
ನೂತನ ನಾಯಕ ಮೊಜ್ತಬಾ ಖಮೇನಿ ನಿಜವಾಗಿಯೂ ಇದ್ದಾರ? ಎಐ ಸೃಷ್ಟಿಯೇ, ಇರಾನ್‌ಲ್ಲಿ ಭುಗಿಲೆದ್ದ ಕೂಗು, ಇರಾನ್‌ನಲ್ಲಿ ಈ ಕುರಿತು ಚರ್ಚೆ, ವ್ಯಂಗ್ಯ, ಹಾಸ್ಯಗಳು ನಡೆಯುತ್ತಿದೆ. ಮೊಜ್ತಬಾ ಖಮೇನಿ ಹತ್ಯೆಯಾದ್ರಾ?
ಟೆಹ್ರಾನ್ (ಮಾ.14) ಇರಾನ್ ಹಾಗೂ ಇಸ್ರೇಲ್ ಯುದ್ಧ 15 ದಿನ ಪೂರೈಸಿದೆ. ಅತ್ತ ಇಸ್ರೇಲ್ ಹಾಗೂ ಅಮೆರಿಕ ಬಿಡುತ್ತಿಲ್ಲ, ಇತ್ತ ಇರಾನ್ ಮಣಿಯುತ್ತಿಲ್ಲ. ದಾಳಿ ನಿರಂತರವಾಗಿ ಸಾಗಿದೆ. ಆರಂಭಿಕ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲ ಅಲಿ ಖಮೇನಿ ಹತ್ಯೆ ಬಳಿಕ ಇರಾನ್ ನೂತನ ನಾಯಕನಾಗಿ ಅಲಿ ಖಮೇನಿ ಪುತ್ರ ಮೊಜ್ತಬಾ ಖಮೇನಿಯನ್ನು ನೇಮಕ ಮಾಡಿದೆ. ಆದರೆ ಮೊಜ್ತಬಾ ಖಮೇನಿ ಇದುವರೆಗೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ, ವಿಡಿಯೋ ಸಂದೇಶವನ್ನೂ ನೀಡಿಲ್ಲ. ಮೊಜ್ತಬಾ ಖಮೇನಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಮೆರಿಕ ಹೇಳುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಇರಾನ್‌ನಲ್ಲಿ ಒಂದು ವರ್ಗ ಇದೀಗ ಮೊಜ್ತಬಾ ಖಮೇನಿ ನಿಜವಾಗಿಯೂ ಇದ್ದಾರಾ, ಅಥವಾ ಎಐ ಸೃಷ್ಟಿಸಿದ ನಾಯಕನೇ ಎಂದು ಪ್ರಶ್ನಿಸುತ್ತಿದ್ದಾರೆ.
ಪ್ರಕಟಣೆ ಮೂಲಕ ಪ್ರತ್ಯಕ್ಷ
ಮಾರ್ಚ್ 11ರಂದು ಮೊಜ್ತಬಾ ಖಮೇನಿ ಹೇಳಿಕೆ ಎಂದು ಇರಾನ್ ಸರ್ಕಾರ ಪ್ರಕಟಣೆ ಹೊರಡಿಸಿತ್ತು. ಈ ಪ್ರಕಟಣೆಯಲ್ಲಿ ಇಸ್ರೇಲ್ ಹಾಗೂ ಅಮರಿಕಾಗೆ ಎಚ್ಚರಿಕೆ ನೀಡಲಾಗಿತ್ತು. ಅಮೆರಿಕ ಮೇಲೆ ಯುದ್ಧ ಮುಂದುವರಿಯಲಿದೆ ಎಂದಿದ್ದು ಮಾತ್ರವಲ್ಲ, ಅಮೆರಿಕ ಕಣ್ಣಿಟ್ಟಿರುವ ಹೊರ್ಮುಜ್ ಜಲಸಂಧಿ ಬಂದ್ ಆಗಿರಲಿದೆ ಎಂದು ಎಚ್ಚರಿಕೆ ನೀಡಿದ ಪ್ರಕಟಣೆಯಾಗಿತ್ತು. ಈ ಪ್ರಕಟಣೆ ಹೊರತುಪಡಿಸಿದೆರೆ ಮೊಜ್ತಬಾ ಖಮೇನಿಯ ಯಾವುದೇ ಸುಳಿವಿಲ್ಲ. ಹೀಗಾಗಿಯೇ ಅನುಮಾನಗು ಹೆಚ್ಚಾಗತೊಡಗಿದೆ. ಇತ್ತ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದಂತೆ ರಹಸ್ಯ ಸ್ಥಳದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಧ್ಯತೆಗಳು ಇವೆ ಎಂದು ಕೆಲ ಮೂಲಗಳು ಹೇಳುತ್ತಿದೆ.
ಮೊಜ್ತಬಾ ಖಮೇನಿ ಕಟೌಟ್
ಇದೀಗ ಇರಾನ್‌ನಲ್ಲಿ ಮೊಜ್ತಬಾ ಖಮೇನಿ ಇದ್ದಾರಾ, ಅಥವಾ ಇರಾನ್ ಸರ್ಕಾರ ಎಐ ಮೂಲಕ ಸೃಷ್ಟಿಸಿ ಸರ್ಕಾರ ನಡೆಸುತ್ತಿದೆಯಾ ಎಂದು ಪ್ರಶ್ನಿಸಿದೆ. ಇರಾನ್ ಕಾರ್ಯಕ್ರಮ ಒಂದರಲ್ಲಿ ಮೊಜ್ತಬಾ ಖಮೇನಿಯ ಕಟೌಟ್ ಒಂದನ್ನು ಇಟ್ಟಿರುವ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಮೂಲಕ ಮೊಜ್ತಬಾ ಖಮೇನಿ ಜೀವಂತವಾಗಿರುವ ಸಾಧ್ಯತೆ ಇಲ್ಲ ಇರಾನ್‌ನಲ್ಲೇ ಕೂಗು ಶುರುವಾಗಿದೆ.
ಮೊಜ್ತಬಾ ಖಮೇನಿಯ ಎಐ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದು ಇರಾನ್ ಸರ್ಕಾರವೇ ಹರಿಬಿಟ್ಟಿದೆ ಎಂದು ಕೆಲವರು ಆರೋಪಿಸಿದ್ದಾರೆ. ಮೊಜ್ತಬಾ ಖಮೇನಿ ತಮ್ಮ ಜೊತೆಗಿದ್ದಾರೆ ಎಂದು ಬಿಂಬಿಸಲು ಈ ರೀತಿ ಮಾಡಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಲವರು ಆರೋಪಿಸಿದ್ದಾರೆ.
Scroll to load tweet…