ಸೆಲ್ಫ್‌ ಗಿಫ್ಟ್ ಪಡೆಯಲು ಹೋಗಿ ಬರಿಗೈಲಿ ವಾಪಸಾದ ಮೇಘನಾ ರಾಜ್‌, ಅಮ್ಮನ ಪ್ಲ್ಯಾನ್‌ ಫೇಲ್‌ ಆದ್ರೂ ಮಗ ಫುಲ್‌ ಖುಷ್! | Meghana Raj Shopping Vlog Failed Self Gift Plan Raayan Raj Sarja Fancy Dress San

ಸೆಲ್ಫ್‌ ಗಿಫ್ಟ್ ಪಡೆಯಲು ಹೋಗಿ ಬರಿಗೈಲಿ ವಾಪಸಾದ ಮೇಘನಾ ರಾಜ್‌, ಅಮ್ಮನ ಪ್ಲ್ಯಾನ್‌ ಫೇಲ್‌ ಆದ್ರೂ ಮಗ ಫುಲ್‌ ಖುಷ್! | Meghana Raj Shopping Vlog Failed Self Gift Plan Raayan Raj Sarja Fancy Dress San


ನಟಿ ಮೇಘನಾ ರಾಜ್ ತಮ್ಮ ‘ಸಂಗೀತಾ ಬಾರ್ & ರೆಸ್ಟೋರೆಂಟ್‌’ ಸಿನಿಮಾ ಶೂಟಿಂಗ್ ಮುಗಿದಿದ್ದಕ್ಕೆ ತಮಗೇ ಉಡುಗೊರೆ ಖರೀದಿಸಲು ಮಾಲ್‌ಗೆ ಹೋಗಿದ್ದರು. ಆದರೆ, ಇಷ್ಟದ ಬ್ಯಾಗ್ ಸಿಗದಿದ್ದಾಗ, ಮಗ ರಾಯನ್‌ಗಾಗಿ ಆರ್ಮಿ ಆಫೀಸರ್ ಕಾಸ್ಟ್ಯೂಮ್ ಖರೀದಿಸಿದರು.

ಬೆಂಗಳೂರು (ಮಾ.13): ನಟಿ ಮೇಘನಾ ರಾಜ್‌ ಅವರಿಗೆ ಒಂದು ವಿಶೇಷ ಹವ್ಯಾಸವಿದೆ. ತಾವು ನಟಿಸಿದ ಸಿನಿಮಾ ಪೂರ್ಣಗೊಂಡಾಗ ಅಥವಾ ಯಾವುದಾದರೂ ವಿಶೇಷ ಸಂದರ್ಭದಲ್ಲಿ ಅವರು ತಮಗೆ ತಾವೇ ಒಂದು ಉಡುಗೊರೆಯನ್ನು (Self Gift) ನೀಡಿಕೊಳ್ಳುವ ಅಭ್ಯಾಸ ಹೊಂದಿದ್ದಾರೆ. ಅದು ಬಟ್ಟೆಯಾಗಿರಬಹುದು, ಪುಸ್ತಕ ಅಥವಾ ಆಭರಣವಾಗಿರಬಹುದು. ಈ ಬಾರಿ ಸಂಗೀತಾ ಬಾರ್‌ & ರೆಸ್ಟೋರೆಂಟ್‌ ಸಿನಿಮಾದ ಶೂಟಿಂಗ್‌ ಕಂಪ್ಲೀಟ್‌ ಆದ ಸಲುವಾಗಿ ಅವರು ಸೆಲ್ಫ್‌ ಗಿಫ್ಟಿಂಗ್‌ಗಾಗಿ ಹ್ಯಾಂಡ್‌ಬ್ಯಾಗ್ ಖರೀದಿಸಲು ಮಾಲ್‌ಗೆ ಭೇಟಿ ನೀಡಿದ್ದರು. ವ್ಲಾಗ್‌ಅನ್ನು ಅವರು ಯೂಟ್ಯೂಬ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಒಂಟಿ ಶಾಪಿಂಗ್ ಇಷ್ಟಪಡುವ ಮೇಘನಾ

ಸಾಮಾನ್ಯವಾಗಿ ಮೇಘನಾ ಅವರಿಗೆ ಒಬ್ಬರೇ ಶಾಪಿಂಗ್ ಮಾಡುವುದು ಅಚ್ಚುಮೆಚ್ಚು. ‘ನಾನು ಯಾಕೆ ಒಬ್ಬಳೇ ಶಾಪಿಂಗ್‌ಗೆ ಬಂದೆ ಎಂದು ನಿಮಗೆ ಅನಿಸುತ್ತಿರಬಹುದು. ಸಾಮಾನ್ಯವಾಗಿ ನಾನು ಒಬ್ಬಳೇ ಶಾಪಿಂಗ್‌ ಮಾಡೋದನ್ನ ಇಷ್ಟಪಡುತ್ತೇನೆ. ಶಾಪಿಂಗ್‌ ಮಾಡೋವಾಗ ನನಗೆ ಸೈಲೆಂಟ್‌ ಆಗಿ ಇರಬೇಕು. ನನ್ನ ಜೊತೆ ಬಂದಿರುವವರಿಗೆ ಏನೋ ಅರ್ಜೆಂಟ್‌ ಇದೆ, ಅವರು ಎಲ್ಲೋ ಹೋಗಬೇಕಾಗಿರುತ್ತೆ ಅಥವಾ ಇದನ್ನ ತಗೋಬೇಡ, ಅದನ್ನು ತಗೋಬೇಡ ಅನ್ನೋ ರಿಸ್ಟ್ರಿಕ್ಷನ್ಶ್‌ ಹಾಕೋ ಕ್ಯಾಂಡಿಡೇಟ್ಸ್‌ ಯಾರಾದ್ರೂ ಬಂದ್ರೆ ಸಿಕ್ಕಾಪಟ್ಟೆ ಬೇಜಾರ್‌ ಆಗುತ್ತೆ. ಹಾಗಾಗಿ ನಾನು ಸಾಮಾನ್ಯವಾಗಿ ಒಬ್ಬಳೇ ಶಾಪಿಂಗ್‌ ಮಾಡೋದನ್ನ ಇಷ್ಟಪಡುತ್ತೇನೆ” ಎನ್ನುವ ಮೇಘನಾ, ತಮಗಿಷ್ಟವಾದ ಹ್ಯಾಂಡ್‌ಬ್ಯಾಗ್ ಹುಡುಕುತ್ತಾ ಇಡೀ ಮಾಲ್ ಸುತ್ತಾಡಿದ್ದಾರೆ.. ಆದರೆ, ಅಂದುಕೊಂಡ ವಿನ್ಯಾಸ ಅಥವಾ ಗುಣಮಟ್ಟದ ಬ್ಯಾಗ್ ಸಿಗದ ಕಾರಣ ಅವರು ಬರಿಗೈಲಿ ಹಿಂದಿರುಗಬೇಕಾಯಿತು.

ರಾಯನ್ ಮೋಜು-ಮಸ್ತಿ

ಶಾಪಿಂಗ್ ಫೇಲ್ ಆದರೂ ಮೇಘನಾ ಬೇಸರ ಮಾಡಿಕೊಳ್ಳಲಿಲ್ಲ. ತಮ್ಮ ಮುಂದಿನ ಗುರಿ ಮಗ ರಾಯನ್‌ನ ಫ್ಯಾನ್ಸಿ ಡ್ರೆಸ್ ಕಾಂಪಿಟಿಷನ್‌ಗೆ ಡ್ರೆಸ್‌ ಖರೀದಿ ಮಾಡೋದಾಗಿತ್ತು. ಮಗನಿಗಾಗಿ ‘ಆರ್ಮಿ ಆಫೀಸರ್’ ಕಾಸ್ಟ್ಯೂಮ್ ಖರೀದಿಸಲು ಹೋದಾಗ ಅಲ್ಲಿ ರಾಯನ್‌ನ ತುಂಟಾಟ ಕಂಡು ಖುಷಿಪಟ್ಟಿದ್ದಾರೆ. ಕಾಸ್ಟ್ಯೂಮ್ ಅಂಗಡಿಯಲ್ಲಿದ್ದ ಪುಟ್ಟ ನಾಯಿಮರಿಗಳ ಜೊತೆ ರಾಯನ್ ಆಟವಾಡುತ್ತಾ ಸಮಯ ಕಳೆದಿದ್ದು ನೋಡಿ ಮೇಘನಾ ಸಂತಸಪಟ್ಟರು.

ಅಸಲಿ ಉಡುಗೊರೆ ಅಂದ್ರೆ ಇದೇ!

ವ್ಲಾಗ್ ಕೊನೆಯಲ್ಲಿ ಮೇಘನಾ ಒಂದು ಸುಂದರ ಸಂದೇಶ ನೀಡಿದ್ದಾರೆ. “ಇವತ್ತು ನನಗೆ ಒಂದು ಗಿಫ್ಟ್ ಕೊಡಬೇಕು ಎಂದು ಪ್ಲಾನ್ ಮಾಡಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಮಗ ರಾಯನ್ ಮುಖದಲ್ಲಿನ ನಗು ಮತ್ತು ಅವನು ನಾಯಿಮರಿಗಳ ಜೊತೆ ಖುಷಿಯಿಂದ ಕಾಲ ಕಳೆದಿದ್ದನ್ನು ನೋಡಿದಾಗ, ಅದಕ್ಕಿಂತ ದೊಡ್ಡ ಗಿಫ್ಟ್ ಮತ್ತೊಂದಿಲ್ಲ ಎಂದು ನನಗೆ ಅನಿಸಿತು. ಅಲ್ಟಿಮೇಟ್ಲಿ ನನ್ನ ಮಗನ ಖುಷಿಯೇ ನನಗೆ ಸೆಲ್ಫ್ ಗಿಫ್ಟ್” ಎಂದು ಭಾವನಾತ್ಮಕವಾಗಿ ಮಾತನಾಡಿದ್ದಾರೆ. ರಾಯನ್ ರಾಜ್ ಸರ್ಜಾ ಆರ್ಮಿ ಆಫೀಸರ್ ಡ್ರೆಸ್‌ನಲ್ಲಿ ಮಿಂಚಿರುವ ಫೋಟೋಗಳನ್ನು ಸಹ ಅವರು ಹಂಚಿಕೊಂಡಿದ್ದು, ಅಭಿಮಾನಿಗಳು ಈ ತಾಯಿ-ಮಗನ ಜೋಡಿಗೆ ಫಿದಾ ಆಗಿದ್ದಾರೆ.

Self Gift Day 🎁 | Meghana Raj



Source link

Leave a Reply

Your email address will not be published. Required fields are marked *