
ಹಲವು ಯುವತಿಯರ ಜೊತೆಗಿರುವ ನಟನ ಬೆಡ್ ರೂಂ ವಿಡಿಯೋ ಲೀಕ್, ಆದರೂ ಬೆಂಬಲಕ್ಕೆ ನಿಂತ ಪತ್ನಿ, ಕೆಲ ನಟಿಯರು,ಮಾಡೆಲ್ ಜೊತೆಗೆ ಸರಸದ ವಿಡಿಯೋಗಳು ಲೀಕ್ ಆಗಿ ಕೋಲಾಹಲ ಸಷ್ಟಿಸಿದ ಬೆನ್ನಲ್ಲೇ, ನಟನ ಬೆಂಬಲಕ್ಕೆ ಪತ್ನಿ ನಿಂತುಕೊಂಡಿದ್ದಾಳೆ.
ಮನಿಲ (ಮಾ.14) ಖಾಸಗಿ ವಿಡಿಯೋಗಳು ಲೀಕ್ ಆಗಿ ಕೋಲಾಹಲ ಸೃಷ್ಟಿಸಿದ ಹಲವು ಘಟನೆಗಳು ನಡೆದಿದೆ. ವಿಡಿಯೋದಿಂದ ಸಂಬಂಧಗಳು ಮುರಿದು ಬಿದಿದ್ದೆ, ಸಂಸಾರ ಬೀದಿಗೆ ಬಂದಿದೆ. ಮದುವೆಗಳು ರದ್ದಾದ ಘಟನೆಗಳು ನಡೆದಿದೆ. ಇದೀಗ ನಟನ ಖಾಸಗಿ ವಿಡಿಯೋಗಳು ಲೀಕ್ ಆಗಿದೆ. ಮಾಡೆಲ್, ನಟಿಯರು ಸೇರಿದಂತೆ ಕೆಲ ಯುವತಿಯರ ಜೊತೆಗಿನ ಖಾಸಗಿ ವಿಡಿಯೋಗಳು ಸೋಶಿಯಲ್ ಮೀಡಿಯಾ ಮೂಲಕ ಕೋಲಾಹಲ ಸೃಷ್ಟಿಸಿದೆ. ನಟನ ಸಂಸಾರದ ಬೀದಿ ಬಿತ್ತು ಅನ್ನೋವಷ್ಟರಲ್ಲೇ ಅಚ್ಚರಿ ನಡೆದಿದೆ. ನಟನ ಬೆಂಬಲಕ್ಕೆ ಆತನ ಪತ್ನಿ ನಿಂತಿದ್ದಾಳೆ. ಸಂಸಾರದಲ್ಲಿ ಕೋಲಾಹಲ ಎದ್ದರೂ ಮಕ್ಕಳ ಭವಿಷ್ಯಕ್ಕಾಗಿ ಪತ್ನಿ ಈ ವಿಚಾರವನ್ನು ಮರೆಯಲು ನಿರ್ಧರಿಸಿದ್ದಾಳೆ. ಜೊತೆಗೆ ನಟನ ಬೆಂಬಲಕ್ಕೆ ನಿಂತ ಘಟನೆ ಪಿಲಿಫೈನ್ಸ್‌ನಲ್ಲಿ ನಡೆದಿದೆ.
ಪತ್ನಿ ಮನೆಯಲ್ಲಿ ಹೊರಗಡೆ ನಟಿ, ಮಾಡೆಲ್ ಜೊತೆ ಚಕ್ಕಂದ
ನಟ ಹಾಗೂ ಸೋಶಿಯಲ್ ಮೀಡಿಯಾ ನಿಕ್ಕೋ ನಟಿವಿಡಾಟ್ ಖಾಸಗಿ ವಿಡಿಯೋಗಳು ಸೋಶಿಯಲ್ ಮೀಡಿಯಾ ಮೂಲಕ ಲೀಕ್ ಆಗಿತ್ತು. ಇದೇ ವೇಳೆ ಕೆಲ ನಟ ನಟಿಯರ ವಿಡಿಯೋಗಳು ಹರಿದಾಡಿತ್ತು. ಹೀಗಾಗಿ ಪಿಲಿಫೈನ್ಸ್‌ನಲ್ಲಿ ಸಿನಿ ರಂಗದಲ್ಲಿ ಕೋಲಾಹಲ ನಡೆದಿದೆ. ಪ್ರಕರಣಗಳು ದಾಖಲಾಗಿತ್ತು. ಈ ಪೈಕಿ ನಿಕ್ಕೋ ನಟಿವಿಡಾಟ್ ವಿಡಿಯೋ ದೇಶ ವಿದೇಶಗಳಲ್ಲೂ ಭಾರಿ ಜನಪ್ರಿಯರಾಗಿದ್ದಾರೆ. ಹೀಗಾಗಿ ನಿಕ್ಕೋ ವಿಡಿಯೋಗಳಿಂದ ಭಾರಿ ಚರ್ಚೆ ಶುರುವಾಗಿತ್ತು. ಇಷ್ಟೇ ಅಲ್ಲ ನಿಕ್ಕೋ ಮದುವೆಯಾಗಿ ಮಕ್ಕಳ ತಂದೆಯಾಗಿದ್ದಾರೆ. ಇದೇ ಕಾರಣದಿಂದ ಸಂಸಾರದ ಆತಂಕ ಎದುರಾಗಿತ್ತು. ಪತ್ನಿ ಮನೆಯಲ್ಲಿದ್ದರೆ, ನಟ ಶೂಟಿಂಗ್, ಪ್ರಮೋಶನ್ ಎಂದು ಹಲವೆಡೆ ಸುತ್ತಾಡುತ್ತಿದ್ದರು.ಇದೇ ವೇಳೆ ನಡದ ಸರಸದ ವಿಡಿಯೋಗಳು ಇದೀಗ ಹೊರಬಂದಿದೆ.
ಕಣ್ಮೀರಿಟ್ಟು ಕ್ಷಮೆಯಾಚಿಸಿದ ನಿಕ್ಕೋ
ಪತ್ನಿ ಸಿಯಲೋ ಜೊತೆ ಚರ್ಚಿಸಿದ ಬಳಿಕ ನಿಕ್ಕೋ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ್ದಾರೆ. ತನ್ನದೇ ವಿಡಿಯೋ ಎಂದು ಒಪ್ಪಿಕೊಂಡಿದ್ದಾರೆ. 2022-23ರಲ್ಲಿ ನಡೆದ ಘಟನೆ. ಕೆಲ ದುರ್ಬಲ ಕ್ಷಣದಲ್ಲಿ ನಾನು ಮಾಡಿದ ತಪ್ಪು ಎಂದು ನಿಕ್ಕೋ ಒಪ್ಪಿಕೊಂಡಿದ್ದಾರೆ. ಇದು ನನ್ನ ಜೀವನದ ಅತೀ ದೊಡ್ಡ ತಪ್ಪು ಹಾಗು ದುರ್ಬಲ ಘಟನೆಯಾಗಿದೆ. ಇದಕ್ಕಾಗಿ ನನ್ನನ್ನು ಕ್ಷಮಿಸಿ ಎಂದು ನಿಕ್ಕೋ ಕಣ್ಣೀರಿಟ್ಟಿದ್ದಾರೆ.
ಕಣ್ಣೀರಿಟ್ಟು ನಟನ ಬೆಂಬಲಕ್ಕೆ ನಿಂತ ಪತ್ನಿ ಸಿಯಲೋ
ನಿಕ್ಕೋ ಪತ್ನಿ ಸಿಯಲೋ ಯಸೆಬಿಯಾ ಘಟನೆಯಿಂದ ತೀವ್ರವಾಗಿ ನೊಂದಿದ್ದಾರೆ. ಘಟನೆಗೆ ಕಣ್ಮೀರು ಹಾಕಿದ್ದಾರೆ. ತಮ್ಮ ಪತಿ ಬೇರೆ ಯುವತಿಯರ ಜೊತೆಗಿರುವ ಖಾಸಗಿ ವಿಡಿಯೋ ನೋಡಿದ ಪತ್ನಿ ಸಿಯೆಲೋ ತಾಳ್ಮೆ ತೆಗೆದುಕೊಂಡು ಪತಿ ಜೊತೆ ಚರ್ಚಿಸಿದ್ದಾರೆ. ಈ ಘಟನೆ ನನಗೆ ಆಘಾತ ತಂದಿದೆ. ಆದರೆ ಈ ಕಠಿಣ ಪರಿಸ್ಥಿತಿಯಲ್ಲಿ ನಾನು ಪತಿಯ ಬೆಂಬಲಕ್ಕೆ ನಿಲ್ಲುತ್ತೇನೆ. ಅಸಹಾಯಕಳಾಗಿ ಅಥವಾ ಹಣಕಾಸಿನ ಕಾರಣಕ್ಕಾಗಿ ನಾನು ಪತಿಯ ಬೆಂಬಲಕ್ಕೆ ನಿಂತಿಲ್ಲ. ನನ್ನ ಮಕ್ಕಳ ಭವಿಷ್ಯದ ದೃಷ್ಟಿಯಿಂದ ನಾನು ಪತಿಯ ಬೆಂಬಲಕ್ಕೆ ನಿಂತಿದ್ದೇನೆ. ನನ್ನ ಕಟುಂಬದ ದೃಷ್ಟಿಯಿಂದ ಈ ನಿರ್ಧಾರ ಅನಿವಾರ್ಯ ಎಂದು ಸಿಯೋಲೋ ಹೇಳಿದ್ದಾರೆ.
ಘಟನೆ ಮರೆಯಲು ಯತ್ನಿಸುತ್ತಿದ್ದೇನೆ
ಘಟನೆ ಕುರಿತು ಮಾತನಾಡಿರುವ ನಟನ ಪತ್ನಿ, ಇದು ಅತ್ಯಂತ ಕೆಟ್ಟ ಘಟನೆ. ಈ ಘಟನೆಯನ್ನು ನಾನು ಮರೆಯಲು ಪ್ರಯತ್ನಿಸುತ್ತೇನೆ. ನೋವು ಮಾತ್ರವಲ್ಲ, ಆಘಾತವೂ ಆಗಿದೆ. ಯಾವ ಪತ್ನಿಯೂ ಈ ರೀತಿಯ ಘಟನೆಗಳನ್ನು ಸಹಿಸಿಕೊಳ್ಳುವುದಿಲ್ಲ. ನಾನು ಇದಕ್ಕೆ ಹೊರತಲ್ಲ. ಆದರೆ ಮಕ್ಕಳು, ಕುಟುಂಬಕ್ಕಾಗಿ ಕಹಿ ಕ್ಷಣಗಳನ್ನು ಮರೆಯಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ. ಇದೇ ವೇಳೆ ಅಭಿಮಾನಿಗಳಲ್ಲಿ ಸಿಯೋಲೋ ಮನವಿ ಮಾಡಿಕೊಂಡಿದ್ದಾರೆ.ಇದೊಂದು ಕೆಟ್ಟ ಘಳಿಗೆ, ಇಷ್ಟು ದಿನ ನಮಗೆ ಬೆಂಬಲ ನೀಡಿದ್ದೀರಿ. ಮುಂದೆಯೂ ಬೆಂಬಲ ನೀಡಬೇಕು. ತಪ್ಪನ್ನು ಸರಿಪಡಿಸಿಕೊಂಡು ನಿಕ್ಕೋ ಮುಂದೆ ಸಾಗುತ್ತಾರೆ ಎಂಬ ವಿಶ್ವಾಸವಿದೆ ಎಂದು ಸಿಯೋಲೋ ಹೇಳಿದ್ದಾರೆ.