Summer Recipe: ನೈಸರ್ಗಿಕ ವಯಾಗ್ರಾ ಕಲ್ಲಂಗಡಿ ಸಿಪ್ಪೆಯ ರುಚಿಯಾದ ತಂಬುಳಿ ರೆಸಿಪಿ

Summer Recipe:  ನೈಸರ್ಗಿಕ ವಯಾಗ್ರಾ ಕಲ್ಲಂಗಡಿ ಸಿಪ್ಪೆಯ ರುಚಿಯಾದ ತಂಬುಳಿ ರೆಸಿಪಿ

Summer Recipe:  ನೈಸರ್ಗಿಕ ವಯಾಗ್ರಾ ಕಲ್ಲಂಗಡಿ ಸಿಪ್ಪೆಯ ರುಚಿಯಾದ ತಂಬುಳಿ ರೆಸಿಪಿ

ಸಾಮಾನ್ಯವಾಗಿ ಬಿಸಾಡುವ ಕಲ್ಲಂಗಡಿ ಸಿಪ್ಪೆಯು ‘ನೈಸರ್ಗಿಕ ವಯಾಗ್ರಾ’ ಎಂದೇ ಖ್ಯಾತವಾಗಿದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸಿ, ಕಿಡ್ನಿ ಕಲ್ಲುಗಳನ್ನು ತಡೆಯುವುದಲ್ಲದೆ, ಹಲವಾರು ಪೋಷಕಾಂಶಗಳನ್ನು ಹೊಂದಿದೆ. ಈ ಸಿಪ್ಪೆಯನ್ನು ಬಳಸಿ ರುಚಿಕರವಾದ ತಂಬುಳಿಯನ್ನು ಹೇಗೆ ತಯಾರಿಸಬಹುದು?

ಬೇಸಿಗೆ ಅರಂಭವಾಗುತ್ತಿದ್ದಂತೆ ಮಾರುಕಟ್ಟೆಗೆ ಕಲ್ಲಂಗಡಿ ಎಂಟ್ರಿ ಕೊಡುತ್ತದೆ. ಸಾಮಾನ್ಯವಾಗಿ ಎಲ್ಲರೂ ಹಣ್ಣು ತಿಂದು ಸಿಪ್ಪೆಯನ್ನು ಬಿಸಾಡುತ್ತಾರೆ. ಈ ಸಿಪ್ಪೆಯಿಂದಲೂ ರುಚಿಯಾದ ಖಾದ್ಯಗಳನ್ನು ತಯಾರಿಸಬಹುದು. ಈ ಸಿಪ್ಪೆ ಆರೋಗ್ಯಕರ ಗುಣಗಳನ್ನು ಹೊಂದಿದೆ. ಈ ಕಲ್ಲಂಗಡಿ ಸಿಪ್ಪೆಯನ್ನು ನೈಸರ್ಗಿಕ ವಯಾಗ್ರಾ ಅಂತಾನೂ ಕರೆಯಲಾಗುತ್ತದೆ.

ಕಲ್ಲಂಗಡಿ ಸಿಪ್ಪೆ ಅತ್ಯಧಿಕ ಪ್ರತ್ಯಾಮ್ಲಗಳ ನ್ನು ಹೊಂದಿರೋದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಕಡಿಮೆ ಮಾಡೋದರ ಜೊತೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಅತಿಯಾದ ಬಿಸಿಲಿನಿಂದ ಬರಬಹುದಾದ ಶೀತ, ಜ್ವರದಂತಹ ರೋಗಳಿಗೆ ಕಲ್ಲಂಗಡಿ ಸಿಪ್ಪೆ ರಕ್ಷಾ ಕವಚವಾಗಿ ಕೆಲಸ ಮಾಡುತ್ತದೆ. ಮೆದುಳಿನ ಆರೋಗ್ಯಕ್ಕೂ ಕಲ್ಲಂಗಡಿ ಸಿಪ್ಪೆ ಸಹಾಯ ಮಾಡುತ್ತದೆ.

ಕಲ್ಲಂಗಡಿ ಸಿಪ್ಪೆಯಲ್ಲಿರೋ ಸಿಟ್ರೋಲೈನ್ ಎಂಬ ಅಂಶ ದೇಹದಲ್ಲಿ ಅಮೈನೋ ಆಸಿಡ್ ಆಗಿ ಬದಲಾಗುತ್ತದೆ. ಈ ಅಂಶ ಕಿಡ್ನಿಯಲ್ಲಿ ಕಲ್ಲು ಆಗದಂತೆ ತಡೆಯುತ್ತದೆ. ಇದೆಲ್ಲದರ ಜೊತೆ ವಿಟಮಿನ್ ಎ, ವಿಟಮಿನ್ ಬಿ6, ಪೊಟ್ಯಾಷಿಯಂ, ಐರನ್, ಕ್ಯಾಲ್ಸಿಯಂ, ಐಯೋಡಿನ್ ಸೇರಿದಂತೆ ಹಲವು ಪೋಷಕಾಂಶಗಳನ್ನು ಕಲ್ಲಂಗಡಿ ಹೊಂದಿದೆ. ಸಿಟ್ರೋಲೈನ್ ಅಂಶ ಕಣ್ಣುಗಳ ಆರೋಗ್ಯಕ್ಕೂ ಒಳ್ಳೆಯದು. ಈ ಕಲ್ಲಂಗಡಿ ಸಿಪ್ಪೆ ಬಳಸಿ ತಂಬುಳಿ ಮಾಡೋದು ಹೇಗೆ ಎಂದು ನೋಡೋಣ ಬನ್ನಿ.

ಕಲ್ಲಂಗಡಿ ಸಿಪ್ಪೆ, ಜೀರಿಗೆ, ಸಾಸವೆ, ಇಂಗು, ಮೊಸರು, ಹಸಿಮೆಣಸಿನಕಾಯಿ, ಕರೀಬೇವು, ತೆಂಗಿನತುರಿ, ಕೋತಂಬರಿ ಸೊಪ್ಪು, ಅಡುಗೆ ಎಣ್ಣೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು.

ತಂಬುಳಿ ತಯಾರಿಸುವ ಮೊದಲು ಕಲ್ಲಂಗಡಿ ಸಿಪ್ಪೆಯನ್ನು ಹಣ್ಣಿನಿಂದ ಬೇರ್ಪಡಿಸಿಕೊಳ್ಳಬೇಕು. ನಂತರ ಹಸಿರು ಬಣ್ಣದ ಮೇಲ್ಭಾಗವನ್ನು ಸಹ ಪೀಲ್ ಮಾಡಿಕೊಳ್ಳಿ. ಈಗ ಉಳಿದಿರುವ ಸಿಪ್ಪೆಯನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಿ.

ಮೊದಲಿಗೆ ಸಣ್ಣದಾಗಿ ಕತ್ತರಿಸಿಕೊಂಡಿರು ಸಿಪ್ಪೆಯ ತುಂಡುಗಳನ್ನು ಮೂರರಿಂದ ನಾಲ್ಕು ನಿಮಿಷ ನೀರಿನಲ್ಲಿ ಬೇಯಿಸಿಕೊಂಡು ಎತ್ತಿಟ್ಟುಕೊಳ್ಳಿ. ನಂತರ ಒಲೆ ಆನ್ ಮಾಡ್ಕೊಂಡು ಬಾಣಲೆ ಇರಿಸಿ ಒಗ್ಗರಣೆಗೆ ಎಣ್ಣೆ ಹಾಕಿಕೊಳ್ಳಿ. ನಂತರ ಜೀರಿಗೆ, ಸಾಸವೆ, ಕರೀಬೇವು, ಇಂಗು ಮತ್ತು ತರಿ ತರಿಯಾಗಿ ಜಜ್ಜಿಕೊಂಡಿರುವ ಸೇರಿಸಬೇಕು. ನಂತರ ಇದಕ್ಕೆ ಬೇಯಿಸಿಕೊಂಡಿರುವ ಕಲ್ಲಂಗಡಿ ಸಿಪ್ಪೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 10 ನಿಮಿಷ ಬೇಯಿಸಿಕೊಳ್ಳಿ.

ಇದನ್ನೂ ಓದಿ: ದೋಸೆ ಹಿಟ್ಟಿಗೆ ಹೆಚ್ಚು ನೀರು ಹಾಕಿಬಿಟ್ರಾ? 4 ಟ್ರಿಕ್ಸ್ ಬಳಸಿ ತಕ್ಷಣ ಗಟ್ಟಿ ಮಾಡಿ

ಈ ಮಿಶ್ರಣ ತಣ್ಣಗಾದ ಮೇಲೆ ಬೀಟ್ ಮಾಡಿಕೊಂಡಿರುವ ಮೊಸರು, ತೆಂಗಿನತುರಿ ಮತ್ತು ಸಣ್ಣದಾಗಿ ಕೊಚ್ಚಿಕೊಂಡಿರುವ ಉಪ್ಪು ಸೇರಿಸಿದ್ರೆ ರುಚಿಯಾದ ಮತ್ತು ಆರೋಗ್ಯಕರ ಕಲ್ಲಂಗಡಿ ಸಿಪ್ಪೆ ತಂಬುಳಿ ಸವಿಯಲು ಸಿದ್ಧವಾಗುತ್ತದೆ. (ಬೇಕಿದ್ರೆ ಒಗ್ಗರಣೆಗೆ ಚಿಟಿಕೆಯಷ್ಟು ಅರಿಶಿನ, ಬ್ಯಾಡಗಿ ಮೆಣಸಿನಕಾಯಿ, ಬೆಲ್ಲ ಸಹ ಹಾಕಿಕೊಳ್ಳಬಹುದು. ಮೊಸರು ಸೇರಿಸುವ ಮುನ್ನ ಒಗ್ಗರಣೆ ಮಿಶ್ರಣ ತಣ್ಣಗಾಗಿದೆಯಾ ಎಂಬುದನ್ನು ಪರಿಶೀಲಿಸಿಕೊಳ್ಳಿ)

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.

ಇದನ್ನೂ ಓದಿ: ಬೇಸಿಗೆಯಲ್ಲಿ ಹಾಲು ಪದೇ ಪದೇ ಕೆಡ್ತಿದ್ಯಾ? ಫ್ರಿಜ್‌ನಲ್ಲಿದ್ದರೂ ಒಡೆಯುತ್ತಾ? ಇಲ್ಲಿದೆ ಸಿಂಪಲ್ ಟಿಪ್ಸ್

Source link

Leave a Reply

Your email address will not be published. Required fields are marked *