
ಬೆಂಗಳೂರು, ಮಾರ್ಚ್ 14: ರಾಜ್ಯದಲ್ಲಿ ಈ ವರ್ಷದ ಕಾಲ ಆರಂಭವಾಗಿದೆ. ಸಿಲಿಕಾನ್ ಸಿಟಿಯಲ್ಲಿ ಜನರಿಗೆ ಬಿಸಿಲು (ಉಷ್ಣ ಅಲೆ) ಕಾಡೋದಕ್ಕೆ ಶುರುವಾಗಿದೆ. ಹೇಗೋ ಬಿಸಿಲನ್ನು ತಡೆದುಕೊಂಡು ಇರುವ ಜನರಿಗೆ ಮುಂದಿನ ದಿನದಲ್ಲಿ ಸೂರ್ಯ ಮತಷ್ಟು ಸುಡಲಿದ್ದಾನೆ. ಹೀಗಂತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜೊತೆಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಕೂಡ ನೀಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನದ ಎಚ್ಚರಿಕೆ
ಅಲ್ಲಿ ಪ್ರಾರಂಭವಾಗಿದೆ. ದಿನನಿತ್ಯ ಬಿಸಿಲ ಧಗೆ ಹೆಚ್ಚುತ್ತಲೇ ಇದೆ. ಬೆಂಗಳೂರಿನ ಬಿಸಿಲಿಗೆ ಜನರು ತತ್ತರಿಸಿದ್ದಾರೆ. ಮನೆಗಳಲ್ಲಿ, ಕಛೇರಿಗಳಲ್ಲಿ ಏರ್ ಕೂಲರ್ಗಳನ್ನ ಹಾಕೊಂಡು ಕೂರುವ ಪರಿಸ್ಥಿತಿ ಬೆಂಗಳೂರಿನಲ್ಲಿದೆ. ಹೀಗಿರುವಾಗ ಮುಂದಿನ ದಿನದಲ್ಲಿ ಬೆಂಗಳೂರಿನಲ್ಲಿ ಇರ್ಬೇಕಾ ಅನ್ನೋ ಮಟ್ಟಿಗೆ ಬಿಸಿಲು ಕಾಡಲಿದೆ.
ಇದನ್ನೂ ಓದಿ: ಈ ಭಾಗದ ಜನರಿಗೆ ದೊಡ್ಡ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ: ಮಧ್ಯಾಹ್ನ ಹೊರಗೆ ಹೋಗುವ ಮುನ್ನ ಎಚ್ಚರ!
ಸಿಲಿಕಾನ್ ಸಿಟಿ ಜನರೇ ಎಚ್ಚರದಿಂದ ಇರಿ, ಕೂಲ್ ಸಿಟಿ ಅಂತಾನೇ ಕರೆಸಿಕೊಳ್ಳುವ ರಾಜಧಾನಿ ಬೆಂಗಳೂರು ಸದ್ಯ ಹಾಟ್ ಸಿಟಿಯಾಗಿ ಬದಲಾಗಿದೆ. ಕಳೆದ ಒಂದು ವಾರದಿಂದ ರಾಜಧಾನಿಯಲ್ಲಿ ತಾಪಮಾನ ಏರಿಕೆ ಹಿನ್ನಲೆ ಎಂಥಾ ಸೆಕೆ ಅಂತ ಸಿಟಿ ಜನ ಶಾಪ್ ಹಾಕೋಕ್ಕೆ ಶುರು ಮಾಡಿದೆ. ಸದ್ಯದಲ್ಲಿ 33 ರಿಂದ 34 ಡಿಗ್ರಿ ತಾಪಮಾನ ದಾಖಲಾಗುತ್ತಿದೆ. ಯುಗದ ಹಬ್ಬದ ನಂತರ ಮಾರ್ಚ್ 3 ನೇ ವಾರದ ನಂತರ 38-39 ಡಿಗ್ರಿ ತಲುಪಲಿದೆ ಬೆಂಗಳೂರಿನ ತಾಪಮಾನದ ಏರಿಕೆ. ಈ ಹಿನ್ನೆಲೆ ಹವಮಾನ ಇಲಾಖೆ ಸೂಚನೆ ನೀಡಿದ್ದು, ಸಿಲಿಕಾನ್ ಸಿಟಿ ಜನರಿಗೆ ಬಿಸಿಲು ಕಾಡಲಿದೆ.
ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ
ಇತ್ತ ಹವಾಮಾನ ಇಲಾಖೆ ಸೂಚನೆ ಬೆನ್ನಲ್ಲೇ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ತಾಪಮಾನ ಏರಿಕೆ ಹಿನ್ನಲೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಬಿಸಿಲು ಹೆಚ್ಚಿರುವಾಗ ಏನು ಮಾಡಬೇಕು, ಏನು ಮಾಡಬಾರದು ಅಂತ ಜಾಗೃತಿಗೆ ಗೈಡ್ ಲೈನ್ಸ್ ನೀಡಿದೆ. ಇನ್ನು ಉರಿಯುವ ಬಿಸಿಲಿಗೆ ಹೀಟ್ ಸ್ಟ್ರೋಕ್ ಭೀತಿ ಒಂದು ಕಡೆಯಾದರೆ, ಖಾಯಿಲೆಗಳ ಏರಿಕೆಯ ಆತಂಕ ಶುರುವಾಗಿದೆ. ತಾಪಮಾನ ಏರಿಕೆ ಬೆನ್ನಲ್ಲೇ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆಗೆ ಮುಂದಾಗಿದೆ.
ಹೀಟ್ ಸ್ಟ್ರೋಕ್ ಬಗ್ಗೆ ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ. ಬೆಳಗ್ಗೆ 11 ರಿಂದ ಸಂಜೆ 4 ಗಂಟೆಯ ಬಗ್ಗೆ ಗಮನ ಇರಲಿ. ಕಳೆದ ವರ್ಷಕ್ಕೆ ಈ ವರ್ಷ ಬೆಂಗಳೂರು ಮತ್ತಷ್ಟು ಹಾಟ್ ಆಗಲಿದೆ. ಹೀಗಾಗಿ ಹೈ ಬಿಪಿ, ಹೃದಯ ಸಂಬಂಧಿ ಖಾಯಿಲೆ ಇರುವವರು, ಗರ್ಭಿಣಿಯರು, ವೃದ್ಧರು ಮತ್ತು ಮಕ್ಕಳು ಬಿಸಿಲಿಗೆ ಮೈ ಒಡ್ಡದಂತೆ ಎಚ್ಚರಿಕೆ ನೀಡಿದ್ದಾರೆ.
ವೈದ್ಯರ ಸಲಹೆ ಏನು?
ದೇಹದ ಉಷ್ಣತೆಯು 40 C ಅಥವಾ ಅದಕ್ಕಿಂತ ಹೆಚ್ಚು ಏರಿದರೆ ಅತ್ಯಂತ ಗಂಭೀರ ಸಮಸ್ಯೆ ಎದುರಾಗುವ ಸಂಭವವಿದೆ. ಕೆಲವು ಸಂದರ್ಭಗಳಲ್ಲಿ ಹೀಟ್ ಸ್ಟ್ರೋಕ್ ಕೂಡ ಇರಬಹುದು, ಇದು ಜೀವಕ್ಕೆ ಕುತ್ತು ತರುವ ಸಾಧ್ಯತೆಯಿದೆ. ಹೀಗಾಗಿ ತಾಪಮಾನ ಇಳಿಕೆಯವರೆಗೂ 11 ರಿಂದ 4 ಗಂಟೆಯವರೆಗೂ ಬಿಸಿಲಿಗೆ ಮೈ ಒಡ್ಡದೆ ವೈದ್ಯರು ಸಲಹೆ ನೀಡುತ್ತಿದ್ದಾರೆ. ಜೊತೆಗೆ ಹೆಚ್ಚಾಗಿ ನೀರು, ತಂಪು ಪಾನೀಯಗಳು ಸೇರಿದಂತೆ ನಿರ್ಜಲೀಕರಣ ಆಗದಿರುವ ಆಹಾರವನ್ನ ಹೆಚ್ಚಾಗಿ ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ.
ಇದನ್ನೂ ಓದಿ: ಬೆಂಗಳೂರು ವಾಯು ಗುಣಮಟ್ಟ: ಮೈಸೂರಿನಲ್ಲಿ ಮತ್ತಷ್ಟು ಹದಗೆಟ್ಟ ಏರ್ ಕ್ವಾಲಿಟಿ
ಒಟ್ಟಿನಲ್ಲಿ ಈ ವರ್ಷ ಕೂಡ ಮಂದಿಗೆ ಬೇಸಿಗೆಯ ಧಗೆ ಕಾಡಲಿದೆ, ಜನರು ಬಿಸಿಲಿನಿಂದ ಬೆಂಗಳೂರಿನ ಆರೋಗ್ಯದ ಸಮಸ್ಯೆಯಿಂದ ದೂರ ಇರಲು ಹೆಚ್ಚು ಗಮನ ಹರಿಸಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.