
ಚಿಕ್ಕಮಗಳೂರು, (ಮಾರ್ಚ್ 14): ತಂದೆ ತಾಯಿಯರ ಅಂತಿಮ ಸಂಸ್ಕಾರವನ್ನು ಗಂಡು ಮಕ್ಕಳು ಮಾಡುವುದು ಸಾಮಾನ್ಯ. ತಂದೆಯ ಚಿತೆಗೆ ಮೊದಲು ಆತನ ಹಿರಿಯ ಮಗನೇ ಅಗ್ನಿ ಸ್ಪರ್ಶ ಮಾಡಬೇಕೆಂದು ಹಿಂದೂ ಸಂಪ್ರದಾಯದಲ್ಲಿ ಹೇಳಲಾಗಿದೆ. ಆದರೆ, ಚಿಕ್ಕಮಗಳೂರಿನಲ್ಲಿ ಸಹೋದರಿಯರೇ ತಂದೆಯ ಅಂತಿಮ ವಿಧಿವಿಧಾನ ನೆರವೇರಿಸಿದ್ದಾರೆ. ಹೌದು…ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ವಿಶ್ವನಾಥ್ ಎಂಬವರು ಪ್ರಕಟಿಸಿದ್ದು, ಇವರ ಗಂಡು ಮಕ್ಕಳು ಇಲ್ಲ. ಹೀಗಾಗಿ ಅಂತ್ಯಕ್ರಿಯೆಯನ್ನು ಇಬ್ಬರು ಪುತ್ರಿಯರು ನೆರವೇರಿಸಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಭಾವಸಾರ ಕ್ಷತ್ರಿಯ ಸಮಾಜದಂತೆ ತಂದೆಯ ಅಂತಿಮ ವಿಧಿವಿಧಾನ ನೆರವೇರಿಸಿ ಅಗ್ನಿ ಸ್ಪರ್ಷ ಮಾಡಿದರು. ಇನ್ನು ಇವರ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಣ್ಣು ಮಕ್ಕಳ ತಂದೆಯ ಅಂತ್ಯಸಂಸ್ಕಾರವನ್ನು ತಾವೇ ನೆರವೇರಿಸುವ ಮೂಲಕ ಲಿಂಗಸಮಾನತೆಯ ಸಂದೇಶವನ್ನು ಸಾರಿದ್ದಾರೆ.