Woman Drive ಮಹಿಳೆಯಿಂದ ಟಾಟಾ ಸಿಯೆರಾ ಟೆಸ್ಟ್ ಡ್ರೈವ್, 3 ವಾಹನಕ್ಕೆ ಡಿಕ್ಕಿಯಾಗಿ 20 ಅಡಿ ಗುಂಡಿಗೆ ಬಿದ್ದ ಕಾರು | Mumbai Woman Test Drive Goes Wrong Tata Tata Sierra Plunges Into Pit After Hit Vehcile Mumbai

Woman Drive ಮಹಿಳೆಯಿಂದ ಟಾಟಾ ಸಿಯೆರಾ ಟೆಸ್ಟ್ ಡ್ರೈವ್, 3 ವಾಹನಕ್ಕೆ ಡಿಕ್ಕಿಯಾಗಿ 20 ಅಡಿ ಗುಂಡಿಗೆ ಬಿದ್ದ ಕಾರು | Mumbai Woman Test Drive Goes Wrong Tata Tata Sierra Plunges Into Pit After Hit Vehcile Mumbai



Woman Drive ಮಹಿಳೆಯಿಂದ ಟಾಟಾ ಸಿಯೆರಾ ಟೆಸ್ಟ್ ಡ್ರೈವ್, 3 ವಾಹನಕ್ಕೆ ಡಿಕ್ಕಿಯಾಗಿ 20 ಅಡಿ ಗುಂಡಿಗೆ ಬಿದ್ದ ಕಾರು | Mumbai Woman Test Drive Goes Wrong Tata Tata Sierra Plunges Into Pit After Hit Vehcile Mumbai

ಮಹಿಳೆಯಿಂದ ಟಾಟಾ ಸಿಯೆರಾ ಟೆಸ್ಟ್ ಡ್ರೈವ್, 3 ವಾಹನಕ್ಕೆ ಡಿಕ್ಕಿಯಾಗಿ 20 ಅಡಿ ಗುಂಡಿಗೆ ಬಿದ್ದ ಕಾರು, ಡ್ರೈವ್ ಟೆಸ್ಟ್ ಮಾಡಲು ಹೋಗಿ ಕಾರಿನ 5 ಸ್ಟಾರ್ ಸೇಫ್ಟಿಯನ್ನೇ ಮಹಿಳೆ ಟೆಸ್ಟ್ ಮಾಡಿದ್ದಾರೆ. ಮಂದೇನಾಯಿತು?

ಮುಂಬೈ (ಮಾ.14) ಟಾಟಾ ಕಾರುಗಳು ಗರಿಷ್ಠ ಸುರಕ್ಷತೆ ನೀಡುತ್ತದೆ ಎಂಬುದು ಈಗಾಗಲೇ ಸಾಬೀತಾಗಿದೆ. ಹೀಗಾಗಿ ಟಾಟಾ ಕಾರುಗಳಿಗೆ ಬಾರಿ ಬೇಡಿಕೆ ಇದೆ. ಇತ್ತೀಚೆಗೆ ಬಿಡುಗಡೆಯಾದ ಟಾಟಾ ಸಿಯೆರಾ ಕಾರು ಹಲವರನ್ನು ಆಕರ್ಷಿಸುತ್ತಿದೆ. ಹೀಗೆ ಮಹಿಳೆಯೊಬ್ಬರು ಟಾಟಾ ಸಿಯೆರಾ ಕಾರು ಖರೀದಿಸಲು ಶೋರೂಂಗೆ ತೆರಳಿದ್ದಾರೆ. ಕಾರು ಟೆಸ್ಟ್ ಡ್ರೈವ್ ಮಾಡಲು ಮುಂದಾಗಿದ್ದಾರೆ. ಇದರಂತೆ ಟಾಟಾ ಸಿಯೆರಾ ಕಾರು ಪಡೆದು ರಸ್ತೆಯಲ್ಲಿ ಡ್ರೈವ್ ಮಾಡಲು ಮುಂದಾಗಿದ್ದಾರೆ. ಆದರೆ ಕಾರು ನಿಯಂತ್ರಣ ತಪ್ಪಿದೆ. ಅತೀ ವೇಗವಾಗಿ ಸಾಗಿ ಆಟೋ, ದ್ವಿಚಕ್ರ ವಾಹನ ಸೇರಿದಂತೆ ಮೂರು ವಾಹನಗಳಿಗೆ ಡಿಕ್ಕಿಯಾಗಿ, ಬ್ಯಾರಿಕೇಡ್ ಮುರಿದು ಕಾಮಗಾರಿಯ 20 ಅಡಿ ಆಳದ ಗುಂಡಿಗೆ ಬಿದ್ದಿದೆ. ಆದರೆ ಮಹಿಳೆ, ಮಹಿಳೆಯ ಸಂಬಂಧಿಗಳು ಹಾಗೂ ಶೋ ರೂಂ ಸಿಬ್ಬಂದಿ ಸಣ್ಣ ಪುಟ್ಟಗಾಯಗೊಂಡಿದ್ದಾರೆ. ಆದರೆ ಪ್ರಾಣಾಪಾಯದಿಂಂದ ಪಾರಾದ ಘಟನೆ ಮುಂಬೈನಲ್ಲಿ ನಡೆದಿದೆ.

ಪಶ್ಚಿಮ ಥಾಣೆಯ ಪಂಚಕಡಿ ಬಳಿ ಈ ಘಟನೆ ನಡೆದಿದೆ. ಮಹಿಳೆ ತನ್ನ ಸಂಬಂಧಿಕರೊಂದಿಗೆ ಕಾರು ಖರೀದಿಗೆ ಆಗಮಿಸಿದ್ದಾರೆ. ಈ ವೇಳೆ ಟೆಸ್ಟ್ ಡ್ರೈವ್ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಸಂಬಂಧಿಕರನ್ನು ಕೂರಿಸಿಕೊಂಡು ಟೆಸ್ಟ್ ಡ್ರೈವ್‌ಗೆ ತೆರಳಿದ್ದಾರೆ. ಇದೇ ವೇಳೆ ಶೋ ರೂಂ ಸಿಬ್ಬಂದಿಯೂ ಕಾರಿನಲ್ಲಿ ಕುಳಿತಿದ್ದಾರೆ. ಕಾರಿನ ಬಗ್ಗೆ ಮಾಹಿತಿ ನೀಡಲು ಆರಂಭಿಸದ ಬೆನ್ನಲ್ಲೇ ಮಹಿಳೆ ಕಾರು ಸ್ಟಾರ್ಟ್ ಮಾಡಿ ಮೂವ್ ಮಾಡಿದ್ದಾರೆ.ರಸ್ತೆಗೆ ಇಳಿದ ಬೆನ್ನಲ್ಲೇ ಕಾರು ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದೆ. ಜನನಿಬಿಡಿ ರಸ್ತೆಯಲ್ಲಿ ಕಾರು ಅತೀವೇಗವಾಗಿ ಸಾಗಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿಯಾಗಿದೆ.

ಎಲ್ಲಾ ತಡೆಗೋಡೆ ಮುರಿದ ಟಾಟಾ

ಕಾಮಗಾರಿ ಸ್ಥಳದ ಕಾರಣ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಇಷ್ಟೇ ಅಲ್ಲ ತಾತ್ಕಾಲಿಕ ತಡೆಗೋಡೆಗಳನ್ನು ನಿರ್ಮಾಣ ಮಾಡಲಾಗಿದೆ. ಈ ಮಹಿಳೆಯ ಅತೀ ವೇಗದಲ್ಲಿ ಕಾರು ಚಲಾಯಿಸಿದ್ದಾರೆ. ಹೀಗಾಗಿ ಬ್ಯಾರಿಕೇಡ್, ತಡೆಗೋಡೆ ಎಲ್ಲಾ ಮುರಿದು ಕಾಮಗಾರಿಯ 20 ಅಡಿ ಆಳದ ಗುಂಡಿಗೆ ಬಿದ್ದಿದೆ. ಅಪಘಾತವಾಗುತ್ತಿದ್ದಂತೆ ಕಾರಿನ ಏರ್‌ಬ್ಯಾಗ್ ತೆರೆದುಕೊಂಡಿದೆ. ಇನ್ನು ಟಾಟಾ ಕಾರು 5 ಸ್ಟಾರ್ ಸುರಕ್ಷತೆ ಕಾರಣ ನಜ್ಜು ನುಜ್ಜಾಗಿಲ್ಲ. ಇತ್ತ ಅಗ್ನಿಶಾಮಕ ದಳ, ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರಿನಲ್ಲಿದ್ದ ಮೂವರನ್ನು ರಕ್ಷಿಸಿ ಆಸ್ಪತ್ರೆ ದಾಖಲಿಸಿದ್ದಾರೆ.

ಮೂರು ವಾಹನ ಜಖಂ

5 ಸ್ಟಾರ್ ಸೇಫ್ಟಿ ಕಾರು ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟೆಸ್ಟ್ ಡ್ರೈವ್ ಮಾಡಲು ಹೋಗಿ ಮೂವರು ಗಾಯಗೊಂಡಿದ್ದಾರೆ. ಎರಡು ದ್ವಿಚಕ್ರ ವಾಹನ ಹಾಗೂ ಒಂದು ಆಟೋ ರಿಕ್ಷಾ ಸಂಪೂರ್ಣ ನಜ್ಜು ಗುಜ್ಜಾಗಿದೆ. ಇತ್ತ ಪೊಲೀಸರು ಪ್ರರಕರಣ ದಾಖಲಿಸಿಕೊಂಡಿದ್ದಾರೆ.

ಟಾಟಾ ಸಿಯೆರಾ ಕಾರಿನ ಬೆಲೆ 11.49 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. 60hp ಪವರ್ ಹಾಗೂ 255Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ. 1.5 ಲೀಟರ್ ಎಂಜಿನ್, 4 ಸಿಲಿಂಡರ್ ಹೊಂದಿದೆ. ಮ್ಯಾನ್ಯುಯೆಲ್ ಹಾಗೂ ಆಟೋ ಟ್ರಾನ್ಸ್‌ಮಿಶನ್ ಆಯ್ಕೆ ಲಭ್ಯವಿದೆ.ಅತ್ಯಂತ ಆಕರ್ಷಕ ಎಸ್‌ಯುವಿ ಕಾರಾಗಿದ್ದು, ದಾಖಲೆಯ ಬುಕಿಂಗ್ ಪಡೆದಿದೆ.



Source link

Leave a Reply

Your email address will not be published. Required fields are marked *