ಯಲ್ಲಮ್ಮ ದೇವಸ್ಥಾನದಲ್ಲಿ ದಾಖಲೆ ಕಾಣಿಕೆ: 9.92 ಕೋಟಿ ಹಣ, ಚಿನ್ನ, ಬೆಳ್ಳಿ ಸಂಗ್ರಹ | Record Donation At Savadattti Yellamma Temple Rs 9 Point 92 Crore In Cash Gold Silver Collected Mrq

ಪ್ರಸಿದ್ಧ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ನಡೆದ ಹುಂಡಿ ಎಣಿಕೆಯಲ್ಲಿ ದಾಖಲೆಯ ₹3.07 ಕೋಟಿ ಕಾಣಿಕೆ ಸಂಗ್ರಹವಾಗಿದೆ. ಈ ಎಣಿಕೆಯಲ್ಲಿ ₹2.78 ಕೋಟಿ ನಗದು, 100 ಗ್ರಾಂ ಚಿನ್ನ ಹಾಗೂ ಸುಮಾರು 4.5 ಕೆಜಿ ಬೆಳ್ಳಿ ಸೇರಿದೆ. 

ಬೆಳಗಾವಿ: ಪ್ರಸಿದ್ಧ ಪುಣ್ಯಕ್ಷೇತ್ರ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಭಕ್ತರ ನೀಡಿದ ಕಾಣಿಕೆಯಲ್ಲಿ ದಾಖಲೆಯಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಕೋಟಿಗಟ್ಟಲೆ ಹಣ ಹಾಗೂ ಕೆಜಿಗಟ್ಟಲೆ ಚಿನ್ನಾಭರಣ ಸಂಗ್ರಹವಾಗಿದೆ. 2025-26ನೇ ವರ್ಷದಲ್ಲಿ ಮಾರ್ಚ್ 9 ರಿಂದ 12 ರವರೆಗೆ ನಡೆದ ಹುಂಡಿ ಎಣಿಕೆ ಕಾರ್ಯವು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಒಟ್ಟು ₹3.07 ಕೋಟಿ ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಭಾರಿ ಪ್ರಮಾಣದ ನಗದು ಹಾಗೂ ಆಭರಣಗಳು

ಕಳೆದ ವಾರವಷ್ಟೇ ಒಂದು ಸುತ್ತಿನ ಎಣಿಕೆ ಕಾರ್ಯ ನಡೆದಿದ್ದರೂ, ಈ ಬಾರಿಯ ಎಣಿಕೆಯಲ್ಲಿ ಭಾರಿ ಪ್ರಮಾಣದ ನಗದು ಹಾಗೂ ಆಭರಣಗಳು ಹರಿದು ಬಂದಿದೆ. ಒಟ್ಟು ₹2.78 ಕೋಟಿ ನಗದು ಹಣದ ಜೊತೆಗೆ, ₹16.16 ಲಕ್ಷ ಮೌಲ್ಯದ 100 ಗ್ರಾಂ ಚಿನ್ನಾಭರಣ ಹಾಗೂ ₹12.35 ಲಕ್ಷ ಬೆಲೆಯ ಸುಮಾರು 4 ಕೆಜಿ 547 ಗ್ರಾಂ ಬೆಳ್ಳಿ ಆಭರಣಗಳು ಸಂಗ್ರಹವಾಗಿವೆ. ಈ ಬೃಹತ್ ಎಣಿಕೆ ಕಾರ್ಯದಲ್ಲಿ ದೇವಸ್ಥಾನದ ನೂರಾರು ಸಿಬ್ಬಂದಿಯೊಂದಿಗೆ ಸ್ಥಳೀಯ ಕಾಲೇಜು ವಿದ್ಯಾರ್ಥಿಗಳು ಸಹ ಉತ್ಸಾಹದಿಂದ ಭಾಗವಹಿಸಿ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಿದರು.

9.92 ಕೋಟಿ ಹಣ, ಚಿನ್ನ, ಬೆಳ್ಳಿ ಸಂಗ್ರಹ

ಸುಕ್ಷೇತ್ರ ಯಲ್ಲಮ್ಮಾ ದೇವಸ್ಥಾನದ ಭಕ್ತರಿಂದ ಸಂಗ್ರಹಗೊಂಡ ಕಾಣಿಕೆಯ ಹುಂಡಿಗಳ ಎಣಿಕೆ ಕಾರ್ಯ ಮಾ.3ರಿಂದ ಪ್ರಾರಂಭವಾಗಿ ಮಾ.12ಕ್ಕೆ ಮುಕ್ತಾಯಗೊಂಡಿದ್ದು, 2025-26ನೇ ಸಾಲಿಗೆ ಒಟ್ಟು ₹ 9.92 ಕೋಟಿ ನಗದು ಹಣ ಸಂಗ್ರಹಗೊಂಡಿದೆ. ಎಣಿಕೆ ಕಾರ್ಯದಲ್ಲಿ ₹ 3.72 ಕೋಟಿ ನಗದು ಹಣ ಸಂಗ್ರಹವಾಗಿದ್ದು, ₹ 17.66 ಲಕ್ಷ ಮೌಲ್ಯದ ಬಂಗಾರ ಹಾಗೂ ₹ 14.27ಲಕ್ಷ ಮೌಲ್ಯದ ಬೆಳ್ಳಿ ಸಂಗ್ರಹವಾಗಿದೆ.

2025-26ನೇ ಸಾಲಿಗೆ ಒಟ್ಟು ₹ 74.889 ಲಕ್ಷ ಮೌಲ್ಯದ ಚಿನ್ನ ಹಾಗೂ ₹ 38.35 ಲಕ್ಷ ಮೌಲ್ಯದ ಬೆಳ್ಳಿ ಸಂಗ್ರಹಗೊಂಡಿದೆ ಎಂದು ರೇಣುಕಾ ಯಲ್ಲಮ್ಮಾ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ತಿಳಿಸಿದ್ದಾರೆ.

Source link

Leave a Reply

Your email address will not be published. Required fields are marked *