
ಬಹುಭಾಷಾ ನಟ ಆರ್. ಮಾಧವನ್ ಅವರ ಹೆಸರಿನಲ್ಲಿ ಕಿಡಿಗೇಡಿ ನಕಲಿ ಸೋಶಿಯಲ್ ಮೀಡಿಯಾ (ನಕಲಿ ಖಾತೆ) ಖಾತೆಯನ್ನು ತೆರೆದು ಜನರ ದಾರಿ ತಪ್ಪಿಸಿದ್ದಾನೆ. ಈ ವಿಷಯದ ಬಗ್ಗೆ ತಮ್ಮ ಮಾಧವನ್ ಅವರ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಅಭಿಮಾನಿಗಳಿಗೆ ಎಚ್ಚರಿಕೆ ನೀಡಲಾಗಿದೆ. ತಮ್ಮ ಹೆಸರನ್ನು ಜನರನ್ನು ಸಂಪರ್ಕಿಸುತ್ತಿರುವ ಈ ವ್ಯಕ್ತಿಯೊಂದಿಗೆ ತಮಗಾಗಲಿ ಅಥವಾ ತಮ್ಮ ತಂಡಕ್ಕಾಗಲಿ ಯಾವುದೇ ಸಂಬಂಧವಿಲ್ಲ ಎಂದು ಮಾಧವನ್ (ಆರ್. ಮಾಧವನ್) ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪೋಸ್ಟ್ ಮಾಡಿರುವ ಮಾಧವನ್ ಅವರು, ‘ಇದು ವಂಚನೆಯ ಖಾತೆ. ಈ ವ್ಯಕ್ತಿ ನನ್ನ ಅಥವಾ ನನ್ನ ತಂಡದ ಪರವಾಗಿ ಮಾತನಾಡುತ್ತಿಲ್ಲ. ಇನ್ಸ್ಟಾಗ್ರಾಮ್ ಅಥವಾ ಯಾವುದೇ ಸೋಶಿಯಲ್ ಮೀಡಿಯಾದಲ್ಲಿ ನನ್ನ ಪರವಾಗಿ ಮಾತನಾಡಲು ಬೇರೆ ಯಾವುದೇ ಖಾತೆಗಳಿಲ್ಲ. ದಯವಿಟ್ಟು ಇಂತಹ ಖಾತೆಗಳ ಬಗ್ಗೆ ಜಾಗರೂಕರಾಗಿರಿ” ಎಂದು ಬರೆದುಕೊಂಡಿದ್ದಾರೆ.
Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ
ಅಭಿಮಾನಿಗಳು ಮೋಸ ಹೋಗಬಾರದು ಎಂಬ ಉದ್ದೇಶದಿಂದ ಮಾಧವನ್ ಅವರು ನಕಲಿ ಖಾತೆಯ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಈ ಕೃತ್ಯ ಎಸಗಿದವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲು ಅವರು ಮುಂದಾಗಿದ್ದಾರೆ. ಇಂಥ ಸೋಶಿಯಲ್ ಮೀಡಿಯಾ ಖಾತೆಗಳನ್ನು ನಂಬಿ ಜನರು ಮೋಸ ಹೋಗುವ ಸಾಧ್ಯತೆ ಇರುತ್ತದೆ. ಇಲ್ಲ ಮಾಧವನ್ ಮೊದಲೇ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಆರ್. ಮಾಧವನ್ ಖರೀದಿಸಿದ ಹೊಸ ಬಂಗಲೆ ಬೆಲೆ ಬರೋಬ್ಬರಿ 17.5 ಕೋಟಿ ರೂಪಾಯಿ
ಸಿನಿಮಾ ವಿಚಾರಕ್ಕೆ ಬರುವುದಾದರೆ, ಮಾರ್ಚ್ 19ರಂದು ರಿಲೀಸ್ ಆಗುತ್ತಿರುವ ‘ಧುರಂಧರ 2’ ಚಿತ್ರದಲ್ಲಿ ಆರ್. ಮಾಧವನ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರು ಇಂಟೆಲಿಜೆನ್ಸ್ ಬ್ಯೂರೋ ಮುಖ್ಯಸ್ಥ ಅಜಯ್ ಸಾನ್ಯಾಲ್ ಎಂಬ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಮೊದಲ ಭಾಗದಲ್ಲಿ ಅವರ ನಟನೆಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು, ಈಗ ಎರಡನೇ ಭಾಗದ ಮೇಲೂ ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆಯಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.