ಆಹಾರ ವೈಯಕ್ತಿಕ ಆಯ್ಕೆ.. ಆದ್ರೆ ಮಾಂಸಾಹಾರ ತ್ಯಜಿಸಿ ಸಸ್ಯಾಹಾರಕ್ಕೆ ಬದಲಾದ ಸ್ಟಾರ್ ನಟ-ನಟಿಯರಿವರು; ಕಾರಣ ಇದು!

ಆಹಾರ ವೈಯಕ್ತಿಕ ಆಯ್ಕೆ.. ಆದ್ರೆ ಮಾಂಸಾಹಾರ ತ್ಯಜಿಸಿ ಸಸ್ಯಾಹಾರಕ್ಕೆ ಬದಲಾದ ಸ್ಟಾರ್ ನಟ-ನಟಿಯರಿವರು; ಕಾರಣ ಇದು!

ಆಹಾರ ವೈಯಕ್ತಿಕ ಆಯ್ಕೆ.. ಆದ್ರೆ ಮಾಂಸಾಹಾರ ತ್ಯಜಿಸಿ ಸಸ್ಯಾಹಾರಕ್ಕೆ ಬದಲಾದ ಸ್ಟಾರ್ ನಟ-ನಟಿಯರಿವರು; ಕಾರಣ ಇದು!

ಭಾರತದ ಹಲವು ಸಿನಿಮಾ ತಾರೆಯರು ಮಾಂಸಾಹಾರ ತ್ಯಜಿಸಿ ಸಸ್ಯಾಹಾರಕ್ಕೆ ಬದಲಾಗಿದ್ದಾರೆ. ನಟ ರಜನಿಕಾಂತ್, ನಟಿ ತಮನ್ನಾ ಮಾತ್ರವಲ್ಲಇನ್ನೂ ಅನೇಕರು ಈ ದಾರಿಯಲ್ಲಿ ಸಾಗುತ್ತಿದ್ದಾರೆ. ಹಾಗಿದ್ರೆ ಯಾರವರು? ಇಲ್ಲಿದೆ ನೋಡಿ ಮಾಹಿತಿ..

ಧನುಷ್ ದಕ್ಷಿಣ ಭಾರತದ ಅದ್ಭುತ ನಟ. ಕಮರ್ಷಿಯಲ್ ಹೀರೋ ಆಗಿ ತಮ್ಮದೇಯಾದ ಛಾಪು ಮೂಡಿಸಿರುವ ಇವರು, ಬೇರೆ ಸೂಪರ್ ಸ್ಟಾರ್‌ಗಳು ಆಯ್ಕೆ ಮಾಡಿಕೊಳ್ಳು ಹಿಂದೇಟು ಹಾಕುವ ಪಾತ್ರಗಳನ್ನ ಆಯ್ಕೆ ಮಾಡಿಕೊಂಡು ಸಲೀಸಾಗಿ ನಟಿಸುತ್ತಾ ಬಂದಿದ್ದಾರೆ. ಧನುಷ್ ಕೂಡ ಮಾಂಸಾಹಾರವನ್ನು ಸೇವಿಸುವುದಿಲ್ಲ. ಇವರಿಗೆ ಮನೆಯಲ್ಲಿ ಮಾಡಿದ ಇಡ್ಲಿ ಸಾಂಬಾರ್ ತಿನ್ನೋದು ಬಹಳ ಇಷ್ಟ.

ಬಹುಭಾಷಾ ನಟಿ ಶ್ರೀಯಾ ಶರಣ್ ನಟನೆ ಮಾತ್ರವಲ್ಲ, ಫಿಟ್ನೆಸ್‌ನಿಂದಲೂ ಅಭಿಮಾನಿಗಳ ಗಮನ ಸೆಳೆಯುತ್ತಾರೆ. 42ರ ವಯಸ್ಸಿನಲ್ಲೂ 20 ವರ್ಷದವರಂತೆ ಕಾಣುವ ಶ್ರೀಯಾ, ಮಾಂಸಾಹಾರ ಸೇವಿಸುವುದಿಲ್ಲ. ಶುದ್ಧ ಸಸ್ಯಾಹಾರಿಯಾಗಿರುವ ಈ ನಟಿ, ಹೆಚ್ಚಾಗಿ ಮನೆಯಲ್ಲಿ ತಯಾರಿಸಿದ ಆಹಾರವನ್ನೇ ಸೇವಿಸಲು ಇಷ್ಟಪಡುತ್ತಾರೆ.

ನಾಗಚೈತನ್ಯ ಜೊತೆಗಿನ ವಿಚ್ಛೇದನ, ತಂದೆಯ ನಿಧನ, ಮಯೋಸೈಟಿಸ್ ಕಾಯಿಲೆಯಂತಹ ಸಮಸ್ಯೆಗಳ ಬಳಿಕ ಸಿನಿಮಾದಿಂದ ಕೊಂಚ ದೂರವಿರುವ ಸಮಂತಾ ರುತ್ ಪ್ರಭು, ವೆಬ್‌ ಸೀರೀಸ್‌ಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಸಮಂತಾ ಕೊರೊನಾ ಲಾಕ್‌ಡೌನ್ ಸಮಯದಿಂದ ಮಾಂಸಾಹಾರ ತ್ಯಜಿಸಿ ಸಸ್ಯಾಹಾರವನ್ನು ಮಾತ್ರ ಸೇವಿಸುತ್ತಿರುವುದಾಗಿ ಅಂತ ಸಂದರ್ಶನವೊಂದರಲ್ಲಿ ಹೇಳಿದ್ದರು.

ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ತ್ರಿಶಾ ಕೃಷ್ಣನ್ ಕೂಡ ಒಬ್ಬರು. ತಮಿಳು ಹಾಗೂ ತೆಲುಗು ಸಿನಿಮಾರಂಗದ ಹಲವು ಸ್ಟಾರ್ ನಟರೊಂದಿಗೆ ಅಭಿನಯಿಸಿರುವ ಇವರು, ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇವರು ಕೂಡ ನಾನ್‌ವೆಜ್ ತಿನ್ನಲ್ಲ. ತ್ರಿಶಾ ಯಾವಾಗಲೂ ಸಾವಯವ ಆಹಾರ ತಿನ್ನಲು ಇಷ್ಟಪಡುತ್ತಾರೆ.

ಕಾಲಿವುಡ್ ಸೂಪರ್ ಸ್ಟಾರ್ ರಜಿನಿಕಾಂತ್ ಮೊದಲು ಮಾಂಸಾಹಾರಿ ಆಹಾರವನ್ನು ಇಷ್ಟಪಡುತ್ತಿದ್ದರು. ಆದರೆ, ಕೆಲ ಆರೋಗ್ಯ ಸಮಸ್ಯೆಯಿಂದಾಗಿ ಅವರು ಶುದ್ಧ ಸಸ್ಯಾಹಾರಿಯಾಗಿ ಬದಲಾದರು. ಸಸ್ಯಾಹಾರ ಸೇವನೆಯಿಂದ ಆರೋಗ್ಯವಾಗಿರಬಹುದು ಅಂತಾರೆ ರಜನಿಕಾಂತ್.

ಮಿಲ್ಕಿ ಬ್ಯೂಟಿ ಅಂತಲೇ ಖ್ಯಾತಿ ಗಳಿಸಿರುವ ತಮನ್ನಾ ಭಾಟಿಯಾ ಕೂಡ ದಕ್ಷಿಣ ಚಿತ್ರರಂಗದ ಸ್ಟಾರ್ ನಟಿ. ಬಾಲಿವುಡ್‌ನಲ್ಲೂ ಗುರುತಿಸಿಕೊಂಡಿರುವ ಈ ನಟಿ ಕೂಡ ಮಾಂಸಾಹಾರ ಸೇವನೆಯನ್ನು ತ್ಯಜಿಸಿದ್ದಾರೆ.

(ಕೃಪೆ-ಶ್ರೀಮತಿ ಸುಧಾಮೂರ್ತಿ ಅಭಿಮಾನಿಗಳ ಬಳಗ)

Source link

Leave a Reply

Your email address will not be published. Required fields are marked *