Headlines

ನಗರ ಪೊಲೀಸ್ ಆಯುಕ್ತರ ಹೆಸರಲ್ಲೇ ಡಿಜಿಟಲ್ ಅರೆಸ್ಟ್​​ಗೆ ಯತ್ನ: ಸೈಬರ್ ಕ್ರೈಂ ಪೊಲೀಸರಿಗೆ ದೂರು

ನಗರ ಪೊಲೀಸ್ ಆಯುಕ್ತರ ಹೆಸರಲ್ಲೇ ಡಿಜಿಟಲ್ ಅರೆಸ್ಟ್​​ಗೆ ಯತ್ನ: ಸೈಬರ್ ಕ್ರೈಂ ಪೊಲೀಸರಿಗೆ ದೂರು


ನಗರ ಪೊಲೀಸ್ ಆಯುಕ್ತರ ಹೆಸರಲ್ಲೇ ಡಿಜಿಟಲ್ ಅರೆಸ್ಟ್ ಗೆ ಯತ್ನ: ಸೈಬರ್ ಕ್ರೈಂ ಪೊಲೀಸರಿಗೆ ದೂರು

ಬೆಂಗಳೂರು, ಮಾರ್ಚ್ 13: ಇತ್ತೀಚೆಗೆ ಸೈಬರ್ ರಾಜ್ಯದಲ್ಲಿ ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ ಎಂದು ಸದನದಲ್ಲಿಯೇ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಏನೋ. 2023ರಲ್ಲಿ ರಾಜ್ಯದಲ್ಲಿದ್ದ 22,225 ಪ್ರಕರಣಗಳ ಸಂಖ್ಯೆ 2025ರ ವೇಳೆಗೆ 14,899ಕ್ಕೆ ಇಳಿಕೆಯಾಗಿದೆ. ಪೊಲೀಸ್ ಇಲಾಖೆ ಕೈಗೊಂಡ ಪರಿಣಾಮಕಾರಿ ಕ್ರಮಗಳು, ಪ್ರಕರಣಗಳ ತ್ವರಿತ ಪತ್ತೆ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ಜಾಗೃತಿ ಫಲಕೊಟ್ಟಿರೋದಾಗಿ ಹೇಳಿದ್ದಾರೆ. ಆದರೆ ಖದೀಮರು ಮಾತ್ರ ಜನರಿಗೆ ವಂಚನೆ ಮಾಡಲು ಹೊಸ ಹೊಸ ದಾರಿ ಹುಡುಕುತ್ತಿದ್ದಾರೆ. ಖಾಕಿ ಚಾಪೆ ಕೆಳಗೆ ತೂರಿದರೆ ಇವರು ರಂಗೋಲಿ ಕೆಳಗೇ ತೂರುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತಿದೆ ಬೆಂಗಳೂರಿನಲ್ಲಿ ನಡೆದಿರುವ ಈ ಘಟನೆ.

ಸೈಬರ್ ಖದೀಮರ ಆಟ ಈಗ ನೆಕ್ಸ್ಟ್ ಲೆವೆಲ್ಗೆ ಹೋಗಿದೆ. ಇಷ್ಟು ದಿನ ಬೇರೆ ರಾಜ್ಯದ ಪೊಲೀಸರ ಹೆಸರಲ್ಲಿ ಹೆದರಿಸ್ತಿದ್ದವರು,ಈಗ ಲೋಕಲ್ ಪೊಲೀಸರ ಹೆಸರನ್ನೇ ಬಳಸುತ್ತಿದ್ದಾರೆ. ಬೆಂಗಳೂರಿನ ಮಹಿಳೆಯೊಬ್ಬರಿಗೆ ಬಂದ ಒಂದು ಕರೆ ಚಾಲಾಕಿಗಳ ನಾಟಕ ಬಟಾಬಯಲು ಮಾಡಿದೆ. ಹೌದು, ನಯನಾ ಪ್ರಕಾಶ್ ಎಂಬುವರ ಹೆಸರಿನಲ್ಲಿ ದಾಖಲೆ ಸೃಷ್ಟಿಸಿದ್ದ ಕಿಲಾಡಿಗಳು ಮಹಿಳೆಗೆ ಕರೆ ಮಾಡಿದ್ದಾರೆ. ಮೊದಲು ಆಡಿಯೋ ಕಾಲ್ ಮಾಡಿ, ನಿಮ್ಮ ತಾಯಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ ಎಂದು ಹೆದರಿಸಿದ್ದಾರೆ. ನಂತರ ಕರೆಯನ್ನ ವಿಡಿಯೋ ಕಾಲ್ಗೆ ಕನ್ವರ್ಟ್ ಮಾಡಿ ತನಿಖೆ ಮಾಡಬೇಕು ಅಂತಾ ದಬಾಯಿಸಿದ್ದಾರೆ. ಈ ಖದೀಮರ ಧೈರ್ಯ ಎಷ್ಟಿದೆ ಅಂದ್ರೆ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರ ನಕಲಿ ಸೀಲ್ ಮತ್ತು ಸಹಿಯನ್ನೇ ಬಳಸಿದ್ದಾರೆ. ಸಾಲದ್ದಕ್ಕೆ ಕರ್ನಾಟಕ ಸಂಸ್ಥೆ ಹೆಸರಲ್ಲಿ ಬಂಧನ ವಾರಂಟ್ ಸೃಷ್ಟಿಸಲಾಗಿದೆ. ಅಷ್ಟೇ ಅಲ್ಲ, ಸುಪ್ರೀಂ ಕೋರ್ಟ್ ಆದೇಶ ಅಂತಾ ನಕಲಿ ದಾಖಲೆ ಕಳಿಸಿ, ನಿಮ್ಮ ಮನೆಗೆ ಕಳಿಸಿ ನಾವು ಬರ್ತೀವಿ ಅಂತಾ ಮಹಿಳೆಯನ್ನ ಟೆನ್ಶನ್ ಗೆ ತಳ್ಳಿದ್ದಾರೆ.

ಇದನ್ನೂ ಓದಿ: ನಿಮ್ಮ ಫೋನ್‌ನಲ್ಲಿ 1930 ನಂಬರ್ ಸೇವ್ ಮಾಡಿದ್ದೀರ? ಇದರಿಂದ ಏನು ಪ್ರಯೋಜನ?

ಆದರೆ ದಾಖಲೆಗಳನ್ನ ನೋಡಿ ಅನುಮಾನಗೊಂಡ ಮಹಿಳೆ ಅಂಜದೆ ಎಚ್ಚೆತ್ತುಕೊಂಡಿದ್ದಾರೆ. ಕೂಡಲೇ ಬೆಂಗಳೂರು ಸೈಬರ್ ಕ್ರೈಂ ವಿಭಾಗದ ಅಧಿಕೃತ ಮೇಲ್ ಐಡಿಗೆ ದೂರು ನೀಡಲಾಗಿದೆ. ಜೊತೆಗೆ ಸೈಬರ್ ಕ್ರೈಂ ಪೋರ್ಟಲ್ ನಲ್ಲೂ ಕಂಪ್ಲೇಂಟ್ ರಿಜಿಸ್ಟರ್ ಅವರು ಮಾಡಿದ್ದಾರೆ. ವಿಡಿಯೋ ಕಾಲ್ ಮೂಲಕ ತನಿಖೆ ನಡೆಸಿ ಹಣ ಕೇಳಲ್ಲ. ಇಂತಹ ನಕಲಿ ಆದೇಶ ಪತ್ರಗಳಿಗೆ ಸಾರ್ವಜನಿಕರು ಮರುಳಾಗಬಾರದು. ಅನುಮಾನ ಬಂದರೆ ಕೂಡಲೇ 1930 ರಲ್ಲಿ ಕರೆ ಮಾಡಿ ದೂರು ಕೊಡಿ. ಒಟ್ಟಿನಲ್ಲಿ ಇಂತಹ ಜಾಲಕ್ಕೆ ಬೆದರಿ ಅನೇಕ ಮಂದಿ ಸಾಕಷ್ಟು ಹಣ ಕಳೆದುಕೊಂಡಿದ್ದಾರೆ. ಈ ನಡುವೆ ಪೊಲೀಸರ ಹೆಸರಲ್ಲೇ ವಂಚನೆ ಮಾಡೋಕೆ ಹೊರಟಿರುವ ಸೈಬರ್ ಖದೀಮರ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಜಾಗ್ರತೆ ವಹಿಸಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *