ಅಸ್ಟ್ರಾಲಾಜಿ ಪ್ರಕಾರ, ಪರ್ಸ್‌ನಲ್ಲಿ ಏಳು ತುಂಡಾಗದ ಅಕ್ಕಿ ಕಾಳು ಅಥವಾ ಚಕ್ಕೆಯ ತುಂಡನ್ನು ಇಟ್ಟುಕೊಳ್ಳುವುದರಿಂದ ಹಣದ ಹರಿವು ಹೆಚ್ಚಾಗುತ್ತದೆ. ಹುಣ್ಣಿಮೆ ಅಥವಾ ಅಮವಾಸ್ಯೆಯ ದಿನ ಇದನ್ನು ಬದಲಾಯಿಸುತ್ತಾ ಬಂದರೆ, ಪರ್ಸ್ ಎಂದಿಗೂ ಖಾಲಿಯಾಗುವುದಿಲ್ಲ ಎಂದು ನಂಬಲಾಗಿದೆ.

ಜ್ಯೋತಿಷ, ಸಂಖ್ಯಾಶಾಸ್ತ್ರ, ಜಾತಕ… ಇವೆಲ್ಲವನ್ನೂ ನಂಬುವ ಎಷ್ಟು ದೊಡ್ಡ ವರ್ಗ ಇದೆಯೋ, ನಂಬದ ವರ್ಗವೂ ಇದೆ. ಅದು ಅವರವರಿಗೆ ಬಿಟ್ಟಿರುವ ವಿಷಯ. ಆಸ್ತಿಕರು, ನಾಸ್ತಿಕರು ಎನ್ನುವಂತೆ ವಾಸ್ತು, ಜ್ಯೋತಿಷವೂ ಅದೇ ರೀತಿ. ಆದರೆ ಕೆಲವೊಮ್ಮೆ ಇದನ್ನೇ ನಂಬಿ ತಮ್ಮ ಭವಿಷ್ಯವನ್ನೇ ಬದಲಿಸಿಕೊಂಡವರೂ ಅದೆಷ್ಟೋ ಮಂದಿ ಇದ್ದಾರೆ. ಇದೇ ಕಾರಣಕ್ಕೆ ವಾಸ್ತು ಶಾಸ್ತ್ರವು ಜೀವನದಲ್ಲಿ ಅತ್ಯಂತ ಪ್ರಮುಖ ಎನ್ನಿಸುವುದು ಉಂಟು.

ಇನ್ನು ಹಣದ ವಿಷಯಕ್ಕೆ ಬರುವುದಾದರೆ, ಯಾವುದನ್ನು ನಂಬದವರು ಕೂಡ ನೋಡಿಯೇ ಬಿಡೋಣ ಎಂದು ಟ್ರೈ ಮಾಡುವವರು ಇದ್ದಾರೆ. ಆದರೆ ಹೀಗೆ ಟ್ರೈ ಮಾಡಿದವರಿಗೆ ಎಷ್ಟೋ ಮಂದಿಗೆ ಇದು ಸಕ್ಸಸ್ ಕೂಡ ತಂದಿದೆ ಎನ್ನುವುದೂ ಅಷ್ಟೇ ಸತ್ಯ. ಪ್ರಯತ್ನದ ಜೊತೆ ಅದೃಷ್ಟವೂ ಇದ್ದರೆ ಎಲ್ಲವೂ ಕೈಹಿಡಿಯುತ್ತದೆ ಎನ್ನುವುದು ಕೂಡ ಇದೆ ಅಲ್ಲವೆ?

ಇದೀಗ ಅಂಥದ್ದೇ ಒಂದು ಟಿಪ್ಸ್ ಇಲ್ಲಿ ನೀಡಲಾಗಿದೆ. ಇದು ಏಳು ಕಾಳು ಶುದ್ಧ ಅಕ್ಕಿಯ ಮಹಿಮೆ. ಇದನ್ನು ಪರ್ಸ್‌ನಲ್ಲಿ ಇಟ್ಟುಕೊಂಡರೆ ಪರ್ಸ್ ಖಾಲಿಯಾಗುವುದೇ ಇಲ್ಲ ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು. ಅದೇ ರೀತಿ ಚಕ್ಕೆ ಕೂಡ ಇದೇ ರೀತಿಯ ಪ್ರಭಾವವನ್ನು ಬೀರುತ್ತದೆ.

ಹಾಗಿದ್ದರೆ ಅಕ್ಕಿ ಮತ್ತು ಚಕ್ಕೆಯನ್ನು ಹೇಗೆ ಇಟ್ಟುಕೊಳ್ಳಬೇಕು ಎನ್ನುವ ಮಾಹಿತಿ ಇಲ್ಲಿ ನೀಡಲಾಗಿದೆ. ಅಕ್ಕಿಯನ್ನು ತೆಗೆದುಕೊಂಡರೆ, ಅದು ಏಳು ಕಾಳು ಅಕ್ಕಿ ಆಗಿರಬೇಕು. ತುಂಡಾಗದ ಸಂಪೂರ್ಣ ಬಿಳಿ ಬಣ್ಣದ ಅಕ್ಕಿಯನ್ನು ಆರಿಸಿಕೊಳ್ಳಿ. ಅದನ್ನು ಒಂದು ಕಾಗದದಲ್ಲಿ ಸುತ್ತಿ ಪರ್ಸ್‌ನಲ್ಲಿ ಇಟ್ಟುಕೊಳ್ಳಬೇಕು. ಹುಣ್ಣಿಮೆ ಅಥವಾ ಅಮವಾಸ್ಯೆಯ ದಿನ ಕಾಗದವನ್ನು ಗಿಡದ ಬುಡಕ್ಕೆ ಯಾರೂ ತುಳಿಯದ ಜಾಗದಲ್ಲಿ ಹಾಕಿ, ಅಕ್ಕಿಯನ್ನು ಹಕ್ಕಿಗಳಿಗೆ ಹಾಕಬೇಕು. ಹೀಗೆ ಮಾಡುತ್ತಾ ಇದ್ದರೆ ಪರ್ಸ್‌ನಲ್ಲಿ ಸದಾ ದುಡ್ಡು ಇರುತ್ತದೆ ಎನ್ನಲಾಗಿದೆ.

ಪರ್ಸ್‌ನಲ್ಲಿ ಚಿಕ್ಕ ಚಕ್ಕೆ ತುಂಡನ್ನು ಪರ್ಸ್‌ನಲ್ಲಿ ಇಟ್ಟುಕೊಂಡರೂ ಪರ್ಸ್‌ನಲ್ಲಿ ಸದಾ ಹಣ ಇರುತ್ತದೆ. ಇದನ್ನು ಕೂಡ ಹುಣ್ಣಿಗೆ ಅಥವಾ ಅಮವಾಸ್ಯೆಗೆ ಯಾರೂ ತುಳಿಯದ ಮರದ ಕೆಳಗೆ ಹಾಕಿ ಮತ್ತೆ ಹೊಸ ಚಕ್ಕೆಯ ತುಂಡನ್ನು ಇಟ್ಟುಕೊಳ್ಳಬೇಕು ಎನ್ನುತ್ತಾರೆ ತಜ್ಞರು.

Source link
ಏಳೇ ಏಳು ಕಾಳು ಅಕ್ಕಿ, ಪರ್ಸ್ ತುಂಬ ಹಣವೋ ಹಣ: ಸದಾ ಕೈತುಂಬ ಝಣ ಝಣ ಕಾಂಚಾಣ!