IPLಗೆ ಎಂಟ್ರಿ ಬೆನ್ನಲ್ಲೇ PSL​ನಿಂದ ಬ್ಯಾನ್!

IPLಗೆ ಎಂಟ್ರಿ ಬೆನ್ನಲ್ಲೇ PSL​ನಿಂದ ಬ್ಯಾನ್!


IPLಗೆ ಎಂಟ್ರಿ ಬೆನ್ನಲ್ಲೇ PSL ನಿಂದ ಬ್ಯಾನ್!

ಝಿಂಬಾಬ್ವೆ ತಂಡದ ವೇಗದ ಬೌಲರ್ ಬ್ಲೆಸ್ಸಿಂಗ್ ಮುಝರಬಾನಿ (ಬ್ಲೆಸ್ಸಿಂಗ್ ಮುಜರಬಾನಿ) ಅವರು ಪಾಕಿಸ್ತಾನ್ ಸೂಪರ್ ಒಕ್ಕೂಟ (PSL) ಒಪ್ಪಂದವನ್ನು ಉಲ್ಲಂಘಿಸಿದ ಕಾರಣ, ಪಾಕ್ ಕ್ರಿಕೆಟ್ ಮಂಡಳಿ (ಪಿಸಿಬಿ) ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ. ಮುಝರಬಾನಿ ಮುಂಬರುವ PSL 2026 ಸೀಸನ್‌ಗಾಗಿ ಇಸ್ಲಾಮಾಬಾದ್ ಯುನೈಟೆಡ್ ತಂಡದೊಂದಿಗೆ 1.1 ಕೋಟಿ ರೂಪಾಯಿ (PKR) ಮೊತ್ತಕ್ಕೆ ಒಪ್ಪಂದ ಮಾಡಿಕೊಂಡಿದೆ.

ಆದರೆ ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚಾನ್ಸ್ ಸಿಗುತ್ತಿದ್ದಂತೆ ಮುಝರಬಾನಿ ಪಾಕಿಸ್ತಾನ್ ಸೂಪರ್ ಲೀಗ್‌ಗೆ ಕೈ ಕೊಟ್ಟಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಬಾಂಗ್ಲಾದೇಶ ವೇಗಿ ಮುಸ್ತಫಿಝುರ್ ರೆಹಮಾನ್ ಬದಲಿಯಾಗಿ ಬ್ಲೆಸ್ಸಿಂಗ್ ಮುಝರಬಾನಿ ತಂಡಕ್ಕೆ ಸೇರಿಸಿದ್ದಾರೆ.

ಪಿಸಿಬಿ ಕಾನೂನು ಕ್ರಮ:

ಬ್ಲೆಸ್ಸಿಂಗ್ ಮುಝರಬಾನಿ ಸಹಿ ಮಾಡಿದ ಒಪ್ಪಂದವನ್ನು ಅರ್ಧದಲ್ಲೇ ಕೈಬಿಟ್ಟಿರುವುದು ನಿಯಮ ಬಾಹಿರ ಎಂದು ಪರಿಗಣಿಸಿರುವ PCB, ಅವರ ಮೊಕದ್ದಮೆ ಹೂಡಲು ಮತ್ತು ಭವಿಷ್ಯದ PSL ಪಂದ್ಯಗಳಿಂದ ಅವರನ್ನು ನಿಷೇಧಿಸಲು ಯೋಜಿಸುತ್ತಿದೆ.

ಕಳೆದ ವರ್ಷ ದಕ್ಷಿಣ ಆಫ್ರಿಕಾದ ಕಾರ್ಬಿನ್ ಬಾಷ್ ಕೂಡ ಇದೇ ರೀತಿ ಪೆಶಾವರ್ ಝಲ್ಮಿ ತಂಡವನ್ನು ಬಿಟ್ಟು ಮುಂಬೈ ಇಂಡಿಯನ್ಸ್ ಸೇರಿದ್ದರು. ಆಗ ಪಿಸಿಬಿ ಅವರಿಗೆ ಒಂದು ವರ್ಷದ ನಿಷೇಧ ಹೇರಿತ್ತು.

ಇದೀಗ ಬ್ಲೆಸ್ಸಿಂಗ್ ಮುಝರಬಾನಿ ಕೂಡ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅವಕಾಶ ಸಿಗುವಂತೆ ಪಾಕಿಸ್ತಾನ್ ಸೂಪರ್ ಲೀಗ್‌ಗೆ ಕೈ ಕೊಟ್ಟಿದ್ದಾರೆ. ಹೀಗಾಗಿ ಝಿಂಬಾಬ್ವೆ ವೇಗವನ್ನು ಸಹ ಪಾಕಿಸ್ತಾನ್ ಸೂಪರ್ ಕೂಟದಿಂದ ಒಂದು ವರ್ಷ ನಿಷೇಧಿಸಲಿದೆ.

ಅತ್ಯುತ್ತಮ ಬೌಲಿಂಗ್:

ಐಪಿಎಲ್ 2025 ರಲ್ಲಿ ಆರ್ಸಿಬಿ ತಂಡಕ್ಕೆ ತಾತ್ಕಾಲಿಕ ಬದಲಿ ಆಟಗಾರನಾಗಿ ಎಂಟ್ರಿ ಕೊಟ್ಟಿದ್ದ ಬ್ಲೆಸ್ಸಿಂಗ್ ಮುಝರಬಾನಿ ಈ ಬಾರಿಯ ಟಿ20 ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು.

ಇದನ್ನೂ ಓದಿ: ಸಂಜು ಸ್ಯಾಮ್ಸನ್ ಫೋಟೋ ಎಡಿಟ್ ಮಾಡಿ ಹಂಚಿಕೊಂಡ್ರಾ ಗಿಲ್: ಇಲ್ಲಿದೆ ನಿಜಾಂಶ

6 ಪಂದ್ಯಗಳಲ್ಲಿ ಮಾರಕ ದಾಳಿ ಸಂಘಟಿಸಿದ ಬ್ಲೆಸ್ಸಿಂಗ್ ಮುಝರಬಾನಿ ಒಟ್ಟು 13 ವಿಕೆಟ್ ಕಬಳಿಸಿದ್ದರು. ಹೀಗಾಗಿ ಮುಸ್ತಫಿಝುರ್ ರೆಹಮಾನ್ ಬದಲಿಯಾಗಿ ಬ್ಲೆಸ್ಸಿಂಗ್ ಮುಝರಬಾನಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅದರಂತೆ ಮಾರ್ಚ್ 17 ರಂದು ಜಿಂಬಾಬ್ವೆ ವೇಗಿ ಕೆಕೆಆರ್ ತಂಡವನ್ನು ಕೂಡಿಕೊಳ್ಳಲಿದ್ದಾರೆ.

 



Source link

Leave a Reply

Your email address will not be published. Required fields are marked *