Headlines

ಈ ರಾಶಿಯವರಿಗೆ ವಿದೇಶದಲ್ಲಿ ಉದ್ಯೋಗ ಸಿಗುವ ಭಾಗ್ಯ: ಹೊಸ ಜವಾಬ್ದಾರಿ ಖಂಡಿತ

ಈ ರಾಶಿಯವರಿಗೆ ವಿದೇಶದಲ್ಲಿ ಉದ್ಯೋಗ ಸಿಗುವ ಭಾಗ್ಯ: ಹೊಸ ಜವಾಬ್ದಾರಿ ಖಂಡಿತ


ಈ ರಾಶಿಯವರಿಗೆ ವಿದೇಶದಲ್ಲಿ ಉದ್ಯೋಗ ಸಿಗುವ ಭಾಗ್ಯ: ಹೊಸ ಜವಾಬ್ದಾರಿ ಖಂಡಿತ

ಮಾರ್ಚ್ 15 ರಿಂದ 21 ರವರೆಗಿನ ವಾರ. ಉದ್ಯೋಗಸ್ಥರಿಗೆ ವಿದೇಶ ಪ್ರವಾಸದ ಆಸೆ ಅಧಿಕ, ಕಿರಿಕಿರಿ ಕೆಲವರಿಗೆ, ಒತ್ತಡದ ಸುಧಾರಣೆಗೆ ಪ್ರಯತ್ನಗಳು ಬೇಕಾಗುತ್ತವೆ. ಅಂತರಿಕ ಕಲಹ ಶಮನ ವಸ್ತು.

ಮೇಷ:

ಉದ್ಯೋಗದಲ್ಲಿ ಸ್ಥಿರತೆ ಇರಲಿದೆ. ಹೊಸ ಜವಾಬ್ದಾರಿಗಳು ಉನ್ನತ ಸ್ಥಾನಕ್ಕೆ ದಾರಿಯಾಗಲಿವೆ. ಉದ್ಯಮ ಸ್ಥಾಪನೆಗೆ ಇದು ಸಕಾಲ. ವೃತ್ತಿ ನಿಮಿತ್ತ ಕಿರು ಪ್ರಯಾಣ ಸಂಭವಿಸುವುದು. ಹಿರಿಯ ಅಧಿಕಾರಿಗಳ ಬೆಂಬಲ ಸಿಗಲಿದೆ.

ವೃಷಭ:

ವೃತ್ತಿ ಬದಲಾವಣೆಗೆ ಪ್ರಯತ್ನಿಸುತ್ತಿರುವ ಯಶಸ್ಸು ಸಿಗಲಿದೆ. ವಿದೇಶಿ ಕಂಪನಿಗಳಲ್ಲಿ ಉದ್ಯೋಗಾವಕಾಶ ಅಥವಾ ಉದ್ಯೋಗದ ಕಾರಣ ದೂರದ ಪ್ರಯಾಣವಿರುತ್ತದೆ. ಹೊಸ ಉದ್ಯಮ ಆರಂಭಿಸಲು ಹೂಡಿಕೆದಾರರು ಲಭ್ಯವಾಗುವ ಸಾಧ್ಯತೆಯಿದೆ.

ಮಿಥುನ:

ಕೆಲಸದಲ್ಲಿ ಅತಿಯಾದ ಒತ್ತಡವಿದ್ದರೂ ಸ್ಥಾನಮಾನ ಹೆಚ್ಚಾಗಲಿದೆ. ಸರ್ಕಾರಿ ಕೆಲಸಗಳಿಗೆ ಪ್ರಯತ್ನಿಸುವವರಿಗೆ ಶುಭ ಸುದ್ದಿ ಸಿಗಲಿದೆ. ಉದ್ಯಮದಲ್ಲಿ ಲಾಭಾಂಶ ಹೆಚ್ಚಾಗಲಿದೆ, ಹೊಸ ಪಾಲುದಾರಿಕೆ ವ್ಯವಹಾರಕ್ಕೆ ಉತ್ತಮ ಸಮಯ.

ಕರ್ಕಾಟಕ:

ಉದ್ಯೋಗದಲ್ಲಿ ವರ್ಗಾವಣೆ ಅಥವಾ ಬದಲಾವಣೆಯ ಸಾಧ್ಯತೆ ದಟ್ಟವಾಗಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಮತ್ತು ಉನ್ನತ ಹುದ್ದೆ ಲಭ್ಯವಾಗಲಿದೆ. ಉದ್ಯಮ ಸ್ಥಾಪನೆಗೆ ಕುಟುಂಬದ ಸಹಕಾರ ದೊರೆಯಲಿದೆ, ಆತ್ಮವಿಶ್ವಾಸ ಹೆಚ್ಚಾಗುವುದು.

ಸಿಂಹ:

ನಿಮ್ಮ ನಾಯಕತ್ವ ಗುಣಕ್ಕೆ ಮನ್ನಣೆ ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ ಹೊಂದುವ ಯೋಗವಿದೆ. ವೃತ್ತಿ ಸಂಬಂಧಿತ ಪ್ರಯಾಣಗಳು ಲಾಭದಾಯಕವಾಗಿರುತ್ತವೆ. ಹೊಸ ಉದ್ಯಮ ಆರಂಭಿಸಲು ತಾಂತ್ರಿಕ ನೆರವು ಹಾಗೂ ಆರ್ಥಿಕ ಸೌಲಭ್ಯ ದೊರೆಯಲಿದೆ.

ಕನ್ಯಾ:

ಸ್ಥಿರವಾದ ಉದ್ಯೋಗ ಜೀವನವಿರಲಿದೆ. ಕೆಲಸದ ಸ್ಥಳದಲ್ಲಿ ಹೊಸ ಬದಲಾವಣೆಗಳು ಇರುತ್ತವೆ. ವ್ಯಾಪಾರ ವಿಸ್ತರಣೆಗೆ ಇದು ಪೂರಕ ಸಮಯ. ದೀರ್ಘಕಾಲದ ಉದ್ಯೋಗದ ಸಮಸ್ಯೆಗಳು ಬಗೆಹರಿದು ಮಾನಸಿಕ ಶಾಂತಿ ಸಿಗಲಿದೆ.

ತುಲಾ:

ವೃತ್ತಿ ಜೀವನದಲ್ಲಿ ದೊಡ್ಡ ಬದಲಾವಣೆ ನಿರೀಕ್ಷಿಸಬಹುದು. ಪ್ರತಿಷ್ಠಿತ ಸಂಸ್ಥೆಗಳಿಂದ ಉದ್ಯೋಗದ ಆಫರ್ ಬರಬಹುದು. ಉದ್ಯಮದಲ್ಲಿ ನಾವೀನ್ಯತೆ ತರಲು ಪ್ರಯತ್ನಿಸುವಿರಿ. ಉದ್ಯೋಗದ ನಿಮಿತ್ತ ರಾಜ್ಯದ ಹೊರಗೆ ಪ್ರಯಾಣಿಸುವ ಸಾಧ್ಯತೆಯಿದೆ.

ವೃಶ್ಚಿಕ:

ಉದ್ಯೋಗದಲ್ಲಿ ಅಸ್ಥಿರತೆ ದೂರವಾಗಿ ನೆಮ್ಮದಿ ಸಿಗಲಿದೆ. ಉನ್ನತ ವ್ಯಾಸಂಗದ ಜೊತೆಗೆ ಉದ್ಯೋಗ ಮಾಡುವವರಿಗೆ ಪ್ರಗತಿ ಇರಲಿದೆ. ಸ್ವಂತ ಉದ್ಯಮ ಆರಂಭಿಸಲು ಸಲಹೆ ಪಡೆಯುವುದು ಉತ್ತಮ. ಸವಾಲುಗಳನ್ನು ಜಯಿಸುವಿರಿ.

ಧನು:

ಭಾಗ್ಯೋದಯದ ಸಮಯವಿದು. ಉದ್ಯೋಗದಲ್ಲಿ ಬಡ್ತಿ ಮತ್ತು ಹೆಚ್ಚಿನ ಸಂಬಳದ ಸೂಚನೆ ಇದೆ. ಉದ್ಯಮ ಸ್ಥಾಪನೆಗೆ ಬೇಕಾದ ಭೂಮಿ ಅಥವಾ ಕಟ್ಟಡದ ಯೋಗವಿದೆ. ವೃತ್ತಿ ನಿಮಿತ್ತ ಪ್ರವಾಸಗಳು ಯಶಸ್ವಿಯಾಗಿ ಮುಕ್ತಾಯಗೊಳ್ಳಲಿವೆ.

ಮಕರ:

ಉದ್ಯೋಗದಲ್ಲಿ ಶಿಸ್ತು ಮತ್ತು ಸಮಯ ಪಾಲನೆ ನಿಮಗೆ ಉನ್ನತ ಸ್ಥಾನವನ್ನು ತಂದುಕೊಡಲಿದೆ. ಹಳೆಯ ಉದ್ಯಮದಲ್ಲಿ ಲಾಭವಾಗಲಿದೆ, ಹೊಸ ಶಾಖೆ ತೆರೆಯಲು ನಿರ್ಧರಿಸುವಿರಿ. ಕೆಲಸದ ಒತ್ತಡದ ನಡುವೆಯೂ ಯಶಸ್ಸು ನಿಮ್ಮದಾಗಲಿದೆ.

ಕುಂಭ:

ವೃತ್ತಿ ಬದಲಾವಣೆ ಲಾಭದಾಯಕವಾಗಲಿದೆ. ಕ್ಷೇತ್ರದಲ್ಲಿರುವವರಿಗೆ ಉತ್ತಮ ಅವಕಾಶಗಳು ಸಿಗಲಿವೆ. ಹೊಸ ಸ್ಟಾರ್ಟ್ಅಪ್ ಆರಂಭಿಸಲು ಇದು ಶುಭ ಸಮಯ. ವಿದೇಶಿ ಪ್ರವಾಸ ಅಥವಾ ದೂರದವರಿಗೆ ಪ್ರಯಾಣ ಬೆಳೆಸುವಿರಿ.

ಮೀನ:

ಉದ್ಯೋಗದಲ್ಲಿ ಸ್ಥಿರತೆ ಕಾಯ್ದುಕೊಳ್ಳುವಿರಿ. ಹಿರಿಯರ ಮಾರ್ಗದರ್ಶನದಿಂದ ಉನ್ನತ ಹುದ್ದೆ ಅಲಂಕರಿಸಿ. ಉದ್ಯಮದಲ್ಲಿ ಹೂಡಿಕೆ ಮಾಡಲು ಹಣಕಾಸಿನ ನೆರವು ಸಿಗಲಿದೆ. ವೃತ್ತಿ ಜೀವನದಲ್ಲಿ ಮಹತ್ವದ ತಿರುವು ಪಡೆಯುವ ಸಾಧ್ಯತೆ ಇದೆ.

– ಲೋಹಿತ ಹೆಬ್ಬಾರ್ – 8762924271



Source link

Leave a Reply

Your email address will not be published. Required fields are marked *