
ನವೆಂಬರ್ 14: ಇರಾನ್-ಇಸ್ರೇಲ್ ನಡುವೆ ದಾಳಿ-ಪ್ರತಿದಾಳಿಗಳು ನಡೆಯುತ್ತಲೇ ಇವೆ. ನಿನ್ನೆ (ಮಾರ್ಚ್ 13) ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು (ಬೆಂಜಮಿನ್ ನೆತನ್ಯಾಹು) ಮಾತನಾಡುತ್ತಿರುವ ವಿಡಿಯೋವೊಂದು ಅವರು ಸುರಕ್ಷಿತವಾಗಿದ್ದಾರಾ ಎಂಬ ಅನುಮಾನ ಹುಟ್ಟುಹಾಕಿದೆ. ನೇತನ್ಯಾಹು ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ. ಹಲವು ದಿನಗಳಿಂದ ಅವರು ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಇದೀಗ ಇದ್ದಕ್ಕಿದ್ದಂತೆ ವಿಡಿಯೋ ಸಂದೇಶ ಹರಿಬಿಟ್ಟಿದ್ದು ಒಂದು ಅನುಮಾನವಾದರೆ ಆ ವಿಡಿಯೋದಲ್ಲಿ ನೇತನ್ಯಾಹು ಕೈಯಲ್ಲಿ 6 ಬೆರಳಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ವಿಡಿಯೋ ಎಐ (ಕೃತಕ ಬುದ್ಧಿಮತ್ತೆ)ಯದ್ದು ಎಂಬ ಅನುಮಾನವನ್ನು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ.
ಆ ವಿಡಿಯೋದಲ್ಲಿ ನೇತನ್ಯಾಹು ಅವರ ಒಂದು ಕೈಯಲ್ಲಿ 6 ಬೆರಳುಗಳು ಇರುವಂತೆ ಕಾಣುತ್ತಿದೆ. ಹೀಗಾಗಿ, ಇದು ಎಐನಿಂದ ಎಡಿಟ್ ಮಾಡಲಾದ ವಿಡಿಯೋ ಎಂಬ ಅನುಮಾನವನ್ನು ಹುಟ್ಟುಹಾಕಿತು. ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ನೇತನ್ಯಾಹು ಶುಕ್ರವಾರ ವಿಡಿಯೋವನ್ನು ಹಂಚಿಕೊಂಡಿದ್ದರು. ಇಸ್ರೇಲ್ ಮತ್ತು ಇರಾನ್ ಯುದ್ಧದ ಕುರಿತು ಅವರು ಹೇಳಿಕೆಗಳನ್ನು ನೀಡಿದ್ದರು. ಫೆಬ್ರವರಿ 28 ರಂದು ಸಂಘರ್ಷದ ಮೊದಲ ದಿನ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲೊ ಅಲಿ ಖಮೇನಿಯನ್ನು ಕೊಲ್ಲಲಾಯಿತು.
ನಾನು ಕೊನೆಯ ಬಾರಿ ಪರಿಶೀಲಿಸಿದಾಗ, ಮನುಷ್ಯರು ಸಾಮಾನ್ಯವಾಗಿ 6 ಬೆರಳುಗಳನ್ನು ಹೊಂದಿರುವುದಿಲ್ಲ. AI ಮಾಡುತ್ತದೆ.
ನೆಟೆನ್ಯಾಹು ಇನ್ನಿಲ್ಲವೇ? pic.twitter.com/EUkIsKGmHR
— AustraliaFirstOnly (@giga based) ಮಾರ್ಚ್ 13, 2026
ಇದನ್ನೂ ಓದಿ: ಇರಾನ್-ಇಸ್ರೇಲ್ ಯುದ್ಧ ಯಾವಾಗ ಕೊನೆಗೊಳ್ಳುತ್ತೆ? ಟ್ರಂಪ್ ಹೇಳಿದ್ದೇನು?
ನೇತನ್ಯಾಹು ಅವರ ವಿಡಿಯೋದಲ್ಲಿ ಇಸ್ರೇಲ್ ಪ್ರಧಾನಿ ಬಲಗೈಯಲ್ಲಿ 6 ಬೆರಳುಗಳನ್ನು ಹೊಂದಿರುವಂತೆ ತೋರುತ್ತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ‘ಕ್ಲಾಸಿಕ್ ಎಐ ಫಿಂಗರ್ ಗ್ಲಿಚ್’, ‘ಅವರ ಕೈಯನ್ನು ಹತ್ತಿರದಿಂದ ನೋಡಿ’ ಎಂಬಂತಹ ಕ್ಯಾಪ್ಷನ್ ಹಾಕಿರುವ ನೆಟ್ಟಿಗರು ಅದು ಎಐ ಎಡಿಟೆಡ್ ವಿಡಿಯೋ ಎಂಬ ಅನುಮಾನ ಹೊರಹಾಕಿದ್ದಾರೆ. ಇನ್ನೂ ಕೆಲವರು ಈ ಯುದ್ಧದಲ್ಲಿ ನೇತನ್ಯಾಹು ಸತ್ತಿದ್ದಾರೆ ಎಂದು ಕೂಡ ಕಮೆಂಟ್ ಹಾಕಿದ್ದಾರೆ.
ಅಥಮಲ್ ಬಮ್ಸಿಬೆತ್ ಹೀಟ್ಯೂನೈಝಮ್ ದಮಡಾಥಿ ಹಿಸ್ ಹಿಡ್ಡೀಮ್ ಹಿಬ್ರೂರಿಝ್ ಹಮರಾರ್ಚ್ಯಾ: ಪಗೀತಾ ಬಮ್ಷ್ತರ್ ಹತ್ರೂರ್, ಬಾಮ್ಪಮ್ ಸ್ಲೋಗೋಥಿಯೋ, ವ್ಹಾಬತ್ ಬಿಟಗೋನಾ ಮತ್ತು ಹಳೆಯ ಇಸ್ರಾಲ್.
ಅಂಗ್ಲೋ ಲಾ ಮಾಗ್ಝಿಝಮ್. ಅಂಗೇನೋ ಯೋಜಮೀಮ್, ಅಂಗೋನೋ ತೋಕಪಿಝಮ್ ವಾಂಗನೋ ಡೋಸಿಝಮ್ ಝಾತ್ ಬೆವೋಮ್ಮಾ.
צפו בדברים המלאים >> pic.twitter.com/hubJWVdiKQ
– ಬೆಂಜಮಿನ್ ನೆತನ್ಯಾಹು – banimין נתניהו (@netanyahu) ಮಾರ್ಚ್ 13, 2026
ಇನ್ನು ಕೆಲವರು ಇದು ಆಪ್ಟಿಕಲ್ ಭ್ರಮೆ ಎಂದು ಕಮೆಂಟ್ ಹಾಕುವ ಮೂಲಕ ನೇತನ್ಯಾಹು ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ. ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ನೇತನ್ಯಾಹು ಅವರ ಈ ವಿಡಿಯೋ ಬಗ್ಗೆ ಚರ್ಚೆಗಳು ಮುಂದುವರೆದಿವೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ