ಮತ್ತೆ ಕೇಳಿಬಂತು ಅನುಷ್ಕಾ ಶೆಟ್ಟಿ ಮದುವೆ ವಿಷಯ: ಈ ಬಾರಿ ಪ್ರಭಾಸ್ ಹೆಸರಿಲ್ಲ

ಮತ್ತೆ ಕೇಳಿಬಂತು ಅನುಷ್ಕಾ ಶೆಟ್ಟಿ ಮದುವೆ ವಿಷಯ: ಈ ಬಾರಿ ಪ್ರಭಾಸ್ ಹೆಸರಿಲ್ಲ


ಮತ್ತೆ ಕೇಳಿಬಂತು ಅನುಷ್ಕಾ ಶೆಟ್ಟಿ ಮದುವೆ ವಿಷಯ: ಈ ಬಾರಿ ಪ್ರಭಾಸ್ ಹೆಸರಿಲ್ಲ

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ (ಅನುಷ್ಕಾ ಶೆಟ್ಟಿ) ಅವರು ಬಣ್ಣದ ಲೋಕದಲ್ಲಿ ಸೂಪರ್ ಸಕ್ಸಸ್ ಕಂಡಿದ್ದಾರೆ. ಅನೇಕ ಸ್ಟಾರ್ ನಟರಿಗೆ ಜೋಡಿಯಾಗಿ ಮಿಂಚಿದ್ದಾರೆ. ಆದರೆ ನಿಜ ಜೀವನದಲ್ಲಿ ಅವರು ಸಿಂಗಲ್ ಆಗಿಯೇ ಉಳಿದುಕೊಂಡಿದ್ದಾರೆ. ಅವರ ಮದುವೆ (ಅನುಷ್ಕಾ ಶೆಟ್ಟಿ ಮದುವೆ) ಬಗ್ಗೆ ಆಗಾಗ ಗಾಸಿಪ್ ಕೇಳಿಬರುತ್ತಿದೆ. ಮತ್ತೊಮ್ಮೆ ಅವರ ಮದುವೆ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕಳೆದ ಹಲವು ವರ್ಷಗಳಿಂದ ನಟಿ ಅನುಷ್ಕಾ ಶೆಟ್ಟಿ ಅವರ ಹೆಸರು ಪ್ರಭಾಸ್ (ಪ್ರಭಾಸ್) ಜೊತೆ ತಳುಕು ಹಾಕಿಕೊಳ್ಳುತ್ತಲೇ ಇತ್ತು. ಆದರೆ ಈಗ ಬೇರೆ ವರನ ಬಗ್ಗೆ ಗಾಸಿಪ್ ಹಬ್ಬಿದೆ.

ಹೌದು, ಈ ಬಾರಿ ಅನುಷ್ಕಾ ಶೆಟ್ಟಿ ಮದುವೆ ಗಾಸಿಪ್ ಜೊತೆ ಪ್ರಭಾಸ್ ಹೆಸರು ಕೇಳಿಬಂದಿಲ್ಲ. ಏಕೆಂದರೆ, ಈ ಜೋಡಿ ಅನೇಕ ಬಾರಿ ‘ನಾವಿಬ್ಬರು ಜಸ್ಟ್ ಫ್ರೆಂಡ್ಸ್’ ಎಂಬ ಮೂಲಕ ಗಾಸಿಪ್ ಮಂದಿಯ ಬಾಯಿ ಮುಚ್ಚಿದ್ದಾರೆ. ಈ ಬಾರಿ ಹರಿದಾಡುತ್ತಿರುವ ಸುದ್ದಿ ಬೇರೆಯೇ ಆಗಿದೆ. ಈ ಸಲ ಅನುಷ್ಕಾ ಅವರ ಮದುವೆ ಯಾವುದೇ ನಟನ ಜೊತೆಗಲ್ಲ, ಬದಲಾಗಿ ಅವರ ಕುಟುಂಬಕ್ಕೆ ಮೊದಲೇ ಪರಿಚಯ ಇರುವ ಒಬ್ಬ ಉದ್ಯಮಿಯ ಜೊತೆಗೆ ನಂತರ ಎಂಬ ಗುಸುಗುಸು ಕೇಳುತ್ತಿದೆ.

ಮೂಲಗಳು, ಅನುಷ್ಕಾ ಶೆಟ್ಟಿ ಮತ್ತು ಈ ಉದ್ಯಮಿಯ ವಿವಾಹದ ಬಗ್ಗೆ ಕುಟುಂಬದ ಮಟ್ಟದಲ್ಲಿ ಮಾತುಕತೆಗಳು ಪ್ರಾರಂಭವಾಗಿವೆ. ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ನಡೆದರೆ, 2026ರಲ್ಲೇ ಅನುಷ್ಕಾ ಶೆಟ್ಟಿ ಅವರು ಸಪ್ತಪದಿ ತುಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಸಾಮಾನ್ಯವಾಗಿ ಅನುಷ್ಕಾ ಶೆಟ್ಟಿ ಅವರು ತಮ್ಮ ಖಾಸಗಿ ಜೀವನದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದಿಲ್ಲ. ತಮ್ಮ ಬಗ್ಗೆ ಬರುವ ವದಂತಿಗಳಿಗೆ ಅವರು ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅವರು ಸಹ ಅವರು ಈ ಮದುವೆಯ ಸುದ್ದಿಯ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ವರನ ಗುರುತನ್ನು ಅತ್ಯಂತ ಗೌಪ್ಯವಾಗಿ ಇಡಲಾಗಿತ್ತು, ಮದುವೆಯ ತಯಾರಿಗಳ ಬಗ್ಗೆ ಯಾವುದೇ ಸುಳಿವು ಹೊರಬೀಳದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಗಾಸಿಪ್ ಮಂದಿ ಮಾತನಾಡುತ್ತಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳಿಂದ ಇನ್ನಷ್ಟು ದೂರ ಸರಿದ ನಟಿ ಅನುಷ್ಕಾ ಶೆಟ್ಟಿ

ಸದ್ಯಕ್ಕೆ ನಟನೆಯಿಂದ ಅನುಷ್ಕಾ ಶೆಟ್ಟಿ ಅವರು ದೂರ ಉಳಿದಿದ್ದಾರೆ. ‘ಬಾಹುಬಲಿ’ ರೀತಿಯ ಬ್ಲಾಕ್ ಬಸ್ಟರ್ ಹಿಟ್ ನೀಡಿದ್ದರು ಕೂಡ ಅನುಷ್ಕಾ ಅವರು ಈಗ ಸಿನಿಮಾಗಳಲ್ಲಿ ನಟಿಸುವುದು ಕಡಿಮೆಯಾಗಿದೆ. ಅವರನ್ನು ಮತ್ತೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನೋಡಲು ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *