Headlines

ಮಲ ಕೊಟ್ಟರೆ ಸಿಗುತ್ತೆ 1.5 ಕೋಟಿ ರೂಪಾಯಿ! ಖಂಡಿತ ಇದು ಸುಳ್ಳಲ್ಲ- ಏಕೆ ಇದಕ್ಕಿಷ್ಟು ಬೆಲೆ? | You Can Earn One And Half Crore By Selling Your Poop Viral Video Explains How Suc

ಮಲ ಕೊಟ್ಟರೆ ಸಿಗುತ್ತೆ 1.5 ಕೋಟಿ ರೂಪಾಯಿ! ಖಂಡಿತ ಇದು ಸುಳ್ಳಲ್ಲ- ಏಕೆ ಇದಕ್ಕಿಷ್ಟು ಬೆಲೆ? | You Can Earn One And Half Crore By Selling Your Poop Viral Video Explains How Suc



ಮಲ ಕೊಟ್ಟರೆ ಸಿಗುತ್ತೆ 1.5 ಕೋಟಿ ರೂಪಾಯಿ! ಖಂಡಿತ ಇದು ಸುಳ್ಳಲ್ಲ- ಏಕೆ ಇದಕ್ಕಿಷ್ಟು ಬೆಲೆ? | You Can Earn One And Half Crore By Selling Your Poop Viral Video Explains How Suc

ಅಮೆರಿಕ ಮೂಲದ ಹ್ಯೂಮನ್ ಮೈಕ್ರೋಬ್ಸ್ ಸಂಸ್ಥೆಯು ಆರೋಗ್ಯವಂತರಿಂದ ಮಲವನ್ನು ದಾನವಾಗಿ ಪಡೆದು ವಾರ್ಷಿಕ 1.5 ಕೋಟಿ ರೂ. ನೀಡುತ್ತಿದೆ. ಈ ಮಲವನ್ನು ಗಂಭೀರ ಕರುಳಿನ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಮಲ ಮೈಕ್ರೋಬಯೋಟಾ ಕಸಿ (FMT) ಗಾಗಿ ಬಳಸಲಾಗುತ್ತದೆ.

ಮಲ-ಮೂತ್ರ ಎಂದಾಕ್ಷಣ ಮುಖ ಕಿವುಚುವವರು, ಮೂಗು ಮುಚ್ಚಿಕೊಳ್ಳುವವರೇ ಹಲವರು. ಆದರೆ ಬಹುತೇಕ ಮಂದಿಗೆ ತಿಳಿದರಲಿಕ್ಕಿಲ್ಲ. ನಾವು ಬಳಸುವ ಕೆಲವು ಮಾತ್ರೆಗಳಲ್ಲಿ ಮನುಷ್ಯರ ಮಲದಲ್ಲಿನ ಸಾರವನ್ನೇ ಬಳಸಲಾಗುತ್ತಿದೆ ಎನ್ನುವ ಸತ್ಯ ಗೊತ್ತಿರಲಿಕ್ಕಿಲ್ಲ. ಮಲವನ್ನು ಶೋಧಿಸಿ, ಅದರಲ್ಲಿ ಅಗತ್ಯವಿರುವ ಸಾರವನ್ನು ಸಂಗ್ರಹಿಸಿ ಕ್ಯಾಪ್ಯೂಲ್​ಗಳಲ್ಲಿ ತುಂಬಿಸಿ ಕೆಲವೊಂದು ಕಾಯಿಲೆಗಳಿಗೆ ಮಾತ್ರೆಗಳ ರೂಪದಲ್ಲಿ ಕೊಡಲಾಗುತ್ತದೆ. ನಾವೆಲ್ಲರೂ ಒಂದಲ್ಲೊಂದು ರೂಪದಲ್ಲಿ ಈ ಮಲವನ್ನೇ ಸೇವಿಸಿದವರೇ. ಹಾಗಿದ್ದ ಮೇಲೆ ಇಲ್ಲಿ ಹೇಳುವ ವಿಷಯದ ಬಗ್ಗೆ ಹೆಚ್ಚಿನವರಿಗೆ ಅಚ್ಚರಿಯಾಗಲಿಕ್ಕಿಲ್ಲ. ಇಲ್ಲದಿದ್ದರೆ ಇದು ಸುಳ್ಳು ಸುದ್ದಿ ಎಂದು ಶೀರ್ಷಿಕೆ ನೋಡಿಯೇ ಕಮೆಂಟ್​ ಹಾಕುವವರೇ ಹೆಚ್ಚು.

ಇದು ಸುಳ್ಳಲ್ಲ, ನಿಜ

ಇದೀಗ ಅಂಥದ್ದೇ ಒಂದು ಸುದ್ದಿ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಅದು ನಿಮ್ಮ ಮಲವನ್ನು ಕೊಟ್ಟು ವಾರ್ಷಿಕವಾಗಿ 1.5 ಕೋಟಿ ರೂಪಾಯಿವರೆಗೂ ದುಡಿಯಬಹುದು ಎನ್ನುವ ಸುದ್ದಿ ಅದು. ಇದನ್ನು ಕೇಳಿ ಹಲವರು ನಕ್ಕು, ಮತ್ತೆ ಕೆಲವರು ವಿಡಿಯೋ ಮಾಡಿದವರಿಗೆ ಬೈದು, ಮತ್ತೆ ಹಲವರು ಕಮೆಂಟ್​ ಹಾಕಿದರು. ಆದರೆ ನಿಜಕ್ಕೂ ಇದು ಸುಳ್ಳು ಸುದ್ದಿಯಲ್ಲ. ಮೈಕೆಲ್ ಹ್ಯಾರೋಪ್ ಸ್ಥಾಪಿಸಿದ ಹ್ಯೂಮನ್ ಮೈಕ್ರೋಬ್ಸ್ ಎಂಬ ಅಮೆರಿಕ ಮೂಲದ ಸಂಸ್ಥೆಯು, ಇಂಥದ್ದೊಂದು ಆಫರ್​ ನೀಡಿದೆ. ಆದರೆ ನೀವು ಆರೋಗ್ಯವಂತರಾಗಿರಬೇಕು ಎನ್ನುವುದಷ್ಟೇ ಇದಕ್ಕಿರುವ ಕಂಡೀಷನ್​. ಉತ್ತಮ ಗುಣಮಟ್ಟದ ಮಲ ದಾನಕ್ಕಾಗಿ, ವಿಶೇಷವಾಗಿ ಮಲ ಮೈಕ್ರೋಬಯೋಟಾ ಕಸಿ (FMT) ಗಾಗಿ ವಾರ್ಷಿಕವಾಗಿ 180,000 ಡಾಲರ್​ (ಸುಮಾರು ₹1.5 ಕೋಟಿ) ವರೆಗೆ ನೀಡುತ್ತಿದೆ. ಕಂಪೆನಿಯು ಅಸಾಧಾರಣವಾಗಿ ಆರೋಗ್ಯಕರ, ಅಥ್ಲೆಟಿಕ್ ದಾನಿಗಳನ್ನು ಹುಡುಕುತ್ತಿದೆ, ಗಂಭೀರ ಕರುಳಿನ ಸ್ಥಿತಿಗಳಿಗೆ ಚಿಕಿತ್ಸೆ ನೀಡಲು FMT ಗಾಗಿ ಪ್ರತಿ ಮಾದರಿಗೆ ಸರಿಸುಮಾರು 500 ಡಾಲರ್​ ನೀಡುತ್ತದೆ.

ಇಷ್ಟು ದುಬಾರಿ ಏಕೆ?

ಸಂಸ್ಥೆಯು ಅಸಾಧಾರಣ, ರೋಗ-ನಿರೋಧಕ ಸೂಕ್ಷ್ಮಜೀವಿಗಳನ್ನು ಹೊಂದಿರುವ ದಾನಿಗಳನ್ನು ಹುಡುಕುತ್ತಿದೆ, ಇದು ಜನಸಂಖ್ಯೆಯ 0.1% ಕ್ಕಿಂತ ಕಡಿಮೆ ಎಂದು ಅವರು ಹೇಳುತ್ತಾರೆ. ಇದರ ಅರ್ಥ 100ರಲ್ಲಿ ಒಬ್ಬರೂ ಸಿಗುವುದು ಕಷ್ಟವಂತೆ! ಅಷ್ಟಕ್ಕೂ ಈ ಮಲವನ್ನು ತೀವ್ರವಾದ ಜಠರಗರುಳಿನ ಸಮಸ್ಯೆಗಳು ಮತ್ತು ಸಂಭಾವ್ಯವಾಗಿ ಮಾನಸಿಕ ಆರೋಗ್ಯ ಸ್ಥಿತಿಗಳನ್ನು ಹೊಂದಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಫೆಕಲ್ ಮೈಕ್ರೋಬಯೋಟಾ ಟ್ರಾನ್ಸ್‌ಪ್ಲಾಂಟ್ಸ್ (FMT) ಗಾಗಿ ದೇಣಿಗೆಗಳನ್ನು ಬಳಸಲಾಗುತ್ತದೆ.

ಕಠಿಣ ತಪಾಸಣೆ:

ಈ ಪ್ರಕ್ರಿಯೆಯು ಅತ್ಯಂತ ಆರೋಗ್ಯಕರವಾಗಿರುವುದರ ಜೊತೆಗೆ, “ಮಲ” ಅತ್ಯುನ್ನತ ಗುಣಮಟ್ಟದ್ದಾಗಿದೆ ಎಂದು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಾದ ತಪಾಸಣೆ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಈ ಬಗ್ಗೆ truelysimran ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಯುವತಿಯೊಬ್ಬಳು ಮಾಹಿತಿ ನೀಡಿದ್ದು, ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.



Source link

Leave a Reply

Your email address will not be published. Required fields are marked *