Cooking Oil Price Hike: ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ದರ ಭಾರೀ ಏರಿಕೆ

Cooking Oil Price Hike: ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ದರ ಭಾರೀ ಏರಿಕೆ


Cooking Oil Price Hike: ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ದರ ಭಾರೀ ಏರಿಕೆ

ಬೆಂಗಳೂರು (ಮಾ.14): ಇರಾನ್-ಇಸ್ರೇಲ್ ಯುದ್ಧದ ಭೀತಿಯು ಇದೀಗ ಗ್ಯಾಸ್ ಸಿಲಿಂಡರ್ಗಳ ನಂತರ ಅಡುಗೆ ಎಣ್ಣೆಯ ಮೇಲೂ ಪರಿಣಾಮ ಬೀರಿದೆ. ಮುಂಬರುವ ಯುಗಾದಿ ಮತ್ತು ರಂಜಾನ್ ಹಬ್ಬಗಳ ಮುನ್ನವೇ ಅಡುಗೆ ಎಣ್ಣೆಯ ದರ ಏರಿಕೆ, ಜನರಲ್ಲಿ ಆತಂಕ ಸೃಷ್ಟಿಸಿದೆ. ಯುದ್ಧದ ಕಾರಣದಿಂದ ಅಡುಗೆ ಎಣ್ಣೆಯ ರಫ್ತು ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.

ಏಜೆಂಟ್‌ಗಳಿಗೆ ಕೇಳಿದರೆ, 100-200 ಬಾಕ್ಸ್‌ಗಳ ಬದಲಿಗೆ ಕೇವಲ 10 ಪ್ರತಿಶತದಷ್ಟು (ಸುಮಾರು 20 ಆಯಿಲ್ ಟ್ಯಾಂಕರ್‌ಗಳು) ಮಾತ್ರ ಪೂರೈಕೆಯಾಗುತ್ತಿದೆ. ಬೆಂಗಳೂರಿನ ಅಡುಗೆ ಎಣ್ಣೆ ಅಂಗಡಿಯಾದ ಅಜಯ್ ಅವರು, ಬ್ರಾಂಡೆಡ್ ಎಣ್ಣೆಯ ಪೂರೈಕೆ ತೀವ್ರವಾಗಿ ಕಡಿಮೆಯಾಗಿದೆ. ಲೀಟರ್ ಪ್ರತಿ ಎಣ್ಣೆಗೆ 20 ರೂಪಾಯಿಗಳ ಬೆಲೆ ಏರಿಕೆಯಾಗಿದೆ. ಸರಕು ಸಿಗದ ಕಾರಣ ವ್ಯಾಪಾರಕ್ಕೆ ಹಿನ್ನಡೆ, ಗ್ರಾಹಕರು ಬ್ರಾಂಡೆಡ್ ಉತ್ಪನ್ನಗಳಿಗಾಗಿ ಬಯಸುತ್ತಿದ್ದಾರೆ. ಸರಬರಾಜಿನ ಕೊರತೆಯಿಂದಾಗಿ ಹಬ್ಬದ ಸಿದ್ಧತೆಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *