
ಅಭಿಮಾನಿಗಳು ತಮಗೆ ಇಷ್ಟವಾದ ಸಿನಿಮಾ ಹೀರೋಗಳು, ರಾಜಕಾರಣಿಗಳಿಗೆ ಮಾತ್ರವಲ್ಲ, ಕ್ರಿಕೆಟಿಗರಿಗೂ ಅಡ್ಡಹೆಸರು ಇಟ್ಟು ಕರೆಯುತ್ತಾರೆ. ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾರನ್ನು ‘ಹಿಟ್ ಮ್ಯಾನ್’, ವಿರಾಟ್ ಕೊಹ್ಲಿಯನ್ನು ‘ರನ್ ಮೆಷಿನ್’, ಎಂ.ಎಸ್. ಧೋನಿಯನ್ನು ‘ಮಿಸ್ಟರ್ ಕೂಲ್’ ಅಥವಾ ‘ತಲಾ’ ಅಂತ ಕರೆಯುತ್ತಾರೆ. ಹೀಗೆ ಹಲವು ಕ್ರಿಕೆಟಿಗರಿಗೆ ಅವರ ಆಟದ ವೈಖರಿ ನೋಡಿ ಅಡ್ಡಹೆಸರು ಬಂದಿದೆ. ಆದರೆ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರ ‘ಬಾಪು’ ಅಡ್ಡಹೆಸರಿನ ಹಿಂದೆ ಬೇರೆಯೇ ಕಥೆ ಇದೆ.