ದೀಪ ಬೆಳಗುವ ಮುನ್ನ ಶೂ ಬಿಚ್ಚಿದ ಆಮೀರ್ ಖಾನ್: ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್‌ ವರ್ತನೆಗೆ ಫ್ಯಾನ್ಸ್ ಫಿದಾ! | Aamir Khan Removes Shoes At Film Festival Lagaan Gayatri Mantra Revelation San

ದೀಪ ಬೆಳಗುವ ಮುನ್ನ ಶೂ ಬಿಚ್ಚಿದ ಆಮೀರ್ ಖಾನ್: ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್‌ ವರ್ತನೆಗೆ ಫ್ಯಾನ್ಸ್ ಫಿದಾ! | Aamir Khan Removes Shoes At Film Festival Lagaan Gayatri Mantra Revelation San



ದೀಪ ಬೆಳಗುವ ಮುನ್ನ ಶೂ ಬಿಚ್ಚಿದ ಆಮೀರ್ ಖಾನ್: ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್‌ ವರ್ತನೆಗೆ ಫ್ಯಾನ್ಸ್ ಫಿದಾ! | Aamir Khan Removes Shoes At Film Festival Lagaan Gayatri Mantra Revelation San

‘ರೆಡ್ ಲಾರಿ ಫಿಲ್ಮ್ ಫೆಸ್ಟಿವಲ್’ನಲ್ಲಿ ನಟ ಆಮೀರ್ ಖಾನ್ ದೀಪ ಬೆಳಗುವ ಮುನ್ನ ಪಾದರಕ್ಷೆ ಬಿಚ್ಚಿಟ್ಟು ಸಂಪ್ರದಾಯಕ್ಕೆ ಗೌರವ ಸೂಚಿಸಿದ್ದಾರೆ. ಇದೇ ವೇಳೆ ‘ಲಗಾನ್’ ಚಿತ್ರೀಕರಣದ ದಿನಗಳನ್ನು ನೆನಪಿಸಿಕೊಂಡ ಅವರು, ಶೂಟಿಂಗ್‌ಗೆ ಹೋಗುವ ಮುನ್ನ ಪ್ರತಿದಿನ ಗಾಯತ್ರಿ ಮಂತ್ರ ಕೇಳುತ್ತಿದ್ದ ಸಂಗತಿಯನ್ನು ಹಂಚಿಕೊಂಡರು.

ಮುಂಬೈ (ಮಾ.14): ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಟ್‌ಶನಿಸ್ಟ್ ಆಮೀರ್ ಖಾನ್ ಅವರು ಮುಂಬೈನಲ್ಲಿ ನಡೆದ ‘ರೆಡ್ ಲಾರಿ ಫಿಲ್ಮ್ ಫೆಸ್ಟಿವಲ್’ನ (Red Lorry Film Festival) ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಸರಳತೆ ಮತ್ತು ನಡವಳಿಕೆಯಿಂದ ಅಭಿಮಾನಿಗಳ ಮನ ಗೆದ್ದಿದ್ದಾರೆ. ಸಮಾರಂಭದ ಉದ್ಘಾಟನೆಯ ಭಾಗವಾಗಿ ದೀಪ ಬೆಳಗಲು ಆಮೀರ್ ಖಾನ್ ಅವರನ್ನು ವೇದಿಕೆಗೆ ಆಹ್ವಾನಿಸಲಾಯಿತು. ಚೆಕ್ ಶರ್ಟ್, ಜೀನ್ಸ್ ಮತ್ತು ಬೂಟ್ಸ್ ಧರಿಸಿದ್ದ ಆಮೀರ್, ದೀಪದ ಬಳಿ ಹೋಗುವ ಮುನ್ನ ಹಠಾತ್ತನೆ ಕೆಳಗೆ ಬಾಗಿ ತಮ್ಮ ಬೂಟುಗಳ ಲೇಸ್ ಬಿಚ್ಚಿ, ಪಾದರಕ್ಷೆಗಳನ್ನು ಬಿಚ್ಚಿಟ್ಟರು. ನಂತರ ಬರಿಗಾಲಿನಲ್ಲಿ ಹೋಗಿ ದೀಪ ಬೆಳಗಿ ಸಂಪ್ರದಾಯಕ್ಕೆ ಗೌರವ ಸೂಚಿಸಿದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆಮೀರ್ ಅವರ ನಮ್ರತೆ ಮತ್ತು ಸಂಸ್ಕಾರವನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

‘ಲಗಾನ್’ ಚಿತ್ರೀಕರಣದ ವೇಳೆ ಗಾಯತ್ರಿ ಮಂತ್ರ ಪಠಣ

ಇದೇ ವೇದಿಕೆಯಲ್ಲಿ ತಮ್ಮ ಸೂಪರ್ ಹಿಟ್ ಚಿತ್ರ ‘ಲಗಾನ್’ ಚಿತ್ರ 25 ವರ್ಷ ಪೂರೈಸಿದ ಸಂಭ್ರಮವನ್ನೂ ಅವರು ಆಚರಿಸಿದರು. ಲಗಾನ್‌ ಸಿನಿಮಾದ ಶೂಟಿಂಗ್‌ ದಿನಗಳನ್ನು ಸ್ಮರಿಸಿದ ಆಮೀರ್ ಖಾನ್, ಶೂಟಿಂಗ್ ಆರಂಭವಾಗುವ ಮುನ್ನ ತಂಡ ಅನುಸರಿಸುತ್ತಿದ್ದ ಒಂದು ವಿಶೇಷ ಪದ್ಧತಿಯನ್ನು ಬಿಚ್ಚಿಟ್ಟರು.

“ಚಿತ್ರದಲ್ಲಿ ಅರ್ಜನ್ ಪಾತ್ರ ಮಾಡಿದ್ದ ಅಖಿಲೇಂದ್ರ ಮಿಶ್ರಾ ಅವರು ನಾವು ಬಸ್‌ನಲ್ಲಿ ಪ್ರಯಾಣಿಸುವಾಗ ಗಾಯತ್ರಿ ಮಂತ್ರವನ್ನು ಪ್ಲೇ ಮಾಡುತ್ತಿದ್ದರು. ನಮ್ಮ ತಂಡದಲ್ಲಿ ಕೆಲವರು ಇಂಗ್ಲಿಷ್ ಹಾಡುಗಳನ್ನು ಕೇಳಲು ಬಯಸುತ್ತಿದ್ದರು, ಆದರೆ ನಾನು ಗಾಯತ್ರಿ ಮಂತ್ರವನ್ನೇ ಕೇಳೋಣ ಎಂದು ಒತ್ತಾಯಿಸುತ್ತಿದ್ದೆ. ಸತತ ಆರು ತಿಂಗಳುಗಳ ಕಾಲ ಶೂಟಿಂಗ್ ಸ್ಥಳ ತಲುಪುವ ಮುನ್ನ ಪ್ರತಿದಿನ ನಾವು ಈ ಮಂತ್ರವನ್ನು ಕೇಳುತ್ತಿದ್ದೆವು” ಎಂದು ಆಮೀರ್ ನೆನಪಿಸಿಕೊಂಡರು.

“ಇದು ನಾವು ಧ್ಯಾನಸ್ಥ ಸ್ಥಿತಿಯಲ್ಲಿ ಕೆಲಸ ಮಾಡಲು ಸಹಾಯ ಮಾಡುತ್ತಿತ್ತು. ಕೆಲಸಕ್ಕೆ ಹೋಗುವಾಗ ನಾವು ಎಂತಹ ಮನಸ್ಥಿತಿಯಲ್ಲಿದ್ದೇವೆ ಎಂಬುದು ಮುಖ್ಯ. ಸೂರ್ಯೋದಯಕ್ಕೆ ಮೊದಲೇ ನಾವು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೆವು, ಆ ಕತ್ತಲಿನಲ್ಲಿ ಗಾಯತ್ರಿ ಮಂತ್ರ ಕೇಳುವುದು ನಮಗೆ ಶಕ್ತಿ ನೀಡುತ್ತಿತ್ತು” ಎಂದು ಅವರು ವಿವರಿಸಿದರು.

Scroll to load tweet…

ಆಸ್ಕರ್ ರೇಸ್ ಮತ್ತು ‘ಲಗಾನ್’ ಹವಾ

‘ಲಗಾನ್’ ಚಿತ್ರದ ಆಸ್ಕರ್ ಅಭಿಯಾನದ ಬಗ್ಗೆ ಮಾತನಾಡಿದ ಅವರು, “ಆಸ್ಕರ್ ವೇಳೆ ನಾವು ಮಾಡಬಹುದಾಗಿದ್ದ ಏಕೈಕ ಕೆಲಸವೆಂದರೆ ಸ್ಕ್ರೀನಿಂಗ್ (ಚಿತ್ರ ಪ್ರದರ್ಶನ) ಮಾಡುವುದು. ಜನ ಬರುತ್ತಾರೋ ಇಲ್ಲವೋ ಎಂಬ ಆತಂಕ ನಮಗಿತ್ತು. ಅಕಾಡೆಮಿ ಸದಸ್ಯರಿಗಾಗಿ ಮಾತ್ರವಲ್ಲದೆ, ಸ್ನೇಹಿತರಿಗಾಗಿ ಮತ್ತು ಸಾಮಾನ್ಯರಿಗಾಗಿಯೂ ಪ್ರದರ್ಶನ ಹಮ್ಮಿಕೊಳ್ಳುತ್ತಿದ್ದೆವು. ಪಾರ್ಕಿಂಗ್ ಸಿಬ್ಬಂದಿ ಅಥವಾ ಅಲ್ಲಿ ಯಾರು ಸಿಗುತ್ತಿದ್ದರೋ ಅವರನ್ನು ಸಿನಿಮಾ ನೋಡಲು ಬನ್ನಿ ಎಂದು ಮನವಿ ಮಾಡುತ್ತಿದ್ದೆವು. ಯಾರೇ ಸಿನಿಮಾ ನೋಡಿದರೂ ಅವರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ನಮಗಿತ್ತು. ಜನರನ್ನು ಥಿಯೇಟರ್‌ಗೆ ಕರೆತರುವುದೇ ಅಂದು ನಮ್ಮ ಮುಖ್ಯ ಉದ್ದೇಶವಾಗಿತ್ತು” ಎಂದು ಹಳೇ ನೆನಪುಗಳನ್ನು ಹಂಚಿಕೊಂಡರು.



Source link

Leave a Reply

Your email address will not be published. Required fields are marked *