
ಮಾಳವಿಕಾ ಈಗ ಮಲಯಾಳಂ ಮಾತ್ರವಲ್ಲದೆ, ತಮಿಳು, ತೆಲುಗಿನಲ್ಲೂ ಸಖತ್ ಬ್ಯುಸಿ ಆಗಿದ್ದಾರೆ. ಸತ್ಯನ್ ನಿರ್ದೇಶನದ ‘ಹೃದಯಪೂರ್ವಂ’ ಚಿತ್ರದಲ್ಲಿ ಮೋಹನ್‌ಲಾಲ್ ಜೊತೆಗಿನ ಇವರ ನಟನೆ ಗಮನ ಸೆಳೆದಿತ್ತು.
ಸಿನಿಮಾಟೋಗ್ರಾಫರ್ ಅಳಗಪ್ಪನ್ ಮೊದಲ ಬಾರಿಗೆ ಡೈರೆಕ್ಟ್ ಮಾಡಿದ ‘ಪಟ್ಟಂ ಪೋಲೆ’ ಚಿತ್ರದ ಮೂಲಕ ದುಲ್ಕರ್ ಸಲ್ಮಾನ್ ಜೊತೆ ನಾಯಕಿಯಾಗಿ ಎಂಟ್ರಿ ಕೊಟ್ಟವರೇ ಮಾಳವಿಕಾ ಮೋಹನನ್. ಇವರು ಖ್ಯಾತ ಸಿನಿಮಾಟೋಗ್ರಾಫರ್ ಕೆ.ಯು. ಮೋಹನನ್ ಅವರ ಮಗಳು. ಮಾಳವಿಕಾ ಈಗ ಮಲಯಾಳಂ ಮಾತ್ರವಲ್ಲದೆ, ತಮಿಳು, ತೆಲುಗಿನಲ್ಲೂ ಸಖತ್ ಬ್ಯುಸಿ ಆಗಿದ್ದಾರೆ. ಸತ್ಯನ್ ನಿರ್ದೇಶನದ ‘ಹೃದಯಪೂರ್ವಂ’ ಚಿತ್ರದಲ್ಲಿ ಮೋಹನ್‌ಲಾಲ್ ಜೊತೆಗಿನ ಇವರ ನಟನೆ ಗಮನ ಸೆಳೆದಿತ್ತು. ಇನ್ನು, ಮಾರುತಿ ನಿರ್ದೇಶನದ ‘ರಾಜಾ ಸಾಬ್’ ಚಿತ್ರದಲ್ಲಿ ಪ್ರಭಾಸ್ಗೆ ನಾಯಕಿಯಾಗಿ ಮಾಳವಿಕಾ ನಟಿಸುತ್ತಿದ್ದಾರೆ.
ಆದರೆ, ತನ್ನ ತಂದೆಯ ಸಿನಿಮಾ ಸಂಪರ್ಕ ತನ್ನ ಕೆರಿಯರ್ ಮೇಲೆ ಯಾವುದೇ ಪ್ರಭಾವ ಬೀರಿಲ್ಲ ಅಂತ ಮಾಳವಿಕಾ ಸ್ಪಷ್ಟಪಡಿಸಿದ್ದಾರೆ. ಜನರು ನಾನು ಚಿಕ್ಕಂದಿನಿಂದಲೇ ಸಿನಿಮಾ ಇಂಡಸ್ಟ್ರಿಯಲ್ಲೇ ಬೆಳೆದವಳು, ನಾನೊಬ್ಬಳು ಸ್ಟಾರ್ ಕಿಡ್ ಅಂದುಕೊಂಡಿದ್ದಾರೆ. ಆದರೆ ಅದು ನಿಜವಲ್ಲ ಅಂತ ಅವರು ಹೇಳಿದ್ದಾರೆ. ಅಪ್ಪ ಜೀವನೋಪಾಯಕ್ಕಾಗಿ ಸಿನಿಮಾ ಕೆಲಸ ಮಾಡುತ್ತಿದ್ದರೂ, ತಮ್ಮ ಬದುಕು ಇಂಡಸ್ಟ್ರಿಯಿಂದ ದೂರವಿತ್ತು. ತನಗೆ ಡಾಕ್ಯುಮೆಂಟರಿ ಫಿಲ್ಮ್ ಮೇಕರ್ ಆಗುವ ಆಸೆ ಇತ್ತು ಅಂತಲೂ ಮಾಳವಿಕಾ ಹೇಳಿಕೊಂಡಿದ್ದಾರೆ.
ಇಂಡಸ್ಟ್ರಿಯಿಂದ ತುಂಬಾನೇ ದೂರ ಇತ್ತು
“ನಾನು ಮೂರ್ನಾಲ್ಕು ಸಲ ಅಪ್ಪನ ಶೂಟಿಂಗ್ ಸೆಟ್‌ಗೆ ಹೋಗಿರಬಹುದು ಅಷ್ಟೇ. ನಾನು ಇಂಡಸ್ಟ್ರಿ ಕಿಡ್ ಅಲ್ಲ. ಬೆಳೆದು ದೊಡ್ಡವಳಾಗುವವರೆಗೂ ನಾನು ಸಿನಿಮಾ ಕ್ಷೇತ್ರದ ಯಾರ ಜೊತೆಗೂ ಬೆರೆತಿಲ್ಲ. ನನ್ನ ಅಪ್ಪ ಕೆಲಸ ಮಾಡುತ್ತಿದ್ದರು, ಆದರೆ ನಮ್ಮ ಜೀವನ ಸಿನಿಮಾ ಇಂಡಸ್ಟ್ರಿಯಿಂದ ತುಂಬಾನೇ ದೂರ ಇತ್ತು. ನಾನು ಚಿಕ್ಕವಳಿದ್ದಾಗಿನಿಂದಲೇ ಇಂಡಸ್ಟ್ರಿ ಜೊತೆ ಕನೆಕ್ಟ್ ಆಗಿದ್ದೀನಿ ಅಂತ ಜನ ಅಂದುಕೊಂಡಿದ್ದಾರೆ.
ಆದರೆ ಸತ್ಯ ಏನೆಂದರೆ, ನಾನು ಅದರಿಂದ ಬಹಳ ದೂರದಲ್ಲಿ ಬೆಳೆದವಳು. ಅಪ್ಪ ಜೀವನಕ್ಕಾಗಿ ಕೆಲಸ ಮಾಡಿದರು, ಜೊತೆಗೆ ಒಬ್ಬ ಕಲಾವಿದನಾಗಿ ಅವರಿಗೆ ಸಿನಿಮಾಟೋಗ್ರಫಿ ಮೇಲೆ ಸಿಕ್ಕಾಪಟ್ಟೆ ಆಸಕ್ತಿ ಇತ್ತು. ಆದರೆ ನಾನು ಅದರಲ್ಲಿ ಭಾಗಿಯಾಗಿರಲಿಲ್ಲ. ಸಿನಿಮಾಟೋಗ್ರಾಫರ್ ಮಗಳಾಗಿರೋದು, ಸ್ಟಾರ್ ಕಿಡ್ ಆಗಿರೋದಕ್ಕೆ ಸಮಾನ ಅಲ್ಲ,” ಅಂತ ಮಾಳವಿಕಾ ಹೇಳಿದ್ದಾರೆ. ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ಮಾಳವಿಕಾ ಈ ಬಗ್ಗೆ ಮಾತನಾಡಿದ್ದಾರೆ.