ನಾನು ಸೀರಿಯಲ್​​ ಬಿಡ್ತಾ ಇರೋದಕ್ಕೆ ಇದೇ ಕಾರಣ: ಕೊನೆಗೂ ಲೈವ್​ಗೆ ಬಂದು ಕಾರಣ ಕೊಟ್ಟ Sanjana Burli

ನಾನು ಸೀರಿಯಲ್​​ ಬಿಡ್ತಾ ಇರೋದಕ್ಕೆ ಇದೇ ಕಾರಣ: ಕೊನೆಗೂ ಲೈವ್​ಗೆ ಬಂದು ಕಾರಣ ಕೊಟ್ಟ Sanjana Burli

ನಾನು ಸೀರಿಯಲ್​​ ಬಿಡ್ತಾ ಇರೋದಕ್ಕೆ ಇದೇ ಕಾರಣ: ಕೊನೆಗೂ ಲೈವ್​ಗೆ ಬಂದು ಕಾರಣ ಕೊಟ್ಟ Sanjana Burli
‘ಪುಟ್ಟಕ್ಕನ ಮಕ್ಕಳು’ ಖ್ಯಾತಿಯ ನಟಿ ಸಂಜನಾ ಬುರ್ಲಿ ಇದೀಗ ‘ಗಂಧದ ಗುಡಿ’ ಸೀರಿಯಲ್​ನಿಂದಲೂ ಹೊರಬಂದಿದ್ದಾರೆ. ಶಿಕ್ಷಣದ ಕಾರಣಕ್ಕೆ ಮೊದಲ ಸೀರಿಯಲ್ ಬಿಟ್ಟಿದ್ದ ಅವರು, ಇದೀಗ ತಮ್ಮ ವೈವಾಹಿಕ ಜೀವನದ ಸಲುವಾಗಿ ಗಂಧದ ಗುಡಿ ಧಾರಾವಾಹಿಯನ್ನು ತೊರೆಯುತ್ತಿರುವುದಾಗಿ ಖುದ್ದು ಸ್ಪಷ್ಟಪಡಿಸಿದ್ದಾರೆ.
ನಟಿ ಸಂಜನಾ ಬುರ್ಲಿ ಅರ್ಥಾತ್​ ಪುಟ್ಟಕ್ಕನ ಮಕ್ಕಳು ಖ್ಯಾತಿಯ ಡಿಸಿ ಮೇಡಂ ಸ್ನೇಹಾ, ಇದೀಗ ಗಂಧದ ಗುಡಿ (Gandhada Gudi) ಸೀರಿಯಲ್​ನಿಂದಲೂ ಹೊರಕ್ಕೆ ಬಂದಿದ್ದಾರೆ. ಪುಟ್ಟಕ್ಕನ ಮಕ್ಕಳು ಸೀರಿಯಲ್​ ಬಿಟ್ಟದ್ದಕ್ಕೆ ಕಾರಣ, ಶಿಕ್ಷಣ ಎಂದು ಹೇಳಿದ್ದರು ನಟಿ.

ಆದರೆ, ಇದೀಗ ದಿಢೀರ್ ಎಂದು ಗಂಧದ ಗುಡಿಯಿಂದ ಬದಲಾಗಿದ್ದು, ಅವರ ಅಭಿಮಾನಿಗಳಿಗೆ ಆಘಾತ ತರಿಸಿತ್ತು. ನಟಿ ಸಂಜನಾ ಅವರ ಎಂಗೇಜ್​ಮೆಂಟ್​ ಆಗಿರುವುದನ್ನು ಹೇಳಿದ್ದರೂ, ಮದುವೆಯಾದ ಮೇಲೂ ಸೀರಿಯಲ್ ಮುಂದುವರೆಸಬಹುದಿತ್ತಲ್ಲವಾ? ಇದಾಗಲೇ ಕೆಲವು ನಟಿಯರು ಸೀರಿಯಲ್​ನಲ್ಲಿ ಇದ್ದುಕೊಂಡೇ ಮದುವೆಯಾಗಿ ನಟನೆ ಮುಂದುವರೆಸಿದ್ದಾರೆ ಎಂದು ಅಂದುಕೊಂಡವರೇ ಹೆಚ್ಚು.

ಆದ್ದರಿಂದ ನಟಿ ಗಂಧದ ಗುಡಿ ಸೀರಿಯಲ್ ಬಿಡಲು ಬೇರೆ ಏನಾದ್ರೂ ಕಾರಣ ಇದೆಯಾ ಎನ್ನುವ ಸಂಶಯ ಅವರ ಅಭಿಮಾನಿಗಳನ್ನು ಕಾಡುತ್ತಿತ್ತು. ಇದೀಗ ಅದಕ್ಕೆ ಕಲರ್ಸ್​ ವಾಹಿನಿಯ ಮೂಲಕ ನಟಿಯೇ ಬಂದು ಖುದ್ದು ಉತ್ತರ ನೀಡಿದ್ದಾರೆ.

ನಾನು ಇವತ್ತು ನಿಮ್ಮ ಮುಂದೆ ಗಂಧದ ಗುಡಿ ಚಂದನಾ ಆಗಿ ಬಂದಿಲ್ಲ, ಬದಲಿಗೆ ನಿಜವಾಗಿಯೂ ಸಂಜನಾ ಆಗಿ ಬಂದಿದ್ದೇನೆ ಎನ್ನುತ್ತಲೇ ಗಂಧದ ಗುಡಿ ಸೀರಿಯಲ್​ ಬಿಟ್ಟಿರುವುದು ಏಕೆ ಎಂದು ತಿಳಿಸಿದ್ದಾರೆ.

ಪ್ರತಿಯೊಬ್ಬ ಹೆಣ್ಣಿನ ಬಾಳಿನಲ್ಲಿ ಮದುವೆ ಎನ್ನುವುದು ತುಂಬಾ ಪ್ರಮುಖ ಘಟ್ಟವಾಗಿದೆ. ನಾನು ಕೂಡ ಆ ಒಂದು ನಿರ್ಣಾಯಕ ಹಂತಕ್ಕೆ ಬಂದು ನಿಂತಿದ್ದೇನೆ. ನಾನು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದು ನಟಿ ಹೇಳಿದ್ದಾರೆ.

ಇನ್ಮುಂದೆ ಗಂಧದ ಗುಡಿ ಚಂದನಾ ಆಗಿ ಇವರು ನಿಮ್ಮ ಮುಂದೆ ಬರಲಿದ್ದಾರೆ ಎಂದು ನಟಿಯನ್ನು ಪರಿಚಯಿಸಿದ್ದಾರೆ ಸಂಜನಾ. ಅಲ್ಲಿಗೆ ಸಂಜನಾ ಬುರ್ಲಿ ಸೀರಿಯಲ್ ಬಿಡಲು ಕಾರಣ, ಅವರ ಮದುವೆ ಎನ್ನುವುದು ಸ್ಪಷ್ಟವಾಗಿದೆ.ರಾ ಮಾಚಾರಿ ಹಾಗೂ ಶುಭಸ್ಯ ಶೀಘ್ರಂ ಧಾರಾವಾಹಿಯಲ್ಲಿ ನಟಿಸಿದ್ದ ಸ್ನೇಹಾ ಮಂಜುನಾಥ್‌ ಅವರು ಸಂಜನಾ ಆಗಿ ಎಂಟ್ರಿ ಕೊಟ್ಟಿದ್ದಾರೆ.

Source link

Leave a Reply

Your email address will not be published. Required fields are marked *