Headlines

ಇರಾನ್ ಯುದ್ಧದ ನಡುವೆಯೂ ಏಕೆ ಕುಸಿಯುತ್ತಿದೆ ಚಿನ್ನದ ಬೆಲೆ? ಹೂಡಿಕೆದಾರರೇ ಗಮನಿಸಿ, ಇಲ್ಲಿದೆ ತಜ್ಞರ ವಿಶ್ಲೇಷಣೆ | Gold Prices Drop Despite Iran Conflict Experts Explain Why Rav

ಇರಾನ್ ಯುದ್ಧದ ನಡುವೆಯೂ ಏಕೆ ಕುಸಿಯುತ್ತಿದೆ ಚಿನ್ನದ ಬೆಲೆ? ಹೂಡಿಕೆದಾರರೇ ಗಮನಿಸಿ, ಇಲ್ಲಿದೆ ತಜ್ಞರ ವಿಶ್ಲೇಷಣೆ | Gold Prices Drop Despite Iran Conflict Experts Explain Why Rav



ಇರಾನ್ ಯುದ್ಧದ ನಡುವೆಯೂ ಏಕೆ ಕುಸಿಯುತ್ತಿದೆ ಚಿನ್ನದ ಬೆಲೆ? ಹೂಡಿಕೆದಾರರೇ ಗಮನಿಸಿ, ಇಲ್ಲಿದೆ ತಜ್ಞರ ವಿಶ್ಲೇಷಣೆ | Gold Prices Drop Despite Iran Conflict Experts Explain Why Rav

ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧದ ಉದ್ವಿಗ್ನತೆ ಹೆಚ್ಚುತ್ತಿದ್ದರೂ, ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಏರಿಕೆಯಾಗುವ ಬದಲು ಕುಸಿಯುತ್ತಿವೆ. ಈ ಅನಿರೀಕ್ಷಿತ ಬೆಲೆ ಇಳಿಕೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಯುಎಸ್ ಡಾಲರ್ ಸೂಚ್ಯಂಕದ ಬಲವರ್ಧನೆಯೇ ಪ್ರಮುಖ ಕಾರಣವೆಂದು ತಜ್ಞರು ವಿಶ್ಲೇಷಿಸಿದ್ದಾರೆ.

ಯುದ್ಧದ ಕಾರ್ಮೋಡ ಮತ್ತು ಮಾರುಕಟ್ಟೆಯ ವಿಚಿತ್ರ ನಡೆ

ಇರಾನ್ ಪ್ರಸ್ತುತ ಅಮೆರಿಕ ಮತ್ತು ಇಸ್ರೇಲ್‌ನಿಂದ ನಿರಂತರವಾಗಿ ದಾಳಿಗಳನ್ನು ಎದುರಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೊಲ್ಲಿ ರಾಷ್ಟ್ರಗಳ ಮೇಲೆ ನಿರಂತರ ಡ್ರೋನ್, ಕ್ಷಿಪಣಿ ದಾಳಿ ನಡೆಸುವ ಮೂಲಕ ತನ್ನ ಶಕ್ತಿ ಪ್ರದರ್ಶಿಸುತ್ತಿದೆ. ಯುದ್ಧ ಆರಂಭವಾಗಿ ಇವತ್ತಿಗೆ ಸುಮಾರು 12 ದಿನಗಳು ಕಳೆದಿವೆ. ಆದರೆ ಇಲ್ಲೊಂದು ವಿಷಯ ಗಮನಿಸಬೇಕು. ಸಾಮಾನ್ಯವಾಗಿ ಇಂತಹ ಜಾಗತಿಕ ಬಿಕ್ಕಟ್ಟುಗಳು ಎದುರಾದಾಗ ಚಿನ್ನ ಬೆಳ್ಳಿ ದರ ಗಗನಕ್ಕೆ ಏರುತ್ತವೆ. ಆದರೆ, ಈ ಬಾರಿಯ ಇರಾನ್ ಯುದ್ಧದ ಸಮಯದಲ್ಲಿ ಮಾರುಕಟ್ಟೆ ಅತ್ಯಂತ ಕುತೂಹಲಕಾರಿ ವಿಚಿತ್ರವಾಗಿ ತೋರುತ್ತಿದೆ.

ಜಾಗತಿಕ ಉದ್ವಿಗ್ನತೆ ನಡುವೆಯೂ ಚಿನ್ನ ಬೆಳ್ಳಿ ಕುಸಿಯುತ್ತಿರುವುದೇಕೆ?

ಸಾಮಾನ್ಯವಾಗಿ ಜಾಗತಿಕ ರಾಜಕೀಯ ಉದ್ವಿಗ್ನತೆ ಅಥವಾ ದೊಡ್ಡ ಮಟ್ಟದ ಯುದ್ಧಗಳು ಸಂಭವಿಸಿದಾಗ, ಹೂಡಿಕೆದಾರರು ಷೇರು ಮಾರುಕಟ್ಟೆಯ ಅಪಾಯದಿಂದ ಬಚಾವಾಗಲು ‘ಸುರಕ್ಷಿತ ತಾಣ’ (Safe Haven) ಎಂದು ಕರೆಯಲ್ಪಡುವ ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಇದರಿಂದ ಬೇಡಿಕೆ ಹೆಚ್ಚಿ ಬೆಲೆ ಏರಿಕೆಯಾಗುತ್ತದೆ. ಆದರೆ ಪ್ರಸ್ತುತ ಸನ್ನಿವೇಶ ಯುದ್ಧದ ತೀವ್ರತೆ ಹೆಚ್ಚಿದ್ದರೂ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಏರುವ ಬದಲು ಇಳಿಯುತ್ತಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೇಗಿದೆ ಚಿನ್ನದ ಬೆಲೆ?

ಫೆಬ್ರವರಿ 28 ರಂದು ಇರಾನ್ ಸಂಘರ್ಷ ಆರಂಭವಾದಾಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ $5,416 ರಷ್ಟಿತ್ತು. ಆದರೆ ಮಧ್ಯಪ್ರಾಚ್ಯದ ಉದ್ವಿಗ್ನತೆ ಶಮನವಾಗುವ ಲಕ್ಷಣ ಕಾಣದಿದ್ದರೂ, ಬೆಲೆ ಮಾತ್ರ ಪ್ರತಿ ಔನ್ಸ್‌ಗೆ $5,108 ಕ್ಕೆ ಕುಸಿದಿದೆ. ಅಂದರೆ ಅನಿಶ್ಚಿತತೆಯ ನಡುವೆಯೂ ಹಳದಿ ಲೋಹ ತನ್ನ ಹೊಳಪನ್ನು ಕಳೆದುಕೊಳ್ಳುತ್ತಿರುವುದು ಇದರಿಂದ ತಿಳಿಯುತ್ತದೆ.

ಭಾರತೀಯ ಮಾರುಕಟ್ಟೆಯಲ್ಲೂ ಚಿನ್ನ ಬೆಳ್ಳಿ ಬೆಲೆ ಇಳಿಕೆ!

ಭಾರತದ ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ನಲ್ಲೂ ಇದೇ ರೀತಿಯ ಪ್ರವೃತ್ತಿ ಕಂಡುಬಂದಿದೆ. ಫೆಬ್ರವರಿ 28 ರಂದು 10 ಗ್ರಾಂ ಚಿನ್ನದ ಬೆಲೆ ಸುಮಾರು 1.67 ಲಕ್ಷ ರೂ. ಇತ್ತು, ಆದರೆ ಈಗ ಅದು 1.59 ಲಕ್ಷ ರೂ. ಗಳಿಗೆ ಇಳಿಕೆಯಾಗಿದೆ. ಕೇವಲ ಚಿನ್ನ ಮಾತ್ರವಲ್ಲದೆ ಬೆಳ್ಳಿಯ ಬೆಲೆಯೂ ಸಹ ಫೆಬ್ರವರಿ 28 ರಂದು ಕೆಜಿಗೆ 2.89 ಲಕ್ಷ ರೂ. ಇದ್ದದ್ದು, ಮಾರ್ಚ್ 13 ರ ಹೊತ್ತಿಗೆ 2.62 ಲಕ್ಷ ರೂ. ಗೆ ಕುಸಿದು ಹೂಡಿಕೆದಾರರಲ್ಲಿ ಗೊಂದಲ ಮೂಡಿಸಿದೆ.

ಬೆಲೆ ಇಳಿಕೆಗೆ ಅಸಲಿ ಕಾರಣವೇನು? ತಜ್ಞರ ಹೇಳೋದೇನು?

ಮಾರುಕಟ್ಟೆ ತಜ್ಞರ ಪ್ರಕಾರ, ಯುದ್ಧ ನಡೆಯುತ್ತಿದ್ದರೂ ಚಿನ್ನದ ಬೆಲೆ ಕುಸಿಯಲು ಪ್ರಮುಖ ಕಾರಣವೆಂದರೆ ‘ಯುಎಸ್ ಡಾಲರ್ ಸೂಚ್ಯಂಕ’ದ (US Dollar Index) ಬಲವರ್ಧನೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಹೆಚ್ಚಾದಾಗ, ಇತರ ಕರೆನ್ಸಿಗಳನ್ನು ಬಳಸುವವರಿಗೆ ಚಿನ್ನದ ಖರೀದಿ ದುಬಾರಿಯಾಗುತ್ತದೆ. ಈ ಕಾರಣದಿಂದಾಗಿ ಜಾಗತಿಕ ಮಟ್ಟದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೇಡಿಕೆ ತಾತ್ಕಾಲಿಕವಾಗಿ ಕಡಿಮೆಯಾಗಿದ್ದು, ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿದೆ.



Source link

Leave a Reply

Your email address will not be published. Required fields are marked *