
ಹುಬ್ಬಳ್ಳಿ, ಮಾರ್ಚ್ 14: ರಾಜ್ಯದಲ್ಲಿಯೂ ಎಲ್ಲಿ ಕೂಡ ಗೃಹ ಬಳಕೆ ಸಿಲಿಂಡರ್ (ಗ್ಯಾಸ್ ಸಿಲಿಂಡರ್) ಪೂರೈಕೆಗೆ ಸಮಸ್ಯೆಯಾಗಿಲ್ಲ. ವಾಣಿಜ್ಯ ಸಿಲಿಂಡರ್ ಅಭಾವವಿದ್ದು, ಹೋಟೆಲ್ ಹೋಟೆಲ್ ದೊಡ್ಡಮಟದಲ್ಲಿ ಪರದಾಡುತ್ತಿದೆ. ಆದರೆ ಗೃಹ ಬಳಕೆ ಸಿಲಿಂಡರ್ ಬುಕ್ ಮಾಡಲು ಸರ್ವರ್ ಸಮಸ್ಯೆಯಾಗುತ್ತಿದೆ, ಸಿಲಿಂಡರ್ ಬುಕ್ ಮಾಡಲು ಗ್ರಾಹಕರು ಪರದಾಡುತ್ತಿದ್ದಾರೆ. ಇದು ಜನರ ಆತಂಕವನ್ನು ಹೆಚ್ಚಿಸುತ್ತಿದೆ. ಮುಂದೆ ತಮಗೆ ಎಲ್ಲಿ ಸಿಲಿಂಡರ್ ಸಿಗೋದಿಲ್ಲವೋ ಅನ್ನೋ ಆತಂಕದಿಂದ ಗ್ಯಾಸ್ ಏಜೆನ್ಸಿಗಳ ಮುಂದೆ ಖಾಲಿ ಸಿಲಿಂಡರ್ ತಗೆದುಕೊಂಡು ಬರ್ತಿದ್ದು, ಹೊಸ ಸಿಲಿಂಡರ್ ಗಾಗಿ ಬೇಡಿಕೆ ಇಟ್ಟಿದ್ದಾರೆ. ಇದೇ ಕಾರಣಕ್ಕೆ ಇಂದು ಹುಬ್ಬಳ್ಳಿಯಲ್ಲಿ ಗ್ಯಾಸ್ ಏಜೆನ್ಸಿಗೆ ಮುತ್ತಿಗೆ ಹಾಕಿದರು. ಅವರಿಗೆ ಸಿಲಿಂಡರ್ ಬೇಕು ಅಂತ ಏಜನ್ಸಿ ಸಿಬ್ಬಂದಿ ವಿರುದ್ಧ ವಾಗ್ವಾದ ಮಾಡಲಾಗಿದೆ.
ಸಿಬ್ಬಂದಿ ಹರಸಾಹಸ
ಹುಬ್ಬಳ್ಳಿ ನಗರದ ಕಾರವಾರ ರಸ್ತೆಯಲ್ಲಿರುವ ಇಂಡೇನ್ ಗ್ಯಾಸ್ ಏಜೆನ್ಸಿ ಮುಂದೆ ಇಂದು ಮುಂಜಾನೆ ಬಾಗಿಲು ತಗೆಯುವ ಮೊದಲೇ ಅನೇಕರು ಏಜೆನ್ಸಿ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದರು. ತಾವು ಅಷ್ಟೇ ಅಲ್ಲದೆ ಸಿಲಿಂಡರ್ಗಳನ್ನು ಕೂಡ ಸರದಿ ಸಾಲಿನಲ್ಲಿ ಇಟ್ಟಿದ್ದರು. ತಾವು ಖಾಲಿ ಸಿಲಿಂಡರ್ ತಂದಿದ್ದೇವೆ. ತಮಗೆ ಖಾಲಿ ಸಿಲಿಂಡರ್ ಪಡೆದು, ತುಂಬಿರೋ ಸಿಲಿಂಡರ್ ಕೊಡಿ ಅಂತ ಕೇಳುತ್ತಿದ್ದರು. ಆದರೆ ನೀವು ಸಿಲಿಂಡರ್ ಬುಕ್ ಮಾಡಬೇಕು. ನಾವು ನಿಮ್ಮ ಮನೆಗೆ ಸಿಲಿಂಡರ್ ತಂದು ಕೊಡ್ತೇವೆ ಅಂತ ಏಜೆನ್ಸಿ ಸಿಬ್ಬಂದಿ ಹೇಳಿದರು. ತಮಗೆ ಸಿಲಿಂಡರ್ ಸಿಗದೇ ಇದ್ದಿದ್ದಕ್ಕೆ ಗ್ರಾಹಕರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಗ್ರಾಹಕರನ್ನು ಸಮಾಧಾನ ಮಾಡಲು ಸಿಬ್ಬಂದಿ ಹರಸಾಹಸ ಪಡಬೇಕಾಗಿದೆ.
ಇದನ್ನೂ ಓದಿ: ಗ್ಯಾಸ್ ಅಭಾವದ ಮಧ್ಯೆ ಮಂಗಳೂರು ಹೋಟೆಲ್ ವೊಂದರಿಂದ ಭರ್ಜರಿ ಆಫರ್: ಷರತ್ತು ಅನ್ವಯ
ಹುಬ್ಬಳ್ಳಿಯಲ್ಲಿ ವಾಣಿಜ್ಯ ಸಿಲಿಂಡರ್ ಸಿಗದೇ ಹೋಟೆಲ್ ಹೋಟೆಲ್ ಕಂಗಾಲಾಗಿದ್ದಾರೆ. ಆದರೆ ಎಲ್ಲಿಯೂ ಕೂಡ ಗೃಹ ಬಳಕೆ ಸಿಲಿಂಡರ್ ಸಮಸ್ಯೆಯಾಗಿಲ್ಲ. ಸಿಲಿಂಡರ್ ಬುಕ್ ಆದವರ ಮನೆಗೆ ಸಿಲಿಂಡರ್ ಡೆಲಿವರಿ ಆಗುತ್ತಿದೆ. ಆದರೆ ಕಳೆದ ಎರಡ್ಮೂರು ದಿನಗಳಿಂದ ಸಿಲಿಂಡರ್ ಬುಕ್‌ಗೆ ಹೆಚ್ಚಿನ ಜನರು ಮುಂದಾಗಿದ್ದಾರೆ ಬುಕ್ಕಿಂಗ್ ಸರ್ವರ್ ಡೌನ್ ಆಗಿದೆ. ಹೀಗಾಗಿ ಹಗಲು ಹೊತ್ತಿನಲ್ಲಿ ಬುಕ್ ಮಾಡಲು ಮುಂದಾದವರಿಗೆ ಶಾಕ್ ಆಗ್ತಿದ್ದು, ಸಿಲಿಂಡರ್ ಬುಕ್ ಆಗುತ್ತಿಲ್ಲ. ಇದು ಜನರ ಆತಂಕವನ್ನು ಹೆಚ್ಚಿಸುತ್ತಿದೆ. ಹೀಗಾಗಿ ಗ್ಯಾಸ್ ಏಜೆನ್ಸಿಗಳ ಅಂಗಡಿಗಳಿಗೆ ತಮ್ಮ ಖಾಲಿ ಸಿಲಿಂಡರ್ ಸಮೇತ ಬರ್ತಿರೋ ಜನರು, ತಮಗೆ ಸಿಲಿಂಡರ್ ಕೊಡಿ ಅಂತ ಪಟ್ಟು ಹಿಡಿಯುತ್ತಿದ್ದಾರೆ. ಆದರೆ ಬುಕ್ ಮಾಡಿದವರಿಗೆ ಮಾತ್ರ ಸಿಲಿಂಡರ್ ಕೊಡ್ತೇವೆ ಅಂತ ಸಿಬ್ಬಂದಿ ಹೇಳ್ತಿದ್ದಾರೆ. ಇದು ಗ್ರಾಹಕರು ಮತ್ತು ಸಿಬ್ಬಂದಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ಮಿಸ್ ಕಾಲ್ ಕೊಟ್ಟರು ಸಿಲಿಂಡರ್ ಬುಕ್ ಆಗ್ತಿಲ್ಲ. ಮತ್ತೊಂದೆಡೆ ವಾಟ್ಸಪ್, ಅಮೆಜಾನ್ ನಿಂದ ಕೂಡ ಸಿಲಿಂಡರ್ ಬುಕ್ ಆಗುತ್ತಿಲ್ಲ. ಇದೀಗ ಹಬ್ಬ ಬಂದಿದೆ. ತಮಗೆ ಗ್ಯಾಸ್ ಸಿಲಿಂಡರ್ ಅಂತ ಗ್ರಾಹಕರು ಪಟ್ಟು ಹಿಡದಿದ್ದರೆ, ಗ್ಯಾಸ್ ಏಜೆನ್ಸಿ ಸಿಬ್ಬಂದಿ ಕೇಳಿದರೆ ಸಿಲಿಂಡರ್ ಅಭಾವವಿಲ್ಲ. ಬುಕ್ ಮಾಡಿದ ಎಲ್ಲರಿಗೂ ಸಿಲಿಂಡರ್ ನೀಡಿದ್ದೇವೆ. ಆದರೆ ಸರ್ವರ್ ಡೌನ್ ನಿಂದ ಸಿಲಿಂಡರ್ ಬುಕ್ ಆಗೋದು ವಿಳಂಬವಾಗುತ್ತಿದೆ. ಹೀಗಾಗಿ ಜನರು ಆತಂಕಕ್ಕೊಳಗಾಗಿದ್ದಾರೆ ಅಂತ ಗ್ಯಾಸ್ ಏಜೆನ್ಸಿ ಸಿಬ್ಬಂದಿ ಹೇಳಿದ್ದಾರೆ. ಆದರೆ ಜನರ ಆಕ್ರೋಶ ಹೆಚ್ಚಾಗುತ್ತಿದೆ, ಏಜೆನ್ಸಿಯವರು ಜನರಿಂದ ಸ್ಥಳದಲ್ಲಿಯೇ ಹಣ ಪಡೆದು, ಸಿಲಿಂಡರ್ ಕೊಟ್ಟು ಕಳುಹಿಸಿದ್ದಾರೆ.
ಇದನ್ನೂ ಓದಿ: ಗ್ಯಾಸ್ ಸಿಲಿಂಡರ್ ಇಲ್ಲದಿದ್ದರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಹೊಟ್ಟೆ ತುಂಬ ಪ್ರಸಾದ
ಸದ್ಯ ಗೃಹ ಬಳಕೆ ಸಿಲಿಂಡರ್‌ಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಸರ್ವರ್ ಡೌನ್‌ನಿಂದ ಬುಕ್ ಆಗದೇ ಇರೋದರಿಂದ ಗ್ರಾಹಕರು ಮತ್ತು ಏಜೆನ್ಸಿ ಸಿಬ್ಬಂದಿ ನಡುವೆ ವಾಗ್ವಾದಗಳು ಹೆಚ್ಚಾಗುತ್ತಿವೆ. ಹೀಗಾಗಿ ಸಿಲಿಂಡರ್ ಬುಕ್ ಮಾಡಲು ಆಗುತ್ತಿರುವ ಸರ್ವರ್ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.