಕೆಟಿಗ ಡೇವಿಡ್ ವಾರ್ನರ್ ಬಗ್ಗೆಯೂ ಇವರು ನೀಡಿದ್ದ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ. ಆದರೆ ಈ ಬಾರಿ ಅವರು ಕ್ಷಮೆ ಕೇಳುವ ಮೂಲಕ ವಿವಾದಕ್ಕೆ ಕೊನೆ ಹಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ