
ಮಂಗಳೂರು, ಮಾರ್ಚ್ 14: ಗಲ್ಫ್ ರಾಷ್ಟ್ರದಲ್ಲಿ ನಡೆಯುತ್ತಿರುವ ಯುದ್ಧ ಭಾರತದಲ್ಲಿ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ನೀಡಿದೆ. ಗ್ಯಾಸ್ (ಅನಿಲ) ಎಮರ್ಜೆನ್ಸಿ ಗ್ರಾಹಕರು ಉಸಿರುಗಟ್ಟಿಸಿದ್ದಾರೆ. ಇತ್ತ ಕರ್ನಾಟಕದ ಜಿಲ್ಲೆಯಲ್ಲಿ ಸಿಲಿಂಡರ್ ಕೊರತೆ ಉಂಟಾಗಿದ್ದು, ಸೌದೆ ಒಲೆಯತ್ತ ಮುಖ ಮಾಡುತ್ತಿದೆ, ಮತ್ತೆ ಕೆಲ ಹೋಟೆಲ್ಗಳು ಬಂದ್ ಆಗುತ್ತಿದೆ. ಈ ಮಧ್ಯೆ ಮಂಗಳೂರು ಹೋಟೆಲ್ ಉದ್ಯಮ ಸಂಸ್ಥೆಯೊಂದು ವಿಶೇಷ ಆಫರ್ ನೀಡಿದೆ. ಅದೇನೆಂದರೆ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಕೊಟ್ಟವರಿಗೆ ಸುಮಾರು 5,500 ರೂ ಮೌಲ್ಯದ ಫುಡ್ ನೀಡಲಾಗುತ್ತಿದೆ.
ಗ್ರಾಹಕರಿಗೆ ಉತ್ತಮ ಕೊಡುಗೆ ನೀಡಿದ ಹೋಟೆಲ್
ಮಂಗಳೂರು ವೋಕ್ ಆಯಂಡ್ ಫೋರ್ಕ್ ಮತ್ತು ಬಿಗ್ ಫ್ಯಾಟ್ ರೋಲ್ ಸಂಸ್ಥೆಯಿಂದ ಈ ಭರ್ಜರಿ ಆಫರ್ ನೀಡಲಾಗಿದೆ. ಮಂಗಳೂರು, ಬೆಂಗಳೂರು ಸೇರಿದಂತೆ ಹಲವು ಕಡೆ ಸಂಸ್ಥೆ ತನ್ನ ಔಟ್ಲೆಟ್ ಹೊಂದಿದೆ. ಹತ್ತಿರದ ಯಾವುದೇ ಔಟ್ಲೆಟ್ಗೆ ಹೋದರೆ ಈ ಆಫರ್ ಸಿಗುತ್ತದೆ ಎಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಸಿಲಿಂಡರ್ ಕೊರತೆ: ಸೌದೆ ಓಲೆ ಮೇಲೆ ಅಡುಗೆ ಮಾಡಿದ ಇಂದಿರಾ ಕ್ಯಾಂಟಿನ್ ಸಿಬ್ಬಂದಿ
ಗ್ಯಾಸ್ ಅಭಾವ ಹಿನ್ನೆಲೆ ಮಂಗಳೂರು ವೋಕ್ ಆಯಂಡ್ ಫೋರ್ಕ್ ಮತ್ತು ಬಿಗ್ ಫ್ಯಾಟ್ ರೋಲ್ ಸಂಸ್ಥೆ ಆಫರ್ ಮೊರೆ ಹೋಗಿದೆ. ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡಿದವರಿಗೆ 50 ಪ್ಲೇಟ್ ಮೊಮೊಸ್, ಇನ್ನೊಂದು ಸಂಸ್ಥೆಯಿಂದ 25 ರೋಲ್ ಸಿಗಲಿದೆ. ಅಂದರೆ ಬರೋಬ್ಬರಿ 5,500 ರೂ ಮೌಲ್ಯದ ಫುಡ್ ದೊರೆಯಲಿದೆ.
ಗ್ಯಾಸ್ ತಂದು ಕೊಟ್ಟವರಿಗೆ ಈ ಆಫರ್: ಮ್ಯಾನೇಜರ್ ಅನಾಸ್
ಇನ್ನು ಈ ಉಚಿತ ಫುಡ್ ಆಫರ್ ಬಗ್ಗೆ ಟಿವಿ 9ಗೆ ಹೋಟೆಲ್ ಮ್ಯಾನೇಜರ್ ಅನಾಸ್ ಹೇಳಿಕೆ ನೀಡಿದ್ದಾರೆ, ಇದು ಸೀಮಿತ ಅವಧಿಗೆ ಮಾತ್ರ ನೀಡುತ್ತಿರುವ ಆಫರ್. ನಮಗೆಯೂ ಎಲ್ಲಿಯೂ ಕಮರ್ಷಿಯಲ್ ಗ್ಯಾಸ್ ಸಿಗುತ್ತಿಲ್ಲ. ಈಗ ಫುಡ್ ಕಸ್ಟಮೈಸ್ ಮಾಡಿ ಕೊಡಲಾಗಿದೆ. ಗ್ಯಾಸ್ ಡೆಲಿವರಿ ಮಾಡುವವರು ಕೈ ಕೊಟ್ಟಿದ್ದಾರೆ. ಹೀಗಾಗಿ ಕಮರ್ಷಿಯಲ್ ಗ್ಯಾಸ್ ತಂದು ಕೊಟ್ಟವರಿಗೆ ಈ ಆಫರ್ ಸಿಗುತ್ತೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಗ್ಯಾಸ್ ಬೆನ್ನಲ್ಲೇ ಬೆಂಗಳೂರಿನ ಜನರಿಗೆ ಕಾದಿದೆ ಮತ್ತೊಂದು ಶಾಕ್!
ಇನ್ನು ಗ್ರಾಹಕರ ಪ್ರತಿಕ್ರಿಯೆ ಹೇಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆಫರ್ ಬಗ್ಗೆ ಘೋಷಣೆ ಮಾಡಿದ ಬಳಿಕ ವಿಚಾರಿಸುತ್ತಿದ್ದಾರೆ. ಆದರೆ ಈವರೆಗೆ ಯಾರು ತಂದು ಕೊಟ್ಟಿಲ್ಲ. 50 ಪ್ಲೇಟ್ ಮೊಮೊಸ್ಗೆ 5,500 ರೂಪಾಯಿ ಆಗುತ್ತೆ. ಆದರೆ ನಮಗೆ ಗ್ಯಾಸ್ ಸಿಗಬೇಕು. ಹೀಗಾಗಿ ನಮ್ಮ ಮುಖ್ಯ ಉದ್ದೇಶ ಗ್ಯಾಸ್. ನಮಗೆ ನಿತ್ಯ ಒಂದು ಸಿಲಿಂಡರ್ ಬೇಕು. ಆದರೆ ಈಗ ಗ್ಯಾಸ್ ಹೆಚ್ಚಾಗಿ ಖರ್ಚಾಗುವ ಫುಡ್ ಮಾಡುವುದನ್ನ ನಿಲ್ಲಿಸಿದ್ದೇವೆ ಎಂದು ಅನಾಸ್ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.