‘ಯಶ್ ಖಿನ್ನತೆಗೆ ಒಳಗಾಗಿದ್ದಾನೆ’; ವಿವಾದಿತ ಹೇಳಿಕೆ ನೀಡಿದ ಜ್ಯೋತಿಷಿ ವೇಣು ಸ್ವಾಮಿ

‘ಯಶ್ ಖಿನ್ನತೆಗೆ ಒಳಗಾಗಿದ್ದಾನೆ’; ವಿವಾದಿತ ಹೇಳಿಕೆ ನೀಡಿದ ಜ್ಯೋತಿಷಿ ವೇಣು ಸ್ವಾಮಿ


'ಯಶ್ ಖಿನ್ನತೆಗೆ ಒಳಗಾಗಿದ್ದಾನೆ'; ವಿವಾದಿತ ಹೇಳಿಕೆ ನೀಡಿದ ಜ್ಯೋತಿಷಿ ವೇಣು ಸ್ವಾಮಿ

ಜ್ಯೋತಿಷಿ ವೇಣು ಸ್ವಾಮಿ ಸದಾ ಒಂದಿಲ್ಲೊಂದು ವಿಷಯಕ್ಕೆ ವಿವಾದ ಮಾಡಿಕೊಳ್ಳುತ್ತಲೇ ಇರುತ್ತಾರೆ. ಈಗ ಅವರ ಕಣ್ಣು ಯಶ್ ಮೇಲೆ ಬಿದ್ದಿದೆ. ಯಶ್ ಅವರನ್ನು ಏಕವಚನದಲ್ಲಿ ಕರೆದಿದ್ದು ಅಲ್ಲದೆ, ಅವರು ಖಿನ್ನೆತಗೆ ಹೋಗಿದ್ದಾರೆ. ಇದು ಎರಡು ತಿಂಗಳ ಹಿಂದೆ ನೀಡಿದ ಸಂದರ್ಶನ ಆಗಿದ್ದು, ಈಗ ವೈರಲ್ ಆಗಿದೆ. ಯಶ್ ಬಗ್ಗೆ ಈ ರೀತಿ ಮಾತನಾಡಿದ ವೇಣು ಸ್ವಾಮಿ ವಿರದ್ಧ ಯಶ್ ಫ್ಯಾನ್ಸ್ ತಿರುಗಿ ಬಿದ್ದಿದ್ದಾರೆ.

ವೇಣು ಸ್ವಾಮಿ ಅವರು ಸದಾ ವಿವಾದಾತ್ಮಕ ಹೇಳಿಕೆ ನೀಡುತ್ತಾ ಸುದ್ದಿ ಆಗುತ್ತಾರೆ. ಅವರ ಮೇಲೆ ಈ ಹಿಂದೆ ಕೇಸ್ ಕೂಡ ದಾಖಲಾಗಿತ್ತು. ಈಗ ಅವರು ಹೊಸ ಹೇಳಿಕೆ ನೀಡಿದ ಚರ್ಚೆಗೆ ಕಾರಣ ಆಗಿದೆ. ವೇಣು ಸ್ವಾಮಿ ಈ ರೀತಿಯಲ್ಲಿ ಹೇಳಿಕೆ ನೀಡಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರದ ಮಧ್ಯೆ ಶೀಘ್ರವೇ ಹೊಸ ಸಿನಿಮಾ ಸೆಟ್ಟೇರಲಿದೆ ಯಶ್

‘ಯಶ್ ಅಂತ ಒಬ್ಬರು ಹೀರೋ ಇದಾನೆ. ಆತನ ಪರಿಸ್ಥಿತಿ ತುಂಬಾ ಕಷ್ಟ. ಕನ್ನಡದ ಹೀರೋ ಅಂತ ಹೆಸರು ಮಾತನಾಡಿದೆ. ತೆಲುಗು ಹೀರೋ ಆಗಿದ್ರೆ ಮಾತನಾಡುತ್ತಾ ಇರಲಿಲ್ಲ. ಯಶ್ ಡಿಪ್ರೆಷನ್ ಅಲ್ಲ. ಆತ ಮಾಡಿದ ಎರಡು ಸಿನಿಮಾ ಎಲ್ಲಿಯೋ ಇವೆ. ಕೆಜಿಎಫ್ನ ಪದೇ ಪದೇ ತೆಗೆಯೋಕಾಗಲ್ಲ. ಕೆಜಿಎಫ್ ರೀತಿಯ ಸಿನಿಮಾ ತೆಗೆಯಲು ಸಾಧ್ಯವಾಗಿಲ್ಲ, ಹೊಸ ಸಿನಿಮಾ ಆಯ್ಕೆ ಮಾಡದೆ ಡಿಪ್ರೆಷನ್ ಗೆ ಹೋಗಿದ್ದಾನೆ. ಸ್ಟಾರ್ ಡನ್ನ ಉಳಿಸಿಕೊಳ್ಳೋಕೆ ಆಗ್ತಿಲ್ಲ. ಅದೇ ಟೆನ್ಷನ್ ಅಲ್ಲಿ ಯಶ್ ಇದ್ದಾನೆ’ ವೇಣು ಸ್ವಾಮಿ.

 

Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ

 

EHA TV (@ehatvlive) ಹಂಚಿಕೊಂಡ ಪೋಸ್ಟ್

ಯಶ್ ಅವರು ‘ಟಾಕ್ಸಿಕ್’ ರೀತಿಯ ದೊಡ್ಡ ಸಿನಿಮಾ ಒಪ್ಪಿಕೊಂಡಿದ್ದಾರೆ. ‘ರಾಮಾಯಣ’ ಸಿನಿಮಾದಲ್ಲಿ ಯಶ್ ಅವರು ರಾವಣನ ಪಾತ್ರ ಮಾಡುತ್ತಿದ್ದಾರೆ. ಅಕ್ಕಿನೇನಿ ನಾಗ ಚೈತನ್ಯ-ಸಮಂತಾ ಜಾತಕದ ಬಗ್ಗೆ ವೇಣುಸ್ವಾಮಿ ಹೇಳಿಕೆ ನೀಡಿದ್ದರು. ಅವರು ಬೇರೆ ಆಗುತ್ತಾರೆ ಎಂದು ಭವಿಷ್ಯ ಹೇಳಿದ್ದರು. ಅವರು ಬೇರೆ ಆಗಿದ್ದರಿಂದ ಇವರಿಗೆ ಜನಪ್ರಿಯತೆ ಸಿಕ್ಕಿತು. ಸಮಂತಾ ಎರಡನೇ ವಿವಾದದ ಬಗ್ಗೆಯೂ ಅವರು ಟೀಕೆ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *