
ರಮ್ಯಾ, ಪುನೀತ್ ರಾಜ್ ಕುಮಾರ್ ನಟನೆಯ ‘ಆಕಾಶ್’ ಸಿನಿಮಾ (ಆಕಾಶ ಚಲನಚಿತ್ರ) ಮರು ಬಿಡುಗಡೆ ಆಗಿದೆ. ರಾಘವೇಂದ್ರ ರಾಜ್‌ಕುಮಾರ್ ಅವರು ಈ ಸಿನಿಮಾ ನೋಡಲು ಇಂದು (ಮಾರ್ಚ್ 13) ಚಿತ್ರಮಂದಿರಕ್ಕೆ ಬಂದಿದ್ದಾರೆ. ಅಭಿಮಾನಿಗಳ ಜೊತೆ ಕುಳಿತು ಅವರು ಸಿನಿಮಾ ನೋಡಿದರು. ಬಳಿಕ ಮಾಧ್ಯಮಗಳ ಜೊತೆ ಮಾತಾಡಿದರು. ‘ಪುನೀತ್ ಇಲ್ಲದೇ ಈ ಸಿನಿಮಾ ನೋಡಲು ಕಷ್ಟವಾಗುತ್ತಿದೆ. ಮತ್ತೆ ಆ ದಿನಗಳು ವಾಪಸ್ ಬರಬಾರದೇ ಎನಿಸುತ್ತದೆ. ಆಕಾಶ್ ಸಿನಿಮಾ ಈಗ ನೋಡೋಕೂ ಅಷ್ಟೇ ಚೆನ್ನಾಗಿದೆ. ಅಪ್ಪು ಮತ್ತು ರಮ್ಯಾ ಜೋಡಿ ಚೆನ್ನಾಗಿದೆ. ಅಭಿಮಾನಿಗಳು ಅದೇ ಪ್ರೀತಿಯಿಂದ ಬಂದು ಸಿನಿಮಾ ನೋಡುತ್ತಿದ್ದಾರೆ. ಅದನ್ನು ನೋಡಿದಾಗ ಪುನೀತ್ ಇಲ್ಲ ಅಂತ ಅನಿಸಲ್ಲ’ ಎಂದು ರಾಘವೇಂದ್ರ ರಾಜ್‌ಕುಮಾರ್ (ರಾಘವೇಂದ್ರ ರಾಜ್‌ಕುಮಾರ್) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.