ಚೆನ್ನೈ ವಿಮಾನ ನಿಲ್ದಾಣದಲ್ಲಿ ನಟ ವಿಜಯ್ ಬಗ್ಗೆ ಕೇಳಿದ ಪ್ರಶ್ನೆಗೆ ನಟಿ ತ್ರಿಷಾ ನೀಡಿದ ಪ್ರತಿಕ್ರಿಯೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಜಯ್ ಹೆಸರು ಕೇಳುತ್ತಿದ್ದಂತೆ ತ್ರಿಷಾ ಮೌನವಾಗಿ ಹೊರನಡೆದಿದ್ದೇಕೆ? ಇಲ್ಲಿದೆ ವಿವರ.

ಮುಂಬೈಗೆ ತೆರಳಲು ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿದ್ದ ತ್ರಿಷಾ ಅವರನ್ನು ವರದಿಗಾರರು ಸುತ್ತುವರಿದರು. ವಿಜಯ್, ಅವರ ಇತ್ತೀಚಿನ ಸಿನಿಮಾಗಳು ಮತ್ತು ರಾಜಕೀಯದ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ, ಅವರು ಯಾವುದಕ್ಕೂ ಉತ್ತರಿಸಲಿಲ್ಲ.

ತಮಿಳಗ ವೆಟ್ರಿ ಕಳಗಂ (TVK) ಅಧ್ಯಕ್ಷ ವಿಜಯ್ ಜೊತೆ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರ ಬಗ್ಗೆ ವರದಿಗಾರರೊಬ್ಬರು ಪ್ರಶ್ನಿಸಿದರು. ಇದಕ್ಕೆ ತ್ರಿಷಾ ಯಾವುದೇ ಉತ್ತರ ನೀಡದೆ ವೇಗವಾಗಿ ಮುಂದೆ ನಡೆದರು. ಅವರ ಮುಖಭಾವ ಕೂಡ ಬದಲಾಗಿತ್ತು.

ಈ ವಿಡಿಯೋ ಈಗ ಎಕ್ಸ್ (ಟ್ವಿಟರ್) ಮತ್ತು ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ‘ವಿಜಯ್ ಬಗ್ಗೆ ಕೇಳಿದಾಗ ತ್ರಿಷಾ ಯಾಕೆ ಸುಮ್ಮನಾದರು?’ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ‘ಲಿಯೋ’ ಚಿತ್ರದ ನಂತರ ಇಬ್ಬರ ಸುತ್ತ ಹಲವು ವದಂತಿಗಳು ಹಬ್ಬಿದ್ದು, ತ್ರಿಷಾ ಅವರ ಈ ‘ಸೈಲೆಂಟ್’ ರಿಯಾಕ್ಷನ್ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ವಿಜಯ್ ಅವರ ಪತ್ನಿ ಸಂಗೀತಾ, ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿತ್ತು. ತಮ್ಮ ಪತಿಗೆ ವಿವಾಹೇತರ ಸಂಬಂಧವಿದೆ ಎಂದು ಆರೋಪಿಸಿ, ಅಗತ್ಯಬಿದ್ದರೆ ಆ ನಟಿಯ ಹೆಸರನ್ನು ಬಹಿರಂಗಪಡಿಸುವುದಾಗಿಯೂ ಅವರು ಹೇಳಿದ್ದರು.

ಚೆನ್ನೈನಲ್ಲಿ ನಡೆದ ಎಜಿಎಸ್ ಗ್ರೂಪ್‌ನ ಮಾಲೀಕ ಕಲ್ಪಾತಿ ಎಸ್. ಸುರೇಶ್ ಅವರ ಮಗನ ಮದುವೆ ಆರತಕ್ಷತೆಯಲ್ಲಿ, ನಟ ವಿಜಯ್ ಮತ್ತು ನಟಿ ತ್ರಿಷಾ ಒಂದೇ ಬಣ್ಣದ ಉಡುಗೆ ಧರಿಸಿ, ಒಂದೇ ಕಾರಿನಲ್ಲಿ ಬಂದಿದ್ದು ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಈ ಘಟನೆಯನ್ನು ವಿಜಯ್ ಬೆಂಬಲಿಗರೂ ಸೇರಿದಂತೆ ಹಲವರು ಟೀಕಿಸಿದ್ದರು.

Source link
ವಿಜಯ್ ಬಗ್ಗೆ ಕೇಳಿದ್ದೇ ತಡ ತ್ರಿಷಾ ಹೀಗಾ ಹೇಳೋದು! ಏರ್‌ಪೋರ್ಟ್‌ನಲ್ಲಿ ಸೈಲೆಂಟ್ ಆಗಿ ಎಸ್ಕೇಪ್