Headlines

Sangeetha Vijay divorce petition ಪತ್ನಿ ಸಂಗೀತಾ ಬಳಿಕ ದಳಪತಿ ವಿಜಯ್‌ಗೆ ಶಾಕ್‌ ನೀಡಿದ ಪುತ್ರ ಜೇಸನ್‌ ಸಂಜಯ್‌! | Actor Vijay Wife Sangeetha Divorce Son Jason Sanjay Drops Vijay Initial Updates San

Sangeetha Vijay divorce petition ಪತ್ನಿ ಸಂಗೀತಾ ಬಳಿಕ ದಳಪತಿ ವಿಜಯ್‌ಗೆ ಶಾಕ್‌ ನೀಡಿದ ಪುತ್ರ ಜೇಸನ್‌ ಸಂಜಯ್‌! | Actor Vijay Wife Sangeetha Divorce Son Jason Sanjay Drops Vijay Initial Updates San



Sangeetha Vijay divorce petition ಪತ್ನಿ ಸಂಗೀತಾ ಬಳಿಕ ದಳಪತಿ ವಿಜಯ್‌ಗೆ ಶಾಕ್‌ ನೀಡಿದ ಪುತ್ರ ಜೇಸನ್‌ ಸಂಜಯ್‌! | Actor Vijay Wife Sangeetha Divorce Son Jason Sanjay Drops Vijay Initial Updates San

ನಟ ವಿಜಯ್ ಅವರ ಪತ್ನಿ ಸಂಗೀತಾ, ವಿಜಯ್‌ಗೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಬೆಳವಣಿಗೆಯಿಂದ ಅಸಮಾಧಾನಗೊಂಡಿರುವ ಪುತ್ರ ಜೇಸನ್ ಸಂಜಯ್, ತಮ್ಮ ಹೆಸರಿನಿಂದ ತಂದೆಯ ಇನೀಶಿಯಲ್ ‘V’ ಅನ್ನು ತೆಗೆದುಹಾಕಿ ತಾಯಿಯ ಇನೀಶಿಯಲ್ ‘S’ ಬಳಸಲು ನಿರ್ಧರಿಸಿದ್ದಾರೆ.

ಚೆನ್ನೈ (ಮಾ.13): ದಕ್ಷಿಣ ಭಾರತದ ಸೂಪರ್ ಸ್ಟಾರ್ ಮತ್ತು ಟಿವಿಕೆ (TVK) ಪಕ್ಷದ ನಾಯಕ ವಿಜಯ್ ಅವರ ವೈಯಕ್ತಿಕ ಜೀವನದ ಬಿಕ್ಕಟ್ಟು ಈಗ ತಮಿಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಪತ್ನಿ ಸಂಗೀತಾ ಅವರು ವಿಜಯ್ ವಿರುದ್ಧ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದು, ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ನಡುವೆ ವಿಜಯ್‌ ಅವರ ಪುತ್ರ ವಿ.ಜೇಸನ್‌ ಸಂಜಯ್‌ ಬಹುದೊಡ್ಡ ನಿರ್ಧಾರ ಮಾಡಿದ್ದು, ತನ್ನ ಹೆಸರಿನಲ್ಲಿದ್ದ ಅಪ್ಪನ ಇನೀಶಿಯಲ್‌ ತೆಗೆದುಹಾಕಿದ್ದಾರೆ ಎಂದು ವರದಿಯಾಗಿದೆ.

ತಮಿಳು ಚಿತ್ರರಂಗದ ಖ್ಯಾತ ನಟಿಯೊಬ್ಬರ ಜೊತೆ ವಿಜಯ್ ಅಕ್ರಮ ಸಂಬಂಧ ಹೊಂದಿದ್ದಾರೆ ಮತ್ತು ತಾನು ಎಷ್ಟು ವಿರೋಧ ವ್ಯಕ್ತಪಡಿಸಿದರೂ ವಿಜಯ್ ಆ ಸಂಬಂಧವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವಿಚ್ಛೇದನದ ಸುದ್ದಿ ಹೊರಬೀಳುತ್ತಿದ್ದಂತೆ ವಿಜಯ್ ಪುತ್ರ ಜೇಸನ್ ಸಂಜಯ್ ಇನ್‌ಸ್ಟಾಗ್ರಾಮ್‌ನಲ್ಲಿ ತಂದೆಯನ್ನು ಅನ್‌ಫಾಲೋ ಮಾಡುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.

ತಂದೆಯ ಹೆಸರಿನ ಇನಿಶಿಯಲ್ ಕೈಬಿಟ್ಟ ಮಗ!

ಈಗ ಜೇಸನ್ ಸಂಜಯ್ ಮತ್ತೊಂದು ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ. ಇದುವರೆಗೆ ತಮ್ಮ ಹೆಸರಿನ ಜೊತೆಗೆ ತಂದೆಯ ಹೆಸರಿನ ಮೊದಲ ಅಕ್ಷರ ‘V’ (ವಿಜಯ್) ಎಂದು ಬಳಸುತ್ತಿದ್ದ ಜೇಸನ್, ಇನ್ನು ಮುಂದೆ ಅದನ್ನು ಕೈಬಿಡಲಿದ್ದಾರೆ. ಅದರ ಬದಲಾಗಿ ತಾಯಿ ಸಂಗೀತಾರ ಹೆಸರಿನ ಮೊದಲ ಅಕ್ಷರ ‘S’ ಅನ್ನು ಬಳಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ತಾವು ಸಂಪೂರ್ಣವಾಗಿ ತಾಯಿಯ ಪರವಾಗಿದ್ದೇನೆ ಎಂದು ಹೇಳಿದ್ದಾರೆ

ತ್ರಿಶಾ ಜೊತೆ ವಿಜಯ್ ಪ್ರತ್ಯಕ್ಷ

ವಿಚ್ಛೇದನ ಅರ್ಜಿ ಸಲ್ಲಿಕೆಯಾದ ಬೆನ್ನಲ್ಲೇ, ಸಾರ್ವಜನಿಕ ಸಮಾರಂಭವೊಂದರಲ್ಲಿ ವಿಜಯ್ ಅವರು ನಟಿ ತ್ರಿಶಾ ಅವರೊಂದಿಗೆ ಕಾಣಿಸಿಕೊಂಡಿದ್ದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಇದುವರೆಗೆ ರಹಸ್ಯವಾಗಿಟ್ಟಿದ್ದ ಸಂಬಂಧವನ್ನು ವಿಚ್ಛೇದನ ಅರ್ಜಿಯ ನಂತರ ವಿಜಯ್ ಬಹಿರಂಗಪಡಿಸುತ್ತಿದ್ದಾರೆ ಎಂದು ವಿಮರ್ಶಕರು ಟೀಕಿಸುತ್ತಿದ್ದಾರೆ. ಮತ್ತೊಂದೆಡೆ, ಜೇಸನ್ ಸಂಜಯ್ ಸದ್ಯ ತಮ್ಮ ಚೊಚ್ಚಲ ನಿರ್ದೇಶನದ ‘ಸಿಗ್ಮಾ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸಂಸಾರದ ಈ ಕದನ ವಿಜಯ್ ಅವರ ರಾಜಕೀಯ ಜೀವನದ ಮೇಲೂ ಪರಿಣಾಮ ಬೀರುತ್ತದೆಯೇ ಎಂಬ ಕುತೂಹಲ ಮೂಡಿಸಿದೆ.



Source link

Leave a Reply

Your email address will not be published. Required fields are marked *