ಕೊನೆಗೂ ಹೊಸಕೊಪ್ಪಲು ರೈತನಿಗೆ 66 ಪೈಸೆ ಪಾವತಿಸಿದ ಬ್ಯಾಂಕ್: ಹೇಗೆ ಗೊತ್ತಾ?

ಕೊನೆಗೂ ಹೊಸಕೊಪ್ಪಲು ರೈತನಿಗೆ 66 ಪೈಸೆ ಪಾವತಿಸಿದ ಬ್ಯಾಂಕ್: ಹೇಗೆ ಗೊತ್ತಾ?


ಕೊನೆಗೂ ಹೊಸಕೊಪ್ಪಲು ರೈತನಿಗೆ 66 ಪೈಸೆ ಪಡೆದ ಬ್ಯಾಂಕ್: ಹೇಗೆ ಗೊತ್ತಾ?

ಹಾಸನ, (ಮಾರ್ಚ್ 14): ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಸಕೊಪ್ಪಲು ರೈತನಿಗೆ ಕೆನರಾ ಬ್ಯಾಂಕ್ (ಸಕಲೇಶಪುರ ಕೆನರಾ ಬ್ಯಾಂಕ್) ನೀಡಬೇಕಿದ್ದ 66 ಪೈಸೆ ಹಣವನ್ನು ಕೊನೆಗೂ ಮರುಪಾವತಿಸಿದೆ. ಕೆಲವು ವರ್ಷಗಳ ಹಿಂದೆ ಹೊಸಕೊಪ್ಪಲು ಗ್ರಾಮದ ರೈತ ಚೊಕ್ಕಣ್ಣಗೌಡ 50 ಸಾವಿರ ರೂ. ಸಾಲವನ್ನು (ಸಾಲ) ಕೆನರಾ ಬ್ಯಾಂಕ್‌ನಲ್ಲಿ ಪಡೆದಿದ್ದರು. ಸಕಾಲಕ್ಕೆ ಸಾಲ ತೀರುವಳಿ ಮಾಡಿದ್ದ ರೈತನಿಗೆ ಕೆಲವು ದಿನಗಳ ನಂತರ ಈ 9.34 ಪೈಸೆ ಸಾಲ ಬಾಕಿ ಉಳಿದು ಮರುಪಾವತಿಸುವಂತೆ ನೋಟಿಸ್ ನೀಡದೆ ಪದೇ ಪದೇ ಕರೆ ಮಾಡಿ. ಇದರಿಂದ ಬೇಸತ್ತ ರೈತ ಬ್ಯಾಂಕಿಗೆ ತೆರಳಿ 10 ರೂ. ನೀಡಿ ಸಾಲಕ್ಕೆ ಜಮಾ ಮಾಡಿಕೊಂಡಿದ್ದಾರೆ 66 ಪೈಸೆ ವಾಪಸ್ ನೀಡುವಂತೆ ಬ್ಯಾಂಕ್ ಕ್ಯಾಷಿಯರ್ ಗೆ ಒತ್ತಾಯಿಸಿದ್ದರು. ಪೈಸೆಗೆ ಪೈಸೆ ಲೆಕ್ಕ ಹಾಕಿ ತಮ್ಮ ಹಣವನ್ನು ವಾಪಸ್ ಕೇಳುತ್ತೀರಾ. ನಮಗೂ ಹಣ ವಾಪಸ್ ಕೊಡಿ ಎಂದು ರೈತ ಚೊಕ್ಕಣ್ಣಗೌಡ ಬ್ಯಾಂಕ್ ಸಿಬ್ಬಂದಿಗೆ ಚಳಿ ಬಿಡಿಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಇದೀಗ ಬ್ಯಾಂಕ್, ಚೊಕ್ಕಣ್ಣಗೌಡ ಖಾತೆಗೆ 66 ಪೈಸೆ ಹಣವನ್ನು ಖಾತೆಗೆ ಹಾಕಲಾಗಿದೆ.

ಹಾಸನ ಜಿಲ್ಲೆಯ ಸಕಲೇಶಪುರದಲ್ಲಿರುವ ಕೆನ ಬ್ಯಾಂಕ್‌ನಲ್ಲಿ ರೈತ ಚೊಕ್ಕಣ್ಣಗೌಡ ಅವರು ಹಲವು ವರ್ಷಗಳಿಂದ ಸಾಲ ಪಡೆದಿದ್ದರು. ಬಳಿಕ ಸಾಲವನ್ನು ವಾಪಸ್ ಕಟ್ಟಿದ್ದರು. ಆದರೆ, ಬಾಕಿ ಇದ್ದ 9 ರೂಪಾಯಿ 34 ಪೈಸೆ ಬಾಕಿ ಸಾಲ ಕೊಡುವಂತೆ ಬ್ಯಾಂಕ್ ಬೆನ್ನುಬಿದ್ದಿತ್ತು. ಹಲವು ಬಾರಿ ಕರೆ ಮಾಡಿ ಸಾಲ ಕಟ್ಟಲು ಒತ್ತಾಯಿಸಲಾಗಿದೆ. ಇದರಿಂದ ಕೆರಳಿದ ರೈತ ಚೊಕ್ಕಣ್ಣಗೌಡ, ಬ್ಯಾಂಕ್‌ಗೆ ಹೋಗಿ 10 ರೂ. ನೀಡಿ 9 ರೂಪಾಯಿ 34 ಪೈಸೆ ಬಾಕಿ 66 ಪೈಸೆ ವಾಪಸ್ ಕೊಡುವಂತೆ ಇತ್ತು. 66 ಪೈಸೆ ಚಿಲ್ಲರೆ ಇಲ್ಲ ಎಂಬ ಸಬೂಬು ಹೇಳಿದ ಮಾತಿನ ಚಕಮಕಿ ನಡೆದಿತ್ತು. ಪೈಸೆಗೆ ಪೈಸೆ ಲೆಕ್ಕ ಹಾಕಿ ತಮ್ಮ ಹಣವನ್ನು ವಾಪಸ್ ಕೇಳುತ್ತೀರಾ. ನಮಗೂ ಹಣ ವಾಪಸ್ ಕೊಡಿ ಎಂದು ರೈತ ಚೊಕ್ಕಣ್ಣಗೌಡ ಪಟ್ಟು ಹಿಡಿದಿದ್ದರು. ಈ ವೇಳೆ ಬ್ಯಾಂಕ್ ವ್ಯವಸ್ಥಾಪಕರು ರೈತನ ಕ್ಷಮೆ ಕೇಳುವ ಮೂಲಕ ಪ್ರಕರಣಕ್ಕೆ ಇತ್ಯರ್ಥ ಹಾಡಿದ್ದರು.

ಇದನ್ನೂ ಓದಿ: ಹಾಸನ: 9 ರೂ 34 ಪೈಸೆ ಸಾಲಕ್ಕಾಗಿ ಬೆನ್ನುಬಿದ್ದ ಬ್ಯಾಂಕ್‌ಗೆ ಚಳಿ ಬಿಡಿಸಿದ ಗ್ರಾಹಕ

ರೈತನ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಬ್ಯಾಂಕ್‌ನವರಿಗೆ ಸರಿಯಾಗಿ ಚಳಿ ಬಿಡಿಸಿದ್ದಾರೆ ಚೊಕ್ಕಣ್ಣಗೌಡರ ಪರ ಬ್ಯಾಟಿಂಗ್. ಇನ್ನು ಈ ವಿಚಾರ ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಗಮನಕ್ಕೆ ಬಂದ ನಂತರ 66 ಪೆಸೆಯನ್ನು ರೈತನ ಖಾತೆಗೆ ಹಾಕಿ ಎಸ್‌ಎಂಎಸ್ ಕಳುಹಿಸಿದ್ದಾರೆ. ಇದರೊಂದಿಗೆ ಪೈಸೆಗೆ ಪೈಸೆ ಕೊಡುವುದು ಸುಖಾಂತ್ಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *