Bigg Boss ಇತಿಹಾಸದಲ್ಲೇ ದಾಖಲೆ ಬರೆದ ಲವರ್​ ಬಾಯ್​ ಸೂರಜ್​ ಸಿಂಗ್! ಇದೀಗ ಬಯಲು

Bigg Boss ಇತಿಹಾಸದಲ್ಲೇ ದಾಖಲೆ ಬರೆದ ಲವರ್​ ಬಾಯ್​ ಸೂರಜ್​ ಸಿಂಗ್! ಇದೀಗ ಬಯಲು

Bigg Boss ಇತಿಹಾಸದಲ್ಲೇ ದಾಖಲೆ ಬರೆದ ಲವರ್​ ಬಾಯ್​ ಸೂರಜ್​ ಸಿಂಗ್! ಇದೀಗ ಬಯಲು

ಬಿಗ್​ಬಾಸ್​ 12ರಲ್ಲಿ ಸ್ಪರ್ಧಿಸಿದ್ದ ಸಾಫ್ಟ್​ವೇರ್​ ಎಂಜಿನಿಯರ್​ ಸೂರಜ್​ ಸಿಂಗ್​, ಮನೆಯಿಂದ ಹೊರಬಂದ ನಂತರ ‘ಪವಿತ್ರ ಬಂಧನ’ ಧಾರಾವಾಹಿಯ ನಾಯಕರಾದರು.  ಸೀರಿಯಲ್ ಪ್ರಮೋಷನ್‌ಗೆ ಬಿಗ್‌ಬಾಸ್ ಮನೆಗೆ ಹೋದರು.  ಬಿಗ್‌ಬಾಸ್ ಇತಿಹಾಸದಲ್ಲಿಯೇ ದಾಖಲೆಯೊಂದನ್ನು ಸೃಷ್ಟಿಸಿದ್ದು ಅದರ ಬಗ್ಗೆ ನಟ ಹೇಳಿದ್ದೇನು?

ಬಿಗ್​ಬಾಸ್​ 12 (Bigg Boss 12)ನಲ್ಲಿ ಲವರ್​ ಬಾಯ್​ ಎಂದೇ ಫೇಮಸ್​ ಆಗಿ, ನಟಿ ರಾಶಿಕಾ ಶೆಟ್ಟಿ ಜೊತೆಗಿನ ಪ್ರೇಮ ಪ್ರಸಂಗದಿಂದ ಸಕತ್​ ಸದ್ದು ಮಾಡಿದ್ದವರು ಸೂರಜ್​ ಸಿಂಗ್​. ಇದೀಗ ಸೂರಜ್​ ಸಿಂಗ್​ ಬಿಗ್​ಬಾಸ್​​ನಲ್ಲಿ ಹೊಸ ದಾಖಲೆ ಬರೆದಿದ್ದು ಇದೀಗ ಬಯಲಾಗಿದೆ.

ಅಷ್ಟಕ್ಕೂ ಸೂರಜ್​ ಸಿಂಗ್​ ಸಾಫ್ಟ್​ವೇರ್​ ಎಂಜಿನಿಯರ್​ ಆದವರು. ಅವರಿಗೆ ಅರಿವಿಲ್ಲದೇ ಅದೃಷ್ಟ ಒಲಿದಿತ್ತು. ಬಿಗ್​ಬಾಸ್​​ಗೆ ಅರಿವಿಲ್ಲದೇ ಕಾಲ್​ ಬಂದಿತ್ತು. ಅದು ಕೂಡ ಅಚಾನಕ್​ ಆಗಿ ಬಂದಿದ್ದು ಅವರಿಗೇ ಅಚ್ಚರಿ ಉಂಟು ಮಾಡಿತ್ತಂತೆ.

ಅದೃಷ್ಟ ಅಂದರೆ ಹಾಗೆಯೇ. ಒಂದರ ಹಿಂದೆ ಒಂದು ಬಂದುಬಿಡುತ್ತದೆ ಎನ್ನುವುದಕ್ಕೆ ಸೂರಜ್​ ಅವರೇ ಸಾಕ್ಷಿ. ನಟನೆಯ ಗಂಧಗಾಳಿಯೂ ಇಲ್ಲದ ಸೂರಜ್​ ಅವರಿಗೆ ಬಿಗ್​ಬಾಸ್​ನಿಂದ ಹೊರಬರುತ್ತಿದ್ದಂತೆಯೇ ಸೀರಿಯಲ್​​ಗೆ ಆಫರ್​ ಬಂತು. ನಟನೆಯೇ ಬರುವುದಿಲ್ಲ, ಏನು ಆ್ಯಕ್ಟ್​ ಮಾಡುವುದು ಎಂದು ಕೇಳಿದರೂ, ಅದು ತಾನಾಗಿಯೇ ಬರುತ್ತದೆ, ನಿಮ್ಮಲ್ಲಿ ಆ ಕೆಪ್ಯಾಸಿಟಿ ಇದೆ ಎಂದು ಕಲರ್ಸ್ ಕನ್ನಡ ವಾಹಿನಿಯ ಪವಿತ್ರ ಬಂಧನ (Pavitra Bandhana) ಧಾರಾವಾಹಿ ನಾಯಕನೇ ಆದರು.

ಇದೊಂದು ಕನಸು ಎನ್ನಿಸುತ್ತಿದೆ. ಬಿಗ್​ಬಾಸ್​ಗೆ ಹೋಗಿದ್ದೇ ಕನಸು ಎಂದುಕೊಂಡರೆ, ದಿಢೀರನೆ, ಹೊರಕ್ಕೆ ಬರುತ್ತಿದ್ದಂತೆಯೇ ಸೀರಿಯಲ್​ನಲ್ಲಿ ನನಗೆ ಅರಿವಿಲ್ಲದೇ ಅವಕಾಶ ಸಿಕ್ಕಿತು. ಇನ್ನೂ ಅದು ನಿಜನೋ ಸುಳ್ಳೋ ಎಂದು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು kannada.mojo360ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇದೇ ವೇಳೆ ತಮಗೆ ಅರಿವಿಲ್ಲದೇ ಬಿಗ್​ಬಾಸ್​​ ಇತಿಹಾಸದಲ್ಲಿ ಮೊದಲ ಬಾರಿಗೆ ದಾಖಲೆ ಸೃಷ್ಟಿಯಾಗಿರುವ ಬಗ್ಗೆಯೂ ಹೇಳಿದ್ದಾರೆ. ಅದೇನೆಂದರೆ, ಬಿಗ್​ಬಾಸ್​ನಿಂದ ಹೊರಕ್ಕೆ ಬರುತ್ತಿದ್ದಂತೆಯೇ, ಮತ್ತೆ ಬಿಗ್​ಬಾಸ್ ಮನೆಗೆ ಹೋಗಿದ್ದರು ಸೂರಜ್​. ಅದಕ್ಕೆ ಕಾರಣ, ಅವರು ನಟಿಸುತ್ತಿರುವ ಸೀರಿಯಲ್​ ಪ್ರಮೋಷನ್​ಗೆ.

ಹೀಗೆ ತಮ್ಮದೇ ಸೀರಿಯಲ್​ ಪ್ರಮೋಷನ್​ಗೆ ಬಿಗ್​ಬಾಸ್​ ಸ್ಪರ್ಧಿಯೊಬ್ಬರು ಹೊರಕ್ಕೆ ಹೋಗಿ ಮತ್ತೆ ಒಳಕ್ಕೆ ಬಂದಿರೋದು ಇದುವರೆಗೂ ನಡೆದಿಲ್ಲ. ಇದೇ ಮೊದಲು ಎಂದರು ಎಂದ ಸೂರಜ್​, ಈ ಮೂಲಕ ದಾಖಲೆ ಬರೆದಿರುವುದಾಗಿ ಹೇಳಿದರು.

Source link

Leave a Reply

Your email address will not be published. Required fields are marked *