Headlines

ಇದು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಗಂಭೀರ್ ನೀಡಿದ ಎಚ್ಚರಿಕೆ..!

ಇದು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಗಂಭೀರ್ ನೀಡಿದ ಎಚ್ಚರಿಕೆ..!


ಇದು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಗಂಭೀರ ಎಚ್ಚರಿಕೆ..!

2026ರ ಟಿ20 ಫೈನಲ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿದ ನಂತರ, ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಆಟಗಾರರ ವೈಯಕ್ತಿಕ ಮೈಲಿಗಲ್ಲುಗಳ (ಶತಕ, ಅರ್ಧಶತಕ) ಕುರಿತು ಕಟುವಾದ ಮಾತುಗಳನ್ನಾಡಿದ್ದರು. ಭಾರತೀಯ ಕ್ರಿಕೆಟ್‌ನಲ್ಲಿ ಕಾಲದಿಂದ ನಾವು ವೈಯಕ್ತಿಕ ಮೈಲಿಗಲ್ಲುಗಳ ಬಗ್ಗೆ ಮಾತನಾಡುತ್ತಿದ್ದೇವೆ. ಇನ್ಮುಂದೆ ವೈಯಕ್ತಿಕ ದಾಖಲೆಗಳಿಗಾಗಿ ಆಡುವುದನ್ನು ನಿಲ್ಲಿಸಿ, ಟ್ರೋಫಿ ಗೆಲುವು ಸಾಧಿಸಿದೆ ಎಂದು ಗಂಭೀರ ಹೇಳಿಕೆ ನೀಡಿದ್ದರು.

ಗೌತಮ್ ಗಂಭೀರ್ ಅವರ ಈ ಹೇಳಿಕೆಯು ಟೀಮ್ ಇಂಡಿಯಾದ ದಿಗ್ಗಜರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಎಚ್ಚರಿಕೆ ನೀಡಿದ ಇಂಗ್ಲೆಂಡ್‌ನ ಮಾಜಿ ವೇಗಿ ಸ್ಟೀವ್ ಹಾರ್ಮಿಸನ್ ಅಭಿಪ್ರಾಯಪಟ್ಟಿದ್ದಾರೆ.

ರೋಹಿತ್ ಮತ್ತು ಕೊಹ್ಲಿ ಭಾರತೀಯ ಕ್ರಿಕೆಟ್‌ನ ದಿಗ್ಗಜರು. ಅತಿ ಹೆಚ್ಚು ಶತಕ ಮತ್ತು ದಾಖಲೆಗಳನ್ನು ಹೊಂದಿರುವವರು ಅವರೇ. ಆದ್ದರಿಂದ ಗಂಭೀರ್ ಅವರ ಮಾತುಗಳು ನೇರವಾಗಿ ಇಬ್ಬರಿಗೇ ಅನ್ವಯಿಸುತ್ತವೆ ಎಂದು ಹಾರ್ಮಿಸನ್ ಹೇಳಿದ್ದಾರೆ.

ಇಲ್ಲಿ ಒಂದು ಗೆಲುವಿನ ಬಳಿಕ ಇಂತಹ ಹೇಳಿಕೆ ನೀಡಬೇಕಾದ ಅವಶ್ಯಕತೆ ಇಲ್ಲ. ಅದರಲ್ಲೂ ಟಿ20 ನಲ್ಲಿ ಟೀಮ್ ಇಂಡಿಯಾ ಆಟಗಾರರು ದಾಖಲೆಗಳಿಗಾಗಿ ಆಡಿಲ್ಲ ಎಂಬುದು ಗಂಭೀರ್‌ಗೆ ಗೊತ್ತಿತ್ತು. ಇದಾಗ್ಯೂ ಅವರು ಇನ್ಮುಂದೆ ದಾಖಲೆಗಳಿಗಾಗಿ ಆಡುವುದನ್ನು ನಿಲ್ಲಿಸಬೇಕೆಂದು ಹೇಳುವುದು ಯಾರಿಗೆ? ಎಂಬ ಪ್ರಶ್ನೆ ಮೂಡುತ್ತದೆ.

ಈ ಪ್ರಶ್ನೆಗೆ ಉತ್ತರ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ. ಈ ಇಬ್ಬರನ್ನು ಗುರಿಯಾಗಿಸಿ ಗಂಭೀರ್ ಪರೋಕ್ಷ ಟಾಂಗ್ ನೀಡಿದೆ. ಏಕೆಂದರೆ ರೋಹಿತ್ ಹಾಗೂ ಕ್ರಿಕೆಟ್ ಹೆಸರಿನಲ್ಲಿ ಹಲವು ದಾಖಲೆಗಳಿವೆ. ಇದೀಗ ಅವರು ತಂಡದಲ್ಲಿಲ್ಲ. ಮುಂದೆ ಏಕದಿನ ಸರಣಿ ವೇಳೆ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಅದಕ್ಕೂ ಮುನ್ನ ಇಬ್ಬರ ದಾಖಲೆಗಳನ್ನು ಬದಿಗಿರಿಸಿ ಟ್ರೋಫಿ ಗೆಲ್ಲಲು ನೋಡಬೇಕು ಎಂದು ಗೌತಮ್ ಗಂಭೀರ್ ಪರೋಕ್ಷ ಎಚ್ಚರಿಕೆ ರವಾನಿಸಿದ್ದಾರೆ ಎಂದು ಸ್ಟೀವ್ ಹಾರ್ಮಿಸನ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಮುಂದಿನ ಏಕದಿನ ಸರಣಿಗಳಿಗೆ ಇಬ್ಬರು ಹಿರಿಯ ಆಟಗಾರರು ಮರಳಿದಾಗ ಗೌತಮ್ ಗಂಭೀರ್ ಅವರ ಈ ಕಠಿಣ ನಿಲುವು ತಂಡದ ಒಳಗಿನ ವಾತಾವರಣದ ಮೇಲೆ ಪ್ರಭಾವ ಬೀರಬಹುದು ಎಂದು ಸಹ ಹಾರ್ಮಿಸನ್ ಭರವಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಭಾರತವನ್ನು ಹೊರಹಾಕಬಹುದಿತ್ತು, ಸೌತ್ ಆಫ್ರಿಕನ್ನರು ದಡ್ಡರು..!

ಒಟ್ಟಾರೆಯಾಗಿ, ಗಂಭೀರ ಅವರು “ತಂಡ ಮೊದಲು, ವೈಯಕ್ತಿಕ ದಾಖಲೆ ಆಮೇಲೆ” ಎಂಬ ಹೊಸ ಸಂಸ್ಕೃತಿಯನ್ನು ಜಾರಿಗೆ ತರಲು ಅವರು ಪ್ರಯತ್ನಿಸಿದರು, ಇದರ ನಡುವೆ ನೀಡಿದ ಹೇಳಿಕೆಯು ನೇರವಾಗಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಗುರಿಯಾಗಿಸಿದೆ. ಗಂಭೀರ್ ಅವರ ನಡೆಯು ಉತ್ತಮವಾಗಿದ್ದರೂ ಇಂತಹ ಹೇಳಿಕೆಗಳು ತಂಡದ ಡ್ರೆಸ್ಸಿಂಗ್ ರೂಮ್ನ ವಾತಾವರಣದ ಮೇಲೆ ಪರಿಣಾಮ ಬೀರಬಹುದು ಎಂದು ಸ್ಟೀವ್ ಹಾರ್ಮಿಸನ್ ಅಭಿಪ್ರಾಯಪಟ್ಟಿದ್ದಾರೆ.

 



Source link

Leave a Reply

Your email address will not be published. Required fields are marked *