‘ಸನ್​ರೈಸರ್ಸ್’ ​ತಂಡದಿಂದ ಪಾಕ್ ಆಟಗಾರನಿಗೆ ಗೇಟ್ ಪಾಸ್?

‘ಸನ್​ರೈಸರ್ಸ್’ ​ತಂಡದಿಂದ ಪಾಕ್ ಆಟಗಾರನಿಗೆ ಗೇಟ್ ಪಾಸ್?


'ಸನ್ ರೈಸರ್ಸ್' ತಂಡದಿಂದ ಪಾಕ್ ಆಟಗಾರನಿಗೆ ಗೇಟ್ ಪಾಸ್?

ದಿ ಹಂಡ್ರೆಡ್ ಲೀಗ್‌ನಲ್ಲಿ ಪಾಕಿಸ್ತಾನ್ ಆಟಗಾರ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿ ಇದೀಗ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಇಕ್ಕಟ್ಟಿಗೆ ಸಿಲುಕಿದೆ. ಮಾರ್ಚ್ 12, 2026 ರಂದು ನಡೆದ ಹರಾಜಿನಲ್ಲಿ ಅಬ್ರಾರ್ ಅಹ್ಮದ್ ಅವರ ಎಸ್‌ಆರ್‌ಹೆಚ್ ಮಾಲೀಕತ್ವದ ಸನ್‌ರೈಸರ್ಸ್ ಲೀಡ್ಸ್ ಫ್ರಾಂಚೈಸಿಯು ಬರೋಬ್ಬರಿ £1,90,000 (ಸುಮಾರು ₹2.34 ಕೋಟಿ) ಮೊತ್ತಕ್ಕೆ ಖರೀದಿಸಲಾಗಿದೆ.

ಇತ್ತ ಭಾರತೀಯ ವಿರೋಧಿ ಹೊಂದಿರುವ ಪಾಕ್ ಆಟಗಾರನನ್ನು ಖರೀದಿಸಲು ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಈ ಆಕ್ರೋಶದೊಂದಿಗೆ ಸನ್‌ರೈಸರ್ಸ್ ಲೀಡ್ಸ್‌ನ ‘X’ (ಟ್ವಿಟರ್) ಖಾತೆಯನ್ನು ವರದಿ ಮಾಡಿದ ಪರಿಣಾಮ ಎಸ್‌ಆರ್‌ಎಲ್ ತಂಡದ ಸೋಷಿಯಲ್ ಮೀಡಿಯಾ ಖಾತೆಯು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಇದೀಗ ಭಾರತ ಸೇರಿದಂತೆ ಎಲ್ಲರಿಂದ ಎಸ್ ಆರ್ ಅಭಿಮಾನಿಗಳ ಒತ್ತಡ ಹೆಚ್ಚಾಗುವುದರಿಂದ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಪಾಕ್ ಆಟಗಾರನನ್ನು ಕೈ ಬಿಡುವ ಬಗ್ಗೆ ಚಿಂತಿಸಲಾಗಿದೆ ಎಂದು ವರದಿಯಾಗಿದೆ. ಆದರೆ ಅದಕ್ಕೂ ಮುನ್ನ ಒಂದಷ್ಟು ನಿಯಮಗಳು ಪಾಲಿಸಬೇಕಾದ ಅನಿವಾರ್ಯತೆ ಎಸ್ ಆರ್ ಹೆಚ್ ಫ್ರಾಂಚೈಸಿ ಮುಂದಿದೆ.

ಕೈಬಿಡಲು ಇರುವ ಕಾರಣಗಳು:

  • ಭಾರತೀಯರ ಅಭಿಮಾನಿಗಳ ಆಕ್ರೋಶ: ಸನ್‌ರೈಸರ್ಸ್ ಹೈದರಾಬಾದ್ (SRH) ಭಾರತೀಯ ಮೂಲದ ಫ್ರಾಂಚೈಸಿ. ಅಬ್ರಾರ್ ಅವರ ಹಳೆಯ ವಿವಾದಾತ್ಮಕ ಪೋಸ್ಟ್‌ಗಳಿಂದ ಭಾರತೀಯ ಅಭಿಮಾನಿಗಳು ತಂಡವನ್ನು ಬಹಿಷ್ಕರಿಸುವಂತೆ ಒತ್ತಾಯಿಸುತ್ತಿದ್ದಾರೆ. ಇದು ಫ್ರಾಂಚೈಸಿಯ ಬ್ರ್ಯಾಂಡ್ ಮೌಲ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
  • ಪ್ರಾಯೋಜಕರ ಒತ್ತಡ: ಅಭಿಮಾನಿಗಳ ಆಕ್ರೋಶ ಹೆಚ್ಚಾದರೆ, ತಂಡಕ್ಕೆ ಬೆಂಬಲ ನೀಡುವ ಕಂಪನಿಗಳು ತಮ್ಮ ಹೆಸರಿಗೆ ಧಕ್ಕೆ ಬರುತ್ತದೆ ಎಂದು ಒಪ್ಪಂದದ ಹಿಂದೆ ಸರಿಯಬಹುದು. ಅಂತಹ ಸಂದರ್ಭಗಳಲ್ಲಿ ಅನಿವಾರ್ಯವಾಗಿ ಅಬ್ರಾರ್ ಅವರನ್ನು ಕೈಬಿಡಲಾಯಿತು.

ಕೈಬಿಡಲು ಇರುವ ಅಡೆತಡೆಗಳು:

  • ಕಾನೂನು ಮತ್ತು ಆರ್ಥಿಕ ಸಮಸ್ಯೆ: ಅಬ್ರಾರ್ ಅಹ್ಮದ್ ಅವರನ್ನು ಹರಾಜಿನಲ್ಲಿ £190,000 (ಸುಮಾರು ₹2.34 ಕೋಟಿ) ಅಧಿಕೃತವಾಗಿ ಖರೀದಿಸಲಾಗಿದೆ. ಯಾವುದೇ ಬಲವಾದ ಶಿಸ್ತುಕ್ರಮದ ಕಾರಣವಿಲ್ಲದೆ ಅವರನ್ನು ಕೈಬಿಟ್ಟರೆ, ಫ್ರಾಂಚೈಸಿ ಅವರಿಗೆ ಪೂರ್ಣ ಹಣವನ್ನು ನೀಡಲಾಯಿತು.
  • ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ನಿಯಮ: ‘ದಿ ಹಂಡ್ರೆಡ್’ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ನಿಯಮದಡಿ ನಡೆಯುತ್ತಿದೆ. ಕೇವಲ ಸೋಶಿಯಲ್ ಮೀಡಿಯಾ ಆಕ್ರೋಶದ ಕಾರಣಕ್ಕೆ ಆಟಗಾರನನ್ನು ತೆಗೆದುಹಾಕಲು ಇಸಿಬಿ ಅನುಮತಿ ನೀಡಿದೆ.

ಸದ್ಯದ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯ ಪರಿಸ್ಥಿತಿಯಲ್ಲಿ ಕಾವ್ಯ ಮಾರನ್ ಮೌನವಾಗಿದ್ದಾರೆ. ಜೊತೆಗೆ ಫ್ರಾಂಚೈಸಿ ಅಧಿಕಾರಿಗಳ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ. ಇನ್ನು ಈ ಬಗ್ಗೆ ಸನ್‌ರೈಸರ್ಸ್ ಫ್ರಾಂಚೈಸಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಜೊತೆ ಚರ್ಚಿಸಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಜಿತೇಶ್ ಶರ್ಮಾ: ನನ್ನ ತಂದೆಗಿಂತ ಹೆಚ್ಚಾಗಿ ನನ್ನ ಅಗತ್ಯವಿತ್ತು!

ಒಂದು ವೇಳೆ ಐಪಿಎಲ್ ಆರಂಭಕ್ಕೂ ಮುನ್ನ ‘ಸನ್‌ರೈಸರ್ಸ್’ ಫ್ರಾಂಚೈಸಿ ಮೇಲೆ ಪ್ರಾಯೋಜಕರ ಒತ್ತಡ ಹೆಚ್ಚಾದರೆ “ವೈಯಕ್ತಿಕ ಕಾರಣ” ಅಥವಾ “ಗಾಯದ ಸಮಸ್ಯೆ” ಎಂಬ ಕಾರಣ ನೀಡಿ ಅಬ್ರಾರ್ ಅಹ್ಮದ್ ಅವರಿಗೆ ದಿ ಹ್ಯಾಂಡ್ರೆಡ್ ಪ್ರದರ್ಶನದಿಂದ ಕೈಬಿಡಲು ಚಿಂತಿಸಲಾಗಿದೆ. ಹೀಗಾಗಿ ದಿ ಹ್ಯಾಂಡ್ರೆಡ್ ಕೋರ್ಸ್ ಆರಂಭಕ್ಕೂ ಮುನ್ನವೇ ಸನ್ ರೈಸರ್ಸ್ ಲೀಡ್ಸ್ ತಂಡದಿಂದ ಪಾಕ್ ಆಟಗಾರನಿಗೆ ಗೇಟ್ ಪಾಸ್ ಸಿಗುವ ಸಾಧ್ಯತೆ ಹೆಚ್ಚಿದೆ.

 



Source link

Leave a Reply

Your email address will not be published. Required fields are marked *