ಸಾಯಿ ಪಲ್ಲವಿಗೆ ಸಿಕ್ಕಿದೆ ಅವರ ಕನಸಿನ ಪಾತ್ರ ಮತ್ತು ನಿರ್ದೇಶಕ

ಸಾಯಿ ಪಲ್ಲವಿಗೆ ಸಿಕ್ಕಿದೆ ಅವರ ಕನಸಿನ ಪಾತ್ರ ಮತ್ತು ನಿರ್ದೇಶಕ


ಸಾಯಿ ಪಲ್ಲವಿಗೆ ಸಿಕ್ಕಿದೆ ಅವರ ಕನಸಿನ ಪಾತ್ರ ಮತ್ತು ನಿರ್ದೇಶಕ

ಸಾಯಿ ಪಲ್ಲವಿ (Sai ​​Pallavi), ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟಿ. ತಮ್ಮ ಸಮಕಾಲೀನ ಇತರ ನಟಿಯರಿಗಿಂತಲೂ ಬಹಳ ಭಿನ್ನ ನಟಿ ಸಾಯಿ ಪಲ್ಲವಿ. ತಮ್ಮ ಸಿನಿಮಾಗಳ ಆಯ್ಕೆ, ವ್ಯಕ್ತಿತ್ವ ಇತರ ಕಾರಣಗಳಿಂದಾಗಿ ಸಾಯಿ ಪಲ್ಲವಿ ಭಾರಿ ದೊಡ್ಡ ಅಭಿಮಾನಿ ವರ್ಗವನ್ನು ಹೊಂದಿದ್ದಾರೆ. ಇದೀಗ ಸಾಯಿ ಪಲ್ಲವಿ ಬಾಲಿವುಡ್ ಗೆ ಸಹ ಹಾರಿದ್ದಾರೆ. ಅಲ್ಲಿ ಎರಡು ಸಿನಿಮಾಗಳಲ್ಲಿ ನಟಿಸಿದ್ದು, ಇದೀಗ ಮೂರನೇ ಸಿನಿಮಾ ನಟನೆಯ ಅವಕಾಶವಿದೆ, ಇದು ಒಂದು ರೀತಿ ಅವರ ಡ್ರೀಮ್ ಪ್ರಾಜೆಕ್ಟ್ ಸಹ ಹೌದೆನ್ನಿಸಿದೆ.

ಭಾರತೀಯ ಚಿತ್ರರಂಗದ ಖ್ಯಾತ ತಾರೆ ಮಧುಬಾಲ ಜೀವನ ನಾಟಕದ ಸಿನಿಮಾದಲ್ಲಿ ನಿರ್ಮಾಣ ಆಗುತ್ತಿದೆ, ನಟಿ ಸಾಯಿ ಪಲ್ಲವಿ, ಮಧುಬಾಲ ಅವರ ಪಾತ್ರದಲ್ಲಿ ನಟಿಸಲಿದ್ದಾರೆ. ಯಾವುದೇ ನಟಿಗಾದರೂ ಮಧುಬಾಲ ಅಂಥಾ ಲಿಜೆಂಡರಿ ನಟಿಯ ಪಾತ್ರದಲ್ಲಿ ನಟಿಸುವುದು ಕನಸೇ ಸರಿ. ಇದೀಗ ಸಾಯಿ ಪಲ್ಲವಿಗೆ ಆ ಅವಕಾಶ ಅರಸಿ ಬಂದಿದೆ.

ಸಿನಿಮಾದ ಮತ್ತೊಂದು ವಿಶೇಷವೆಂದರೆ ಲಿಜೆಂಡರಿ ಮಧುಬಾಲ ಜೀವನ ಆಧರಿತ ಸಿನಿಮಾ ನಿರ್ದೇಶಿಸುತ್ತಿರುವುದು ಬಾಲಿವುಡ್ ಸ್ಟಾರ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ. ಇವರ ನಿರ್ದೇಶನದ ಸಿನಿಮಾದಲ್ಲಿ ನಟಿಸಲು ಬಾಲಿವುಡ್‌ನ ದೊಡ್ಡ ಸೂಪರ್ ಸ್ಟಾರ್ ನಟ-ನಟಿಯರೇ ತುದಿಗಾಲಲ್ಲಿ ಕಾಯುತ್ತಾರೆ ಅಂಥಾಹುದರಲ್ಲಿ ಸಂಜಯ್ ಲೀಲಾ ಬನ್ಸಾಲಿ ದೊಡ್ಡ ಪ್ರಾಜೆಕ್ಟ್‌ಗೆ ಮತ್ತು ಅದೇ ದೊಡ್ಡ ಪಾತ್ರಕ್ಕೆ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡುವುದು ಸಾಮಾನ್ಯ ವಿಷಯವಲ್ಲ. ಈ ಪಾತ್ರಕ್ಕೆ ಕಿಯಾರಾ ಅಡ್ವಾಣಿ ಮತ್ತು ಅನಿತ್ ಪಡ್ಡಾ ಹೆಸರು ಕೇಳಿ ಬಂದಿತ್ತಂತೆ. ಆದರೆ ಸಾಯಿ ಪಲ್ಲವಿಯೇ ಈ ಪಾತ್ರಕ್ಕೆ ಫೈನಲ್ ಆಗಿದ್ದಾರೆ.

ಇದನ್ನೂ ಓದಿ:ಸಾಯಿ ಪಲ್ಲವಿ ಕೈತಪ್ಪಿದ ಮಧುಬಾಲಾ ಬಯೋಪಿಕ್ ಅವಕಾಶ: ಕಾರಣ ಏನು?

ಮಧುಬಾಲ ಪಾತ್ರದಲ್ಲಿ ನಟಿಸುತ್ತಿರುವ ಸಾಯಿ ಪಲ್ಲವಿ, ಇದೇ ಸಮಯದಲ್ಲಿ ಕನ್ನಡದ ಖ್ಯಾತ ಗಾಯಕಿ ಎಂಎಸ್ ಸುಬ್ಬಲಕ್ಷ್ಮಿ ಅವರ ಜೀವನ ಶೈಲಿಯ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಒಟ್ಟಿಗೆ ಇಬ್ಬರು ದಿಗ್ಗಜರು ಜೀವನ ಆಧರಿತ ಸಿನಿಮಾದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಇವುಗಳ ಜೊತೆಗೆ ಸಾಯಿ ಪಲ್ಲವಿ ಅಮಿರ್ ಖಾನ್ ಪುತ್ರ ಜುನೈದ್ ಖಾನ್ ಜೊತೆಗೆ ‘ಏಕ್ ದಿನ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ಅದರ ಜೊತೆಗೆ ರಣಬೀರ್ ಕಪೂರ್-ಯಶ್ ನಟನೆಯ ‘ರಾಮಾಯಣ’ ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *