Headlines

ಯಾವ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬೇಡಿ : ಈ ರಾಶಿಯವರಿಗೆ ಮಾ. 21ರವರೆಗೆ ಪ್ರೇಮದಲ್ಲಿ ಭಗ್ನತೆ

ಯಾವ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬೇಡಿ : ಈ ರಾಶಿಯವರಿಗೆ ಮಾ. 21ರವರೆಗೆ ಪ್ರೇಮದಲ್ಲಿ ಭಗ್ನತೆ


ಯಾವ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬೇಡಿ : ಈ ರಾಶಿಯವರಿಗೆ ಮಾ. 21ರವರೆಗೆ ಪ್ರೇಮದಲ್ಲಿ ಭಗ್ನತೆ

ಮಾರ್ಚ್ 15 ರಿಂದ ಮಾರ್ಚ್ 21 ರವರೆಗೆ ಪ್ರೇಮದ ಭಗ್ನತೆ, ಹಳೆಯ ಪ್ರೇಮದ ಹೊಸ ಹುಟ್ಟು ಕಾಣಿಸುತ್ತದೆ. ಮರು ವಿವಾಹ ಪ್ರಯತ್ನಕ್ಕೆ ಸಾಗಲಿದೆ. ಪ್ರೇಮಕ್ಕೆ ಆಕರ್ಷಣೆಯ ಲೇಪವನ್ನು ಹಚ್ಚುವಿರಿ. ಎಲ್ಲವೂ ಕ್ಷಣಿಕವೆಂದು ಅರಿವಾದಾಗ ಕಾಲ ಕಳೆಯುತ್ತದೆ. ಹೆಜ್ಜೆ ಇಟ್ಟು ದೃಷ್ಟಿ ಹರಿಸುವ ಬದಲು, ದೃಷ್ಟಿ ಇಟ್ಟು ಹೆಜ್ಜೆ ಹಾಕಿ.

ಮೇಷ

ಈ ವಾರ ಸಂಗಾತಿಯೊಂದಿಗೆ ಸಣ್ಣಪುಟ್ಟ ವಾಗ್ವಾದಗಳಾಗಬಹುದು, ತಾಳ್ಮೆ ಅಗತ್ಯ. ಪ್ರೇಮಿಗಳಿಗೆ ಮನೆಯವರಿಂದ ಹಸಿರು ನಿಶಾನೆ ಸಿಗುವ ಸಾಧ್ಯತೆ ಇದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರುವ ಸುಸಮಯವಿದು.

ವೃಷಭ

ಹಳೆಯ ಪ್ರೇಮ ನೆನಪಾಗಿ ಮನಸ್ಸು ಸ್ವಲ್ಪ ಚಂಚಲವಾಗಬಹುದು. ದಾಂಪತ್ಯದಲ್ಲಿ ಪರಸ್ಪರ ಗೌರವ ಹೆಚ್ಚಲಿದೆ. ಹೊಸ ಸಂಬಂಧಕ್ಕೆ ಕೈಹಾಕುವ ಮೊದಲು ಯೋಚಿಸಿ, ಪ್ರೇಮಭಂಗದ ಭೀತಿ ಇರುವವರು ಮೌನವಾಗಿರುವುದು ಒಳಿತು.

ಮಿಥುನ

ಸಂವಹನ ಕೊರತೆಯಿಂದ ದೂರವಿರುವ ಪ್ರೇಮಿಗಳು ಈ ವಾರ ಮತ್ತೆ ಒಂದಾಗುತ್ತಾರೆ. ಸಂಗಾತಿಗೆ ವಿಶೇಷ ಉಡುಗೊರೆ ನೀಡುವ ಮೂಲಕ ಪ್ರೀತಿ ಬಲಪಡಿಸುವಿರಿ. ವಿವಾಹ ಆಕಾಂಕ್ಷಿಗಳಿಗೆ ಉತ್ತಮ ಸಂಬಂಧಗಳನ್ನು ಹುಡುಕಿ ಬರಲಿವೆ.

ಕಟಕ

ಕುಟುಂಬದಲ್ಲಿ ವಿವಾಹದ ಮಾತುಕತೆಗಳು ಶುಭ ಫಲ ನೀಡಲಿವೆ. ಪ್ರೇಮ ಜೀವನದಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದ ಮನಸ್ತಾಪ ಉಂಟಾಗಬಹುದು. ಸಂಗಾತಿಯ ಭಾವನೆಗಳಿಗೆ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ.

ಸಿಂಹ

ನಿಮ್ಮ ಆಕರ್ಷಕ ವ್ಯಕ್ತಿತ್ವದಿಂದ ಸಂಗಾತಿಯ ಮನ ಗೆಲ್ಲುವಿರಿ. ಪ್ರೇಮ ನಿವೇದನೆಗೆ ಇದು ಅತ್ಯಂತ ಶುಭ ವಾರ. ವಿವಾಹ ಜೀವನದಲ್ಲಿ ಚೈತನ್ಯ ಮೂಡಲಿದೆ, ಹೊಸ ದಂಪತಿಗಳ ನಡುವೆ ಸಾಮರಸ್ಯ ವೃದ್ಧಿಯಾಗಲಿದೆ.

ಕನ್ಯಾ

ಕೆಲಸದ ಒತ್ತಡದಿಂದ ಸಂಗಾತಿಯಿಂದ ದೂರ ಉಳಿಯುವ ಸಂದರ್ಭ ಬರಬಹುದು. ಅನಗತ್ಯ ಸಂಶಯಗಳು ಪ್ರೇಮಭಂಗಕ್ಕೆ ದಾರಿಯಾಗದಂತೆ ಎಚ್ಚರವಹಿಸಿ. ವಿವಾಹ ಪ್ರಸ್ತಾವನೆಗಳು ಅಂತಿಮವಾಗಲು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗಬಹುದು.

ತುಲಾ

ಸಂಗಾತಿಯೊಂದಿಗೆ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವ ಯೋಗವಿದೆ. ಪ್ರೇಮಿಗಳ ನಡುವೆ ಇದ್ದ ಗೊಂದಲಗಳು ಬಗೆಹರಿಯಲಿವೆ. ಹೊಸದಾಗಿ ವಿವಾಹವಾದವರಿಗೆ ಈ ವಾರ ಅತ್ಯಂತ ಮಧುರವಾದ ಕ್ಷಣಗಳನ್ನು ಕಳೆಯುವ ಅವಕಾಶ ಸಿಗಲಿದೆ.

ವೃಶ್ಚಿಕ

ನಿಮ್ಮ ಹಠಮಾರಿತನ ಪ್ರೇಮ ಸಂಬಂಧದಲ್ಲಿ ಬಿರುಕು ಮೂಡಿಸಬಹುದು, ಹೊಂದಾಣಿಕೆ ಮುಖ್ಯ. ಪ್ರೇಮ ವೈಫಲ್ಯ ಅನುಭವಿಸಿದವರಿಗೆ ಹಳೆಯ ನೋವಿನಿಂದ ಹೊರಬರಲು ಮಿತ್ರರ ಸಹಾಯ ಸಿಗಲಿದೆ. ಮದುವೆಯ ಮಾತುಕತೆಗಳಲ್ಲಿ ವಿಳಂಬ ಸಾಧ್ಯತೆ.

ಧನು

ಪ್ರೇಮ ಜೀವನದಲ್ಲಿ ನಂಬಿಕೆ ಮತ್ತು ಬದ್ಧತೆ ಹೆಚ್ಚಾಗಲಿದೆ. ಮನೆಯ ಹಿರಿಯರ ಸಮ್ಮತಿಯೊಂದಿಗೆ ವಿವಾಹ ನಿಶ್ಚಿತವಾಗುವ ಸಾಧ್ಯತೆ ಇದೆ. ಸಂಗಾತಿಯ ಭವಿಷ್ಯದ ಬಗ್ಗೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ.

ಮಕರ

ವೃತ್ತಿಜೀವನದ ಬಿಡುವಿಲ್ಲದ ಕಾರಣ ಪ್ರೇಮ ಜೀವನಕ್ಕೆ ಸಮಯ ನೀಡುವುದು ಕಷ್ಟವಾಗುತ್ತದೆ. ಇದು ಸಂಗಾತಿಯ ಅಸಮಾಧಾನಕ್ಕೆ. ಪ್ರೇಮಿಗಳು ಪರಸ್ಪರ ಸಹಕರಿಸುವುದರಿಂದ ಸಂಬಂಧ ಗಟ್ಟಿಯಾಗಲಿದೆ.

ಕುಂಭ

ಹೊಸಬರ ಪರಿಚಯವಾದ ಪ್ರೇಮವಾಗಿ ಬದಲಾಗುವ ಲಕ್ಷಣಗಳಿವೆ. ವಿಚ್ಛೇದನ ಅಥವಾ ಪ್ರೇಮಭಂಗ ಅನುಭವಿಸಿದವರಿಗೆ ಹೊಸ ಜೀವನ ಆರಂಭಿಸಲು ಇದು ಸಕಾಲ. ದಾಂಪತ್ಯದಲ್ಲಿ ಸುಖ-ಶಾಂತಿ ನೆಲೆಸಲಿದೆ, ಸಂತೋಷದ ವಾತಾವರಣವಿರುತ್ತದೆ.

ಮೀನ

ಪ್ರೇಮ ವ್ಯವಹಾರಗಳಲ್ಲಿ ಆತುರದ ನಿರ್ಧಾರ ಬೇಡ, ಭಾವನೆಗಳ ಮೇಲೆ ಹಿಡಿತವಿರಲಿ. ವಿವಾಹ ಆಕಾಂಕ್ಷಿಗಳಿಗೆ ಕಂಕಣ ಭಾಗ್ಯ ಕೂಡಿಬರಲಿದೆ, ಶುಭ ಕಾರ್ಯಗಳು ನೆರವೇರಲಿವೆ. ಸಂಗಾತಿಯ ಬೆಂಬಲದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಲಿದೆ.

ಲೋಹಿತ ಹೆಬ್ಬಾರ್



Source link

Leave a Reply

Your email address will not be published. Required fields are marked *