ಒಲೆ ಹಚ್ಚೋದೆ ಬೇಡ, ಎಣ್ಣೆನೂ ಬೇಡ.. ಆದ್ರೂ ಮಾಡ್ಬೋದು ಮಲ್ಲಿಗೆಯಂತಹ ಸಾಫ್ಟ್ ಇಡ್ಲಿ-ಚಟ್ನಿ

ಒಲೆ ಹಚ್ಚೋದೆ ಬೇಡ, ಎಣ್ಣೆನೂ ಬೇಡ.. ಆದ್ರೂ ಮಾಡ್ಬೋದು ಮಲ್ಲಿಗೆಯಂತಹ ಸಾಫ್ಟ್ ಇಡ್ಲಿ-ಚಟ್ನಿ

ಒಲೆ ಹಚ್ಚೋದೆ ಬೇಡ, ಎಣ್ಣೆನೂ ಬೇಡ.. ಆದ್ರೂ ಮಾಡ್ಬೋದು ಮಲ್ಲಿಗೆಯಂತಹ ಸಾಫ್ಟ್ ಇಡ್ಲಿ-ಚಟ್ನಿ

Gas Saving Cooking Tips: ಗ್ಯಾಸ್ ಸಿಲಿಂಡರ್ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆಯೇ? ಅಥವಾ ಅಡುಗೆ ಮನೆಯಲ್ಲಿ ಗ್ಯಾಸ್ ಖಾಲಿಯಾಗಿ ಆತಂಕದಲ್ಲಿದ್ದೀರಾ? ಟೆನ್ಷನ್ ಬೇಡ! ಒಲೆ ಹಚ್ಚದೆಯೇ, ಒಂದು ಹನಿ ಎಣ್ಣೆಯನ್ನೂ ಬಳಸದೆ ಕೇವಲ 30 ನಿಮಿಷದಲ್ಲಿ ಮೃದುವಾದ ಇಡ್ಲಿ ಮತ್ತು ರುಚಿಯಾದ ಚಟ್ನಿ ತಯಾರಿಸಬಹುದು.

ಗ್ಯಾಸ್ ಬೆಲೆ ಏರಿಕೆ ಮತ್ತು ಸಿಲಿಂಡರ್ ಕೊರತೆ ಇಂದು ಸಾಮಾನ್ಯ ಜನರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ. ಗ್ಯಾಸ್ ಇಲ್ಲದಿದ್ದರೆ ಮನೆಯಲ್ಲಿ ಅಡುಗೆ ಮಾಡುವುದು ಹೇಗೆ ಎಂದು ಚಿಂತಿಸುತ್ತಿದ್ದೀರಾ?. ಹಾಗಿದ್ದಲ್ಲಿ ನಿಮಗೊಂದು ಗುಡ್ ಐಡಿಯಾ ಇದೆ.

ಒಲೆ ಹಚ್ಚುವ ಕೆಲಸವೇ ಇಲ್ಲದೆ, ಒಂದು ಹನಿ ಎಣ್ಣೆಯನ್ನೂ ಬಳಸದೆ ಅತ್ಯಂತ ರುಚಿಕರವಾದ ಮತ್ತು ಆರೋಗ್ಯಕರವಾದ ಅಡುಗೆಯನ್ನು ಮಾಡಬಹುದು. ಅದರಲ್ಲೂ ಎಲ್ಲರಿಗೂ ಇಷ್ಟವಾದ ಬಿಸಿಬಿಸಿ ಇಡ್ಲಿಯನ್ನು ಗ್ಯಾಸ್ ಸ್ಟವ್ ಇಲ್ಲದೆಯೇ ತಯಾರಿಸಬಹುದು ಎಂದರೆ ನೀವು ನಂಬುತ್ತೀರಾ? ಹೌದು, ‘ನೋ ಬಾಯಿಲ್ – ನೋ ಆಯಿಲ್’ (No Boil – No Oil) ಪದ್ಧತಿಯಲ್ಲಿ ಇಡ್ಲಿ ಮತ್ತು ಅದಕ್ಕೆ ಸೂಕ್ತವಾದ ವಿಶೇಷ ಚಟ್ನಿ ಮಾಡುವ ವಿಧಾನ ಇಲ್ಲಿದೆ ನೋಡಿ.

ಗಟ್ಟಿ ಅವಲಕ್ಕಿ – 1 ಕಪ್ತೆಂಗಿನ ಹಾಲು – ಒಂದೂವರೆ ಕಪ್ಉಪ್ಪು – ರುಚಿಗೆ ತಕ್ಕಷ್ಟು

ಹಸಿ ತೆಂಗಿನಕಾಯಿ ತುರಿ – ಕಾಲು ಕಪ್ಸಣ್ಣ ಸಾಂಬಾರ್ ಈರುಳ್ಳಿ- 20ಒಣ ಮೆಣಸಿನಕಾಯಿ – 4ಟೊಮೆಟೊ – 1ಬೆಲ್ಲ – 1 ಟೇಬಲ್ ಚಮಚಉಪ್ಪು – ತಕ್ಕಷ್ಟು

ಮೊದಲು ಒಂದು ಕಪ್ ಅವಲಕ್ಕಿಯನ್ನು ತೆಗೆದುಕೊಂಡು ಸ್ವಚ್ಛಗೊಳಿಸಿ, ಮಿಕ್ಸಿ ಜಾರ್‌ಗೆ ಹಾಕಿ ತರಿತರಿಯಾಗಿ (ರವೆಯಂತೆ) ಪುಡಿ ಮಾಡಿಕೊಳ್ಳಬೇಕು.ಈ ಪುಡಿಗೆ ತೆಂಗಿನ ಹಾಲು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.ಈಗ ಈ ಮಿಶ್ರಣವನ್ನು ಇಡ್ಲಿ ಪ್ಲೇಟ್‌ಗಳಿಗೆ ಸಾಮಾನ್ಯ ಇಡ್ಲಿಯಂತೆ ಹಾಕಿಕೊಳ್ಳಬೇಕು.ಇದರ ಮೇಲೆ ಒಂದು ಮುಚ್ಚಳವನ್ನು ಮುಚ್ಚಿ ಸುಮಾರು ಅರ್ಧ ಗಂಟೆ ಕಾಲ ಹಾಗೆಯೇ ಬಿಡಬೇಕು.ಅರ್ಧ ಗಂಟೆಯ ನಂತರ ಅವಲಕ್ಕಿಯು ತೆಂಗಿನ ಹಾಲನ್ನು ಪೂರ್ತಿಯಾಗಿ ಹೀರಿಕೊಂಡು ಮೃದುವಾದ ಮತ್ತು ಅತ್ಯಂತ ರುಚಿಯಾದ ಇಡ್ಲಿಯಾಗಿ ತಯಾರಾಗಿರುತ್ತದೆ.

ಚಟ್ನಿಗಾಗಿ ಮೊದಲು ಹಸಿ ತೆಂಗಿನಕಾಯಿಯನ್ನು ಸಣ್ಣದಾಗಿ ತುರಿದುಕೊಳ್ಳಿ. ಹಾಗೆಯೇ ಈರುಳ್ಳಿ ಮತ್ತು ಟೊಮೆಟೊವನ್ನು ಹೆಚ್ಚಿಟ್ಟುಕೊಳ್ಳಿ.ಈಗ ಮಿಕ್ಸಿ ಜಾರ್‌ಗೆ ತೆಂಗಿನಕಾಯಿ ತುರಿ, ಸಣ್ಣ ಈರುಳ್ಳಿ, ಒಣ ಮೆಣಸಿನಕಾಯಿ, ಟೊಮೆಟೊ, ಬೆಲ್ಲ ಮತ್ತು ಉಪ್ಪು ಹಾಕಿಕೊಳ್ಳಿ.ಇದಕ್ಕೆ ಸ್ವಲ್ಪ ನೀರು ಸೇರಿಸಿ ಅತಿಯಾಗಿ ತೆಳುವಾಗದಂತೆ, ಸ್ವಲ್ಪ ಗಟ್ಟಿಯಾಗಿರುವಂತೆ ಮೆತ್ತಗೆ ರುಬ್ಬಿಕೊಳ್ಳಿ.ಈ ಮಿಶ್ರಣವನ್ನು ಒಂದು ಬಟ್ಟಲಿನಲ್ಲಿ ಹಾಕಿಟ್ಟುಕೊಂಡರೆ ಒಲೆ ಹಚ್ಚದ ಇಡ್ಲಿಗೆ ಅದ್ಭುತವಾದ ಚಟ್ನಿ ಸಿದ್ಧ!

Source link

Leave a Reply

Your email address will not be published. Required fields are marked *