ಚಿಕ್ಕಮಗಳೂರು: ಕಾರಿನ ಮೇಲೆ ಉರುಳಿದ ಲಾರಿ, ಮುಂದೇನಾಯ್ತು?

ಚಿಕ್ಕಮಗಳೂರು: ಕಾರಿನ ಮೇಲೆ ಉರುಳಿದ ಲಾರಿ, ಮುಂದೇನಾಯ್ತು?



ಚಿಕ್ಕಮಗಳೂರು: ಕಾರಿನ ಮೇಲೆ ಉರುಳಿದ ಲಾರಿ, ಮುಂದೇನಾಯ್ತು?
ಚಿಕ್ಕಮಗಳೂರು ಹೊರವಲಯದ ಲಕ್ಯಾ ಕ್ರಾಸ್ ಬಳಿ ಕಟ್ಟಿಗೆ ತುಂಬಿದ ಲಾರಿಯೊಂದು ಕಾರಿನ ಮೇಲೆ ಉರುಳಿಬಿದ್ದು ಭೀಕರ ಅಪಘಾತ ಸಂಭವಿಸಿದೆ. ಕಾರಿನೊಳಗೆ ಸಿಲುಕಿದ್ದ ದಂಪತಿ ಮತ್ತು ಮಗುವನ್ನು ಸ್ಥಳೀಯರು ರಕ್ಷಿಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.<img><p>ಚಿಕ್ಕಮಗಳೂರು: ಚಿಕ್ಕಮಗಳೂರು ಹೊರವಲಯದ ಲಕ್ಯಾ ಕ್ರಾಸ್ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಕಾರಿನ ಮೇಲೆ ಕಟ್ಟಿಗೆ ತುಂಬಿದ ಲಾರಿಯೊಂದು ಉರುಳಿ ಬಿದ್ದಿದೆ.</p><img><p>ಕಟ್ಟಿಗೆ ತುಂಬಿದ ಲಾರಿ ಕಾರಿನ ಮೇಲೆ ಉರುಳಿ ಬಿದ್ದಿದ್ದರಿಂದ ಕಾರಿನೊಳಗಿದ್ದ ದಂಪತಿ ಮತ್ತು ಮಗು ಒಳಗೆ ಸಿಲುಕಿದ್ದರು. ಆದರೆ ಸ್ಥಳೀಯರ ಸಹಾಯದಿಂದ ಅವರನ್ನು ರಕ್ಷಣೆ ಮಾಡಲಾಗಿದೆ.</p><img><p>ಅದೃಷ್ಟವಶಾತ್ ದಂಪತಿ ಮತ್ತು ಮಗು ದೊಡ್ಡ ಅನಾಹುತದಿಂದ ಪಾರಾಗಿದ್ದಾರೆ ಘಟನೆಯಿಂದಾಗಿ ಈ ಮಾರ್ಗದಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು, ಲಾರಿ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ.</p><img><p>ಈ ಲಾರಿ ಕಟ್ಟಿಗೆ ತುಂಬಿಸಿಕೊಂಡು ಕಡೂರಿನಿಂದ ಚಿಕ್ಕಮಗಳೂರಿಗೆ ಬರುತ್ತಿತ್ತು. ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.</p>



Source link

Leave a Reply

Your email address will not be published. Required fields are marked *