Headlines

Gold loan auction regulation ಚಿನ್ನದ ಸಾಲ ಪಡೆದಿದ್ದೀರಾ? ನಿಮಗಾಗಿ ವಿಧಾನಪರಿಷತ್ತಿನಲ್ಲಿ ಹೊಸ ವಿಧೇಯಕ ಮಂಡನೆ | Karnataka New Bill Tabled In Legislative Council For Gold Loan Borrowers Rav

ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್‌ನ ರಮೇಶ್‌ ಬಾಬು ಅವರು ‘ಕರ್ನಾಟಕ ಚಿನ್ನ ಅಡಮಾನವಿಟ್ಟ ಸಾಲಗಾರರ ರಕ್ಷಣಾ ವಿಧೇಯಕ 2025’ ಎಂಬ ಖಾಸಗಿ ವಿಧೇಯಕವನ್ನು ಮಂಡಿಸಿದ್ದಾರೆ. ಈ ವಿಧೇಯಕವು ಚಿನ್ನದ ಸಾಲಗಾರರ ಹಿತರಕ್ಷಣೆಗಾಗಿ, ಅಡವಿಟ್ಟ ಚಿನ್ನದ ಹರಾಜು ಪ್ರಕ್ರಿಯೆಯನ್ನು ನಿಯಂತ್ರಣ ಉದ್ದೇಶಿಸಿದೆ.

ವಿಧಾನಪರಿಷತ್ತು (ಮಾ.14): ಚಿನ್ನಾಭರಣವನ್ನು ಅಡಮಾನವಿಟ್ಟು ಸಾಲ ಪಡೆಯುವವರ ಹಿತರಕ್ಷಣೆಗಾಗಿ ಕರ್ನಾಟಕ ಚಿನ್ನ ಅಡಮಾನವಿಟ್ಟ ಸಾಲಗಾರರ ರಕ್ಷಣಾ ವಿಧೇಯಕ 2025 ಖಾಸಗಿ ವಿಧೇಯಕವನ್ನು ಕಾಂಗ್ರೆಸ್‌ನ ರಮೇಶ್‌ ಬಾಬು ಮಂಡಿಸಿದರು.

ರಾಜ್ಯದಲ್ಲಿ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮತ್ತು ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಚಿನ್ನದ ಆಭರಣಗಳನ್ನು ಅಡಮಾನವಿಡುವ ಸಾಲಗಾರರ ರಕ್ಷಣೆಗಾಗಿ ಮತ್ತು ಅಡಮಾನವಿಟ್ಟ ಚಿನ್ನದ ಹರಾಜು ಪ್ರಕ್ರಿಯೆ ನಿಯಂತ್ರಿಸುವುದಕ್ಕಾಗಿ ಖಾಸಗಿ ವಿಧೇಯಕ ಮಂಡಿಸಲಾಗಿದೆ ಎಂದು ರಮೇಶ್‌ ಬಾಬು ವಿವರಣೆ ನೀಡಿದರು.

ಇದನ್ನೂ ಓದಿ: LPG: ಇನ್ನೂ 10 ದಿನ ಹೋಟೆಲ್‌ ಸಿಲಿಂಡರ್‌ ಸಿಗೋದು ಕಷ್ಟ, ತಾಳ್ಮೆ ವಹಿಸಿ: ಮುನಿಯಪ್ಪ

ವಿಧೇಯಕದಲ್ಲಿ ಅಡವಿಟ್ಟ ಚಿನ್ನದ ಹರಾಜಿಗಿಂತ ಮೊದಲು 180 ದಿನಗಳ ಕನಿಷ್ಠ ನೋಟಿಸ್‌ ಅವಧಿ ನಿಗದಿ ಮಾಡುವುದು, ಪಾರದರ್ಶಕ ಮೌಲ್ಯಮಾಪನ, ಸೂಕ್ತ ಸಂವಹನ ಮತ್ತು ಚಿನ್ನ ಬಿಡಿಸಿಕೊಳ್ಳುವಿಕೆಗೆ ಕಡ್ಡಾಯ ಅವಕಾಶ ನೀಡುವುದು, ಪರವಾನಗಿ ಪಡೆದವರಿಂದ ಮತ್ತು ಮೇಲ್ವಿಚಾರಣೆಯ ಕಾರ್ಯವಿಧಾನಗಳ ಮೂಲಕ ಹರಾಜು ಪ್ರಕ್ರಿಯೆಯನ್ನು ನಿಯಂತ್ರಿಸುವುದು ಹಾಗೂ ಸಾಲಗಾರರ ರಕ್ಷಣಾ ಮಾನದಂಡಗಳ ಉಲ್ಲಂಘನೆ ಮಾಡಿದರೆ ದಂಡ ವಿಧಿಸಲು ಖಾಸಗಿ ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.

Source link

Leave a Reply

Your email address will not be published. Required fields are marked *